ETV Bharat / state

ಪುತ್ತೂರಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ - putturu

2019ರಿಂದ ಆರೋಪಿ ರಾಜು ಹೊಸ್ಮಠನಿಗೆ ಸಂತ್ರಸ್ತೆಯ ಪರಿಚಯವಿದೆ ಎನ್ನಲಾಗಿದೆ. ಆತ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆತನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

sexual harassment case
ಪುತ್ತೂರು ಮಹಿಳಾ ಪೊಲೀಸ್‌ ಠಾಣೆ
author img

By

Published : Nov 8, 2021, 3:56 PM IST

ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಇಲ್ಲಿನ ಅಂಬೇಡ್ಕರ್‌ ಅಪತ್ಬಾಂಧವ ಟ್ರಸ್ಟ್​ ಅಧ್ಯಕ್ಷನ ವಿರುದ್ದ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ರಾಜು ಹೊಸ್ಮಠ ಕಿರುಕುಳ ನೀಡಿದ ಆರೋಪಿಯಾಗಿದ್ದು, ಈತನ ವಿರುದ್ಧ ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಪೊಕ್ಸೊ ಕಾಯ್ದೆಯನ್ವಯ ಸಂತ್ರಸ್ತೆಯ ಮಾಹಿತಿ ನೀಡುವಂತಿಲ್ಲ)

sexual harassment case
ಆರೋಪಿ ರಾಜು ಹೊಸ್ಮಠ

ಮೂಲತಃ ಕೌಡಿಚ್ಚಾರ್‌ನವರಾದ ಸಂತ್ರಸ್ತೆಯ ಕುಟುಂಬ ಸದ್ಯ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. 2019ರಿಂದ ಆರೋಪಿ ರಾಜು ಹೊಸ್ಮಠಗೆ ಸಂತ್ರಸ್ತೆಯ ಪರಿಚಯವಿದೆ ಎನ್ನಲಾಗಿದೆ. ಆರೋಪಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆತನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಸಂತ್ರಸ್ತೆ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.