ಬಂಟ್ವಾಳ: ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಕನಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ-ಪುತ್ತೂರು ರಸ್ತೆಯ ಮನೆಯೊಂದರಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಲ್ಲಿಗೆ ಪುತ್ತೂರು ಮೂಲದ ಹನ್ನೊಂದು ವರ್ಷದ ಬಾಲಕ ಮದುವೆಯ ಮೆಹೆಂದಿ ಕಾರ್ಯಕ್ರಮದ ದಿನ ಆಗಮಿಸಿದ್ದ. ಇಲ್ಲಿಗೆ ಕಬಕ ಮೂಲದ ಹಮೀದ್ ಯಾನೆ ಮೌಲ ಅಮ್ಮಿ ಎಂಬಾತ ಕೂಡಾ ಬಂದಿದ್ದ. ಈ ಸಂದರ್ಭ ಬಾಲಕನನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನೀಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಬಾಲಕ ಮನೆಯಲ್ಲಿ ತಿಳಿಸಿದ್ದು, ಬಳಿಕ ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ಹಮೀದ್ ಯಾನೆ ಮೌಲ ಅಮ್ಮಿ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಭಾನುವಾರ ಪೊಕ್ಸೋ ಪ್ರಕರಣ ದಾಖಲಾಗಿದೆ.