ETV Bharat / state

ಪವರ್ ಸ್ಟಾರ್ ಭರವಸೆಯೊಂದಿಗೆ ಬದುಕು ಸಾಗಿಸುತ್ತಿದೆ ಬಡ ಪೋಷಕ ನಟನ ಕುಟುಂಬ

ಇತ್ತೀಚೆಗಷ್ಟೇ ತೆರೆಕಂಡ ಯುವರತ್ನ ಸಿನಿಮಾ ನೀವೆಲ್ಲಾ ನೋಡಿರ್ತೀರಾ.. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಪುನೀತ್​ ವೃದ್ದನೋರ್ವನನ್ನು ಅಪ್ಪಿಕೊಳ್ಳುತ್ತಾರೆ.. ಈ ದೃಶ್ಯ ಬಹಳ ವೈರಲ್​ ಆಗಿತ್ತು. ಈ ದೃಶ್ಯದಲ್ಲಿರುವ ವ್ಯಕ್ತಿ ಯಾರು ಅವರ ಹಿನ್ನೆಲೆ ಏನು? ನಿಜ ಜೀವನದಲ್ಲಿ ಅಪ್ಪುಗೂ ಅವರಿಗೂ ಏನು ಸಂಬಂಧ? ಪುನೀತ್​ ನೀಡಿದ ಭರವಸೆ ಏನು ಅಂತೀರಾ..

ಎಂ.ಕೆ.ಮಠ
ಎಂ.ಕೆ.ಮಠ
author img

By

Published : Apr 14, 2021, 11:09 PM IST

Updated : Oct 29, 2021, 3:03 PM IST

ಉಪ್ಪಿನಂಗಡಿ(ದ.ಕ): ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ಯುವರತ್ನ ಸಿನಿಮಾದ ಕ್ಲೈಮಾಕ್ಸ್​ನಲ್ಲಿ ಹಿರಿಯ ನಟರೊಬ್ಬರನ್ನು ತಬ್ಬಿಕೊಳ್ಳುತ್ತಾರೆ. ಈ ದೃಶ್ಯಗಳು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಈ ಪೋಷಕ ನಟನ ಇಂದಿನ ಸ್ಥಿತಿ ತುಂಬಾ ಶೋಚನೀಯವಾಗಿದೆ. ಆದರೆ, ಅಂದು ಪವರ್ ಸ್ಟಾರ್ ಪುನೀತ್ ಅವರು ಇವರಿಗೊಂದು ಭರವಸೆ ನೀಡುತ್ತಾರೆ. ಆ ಭರವಸೆಯೊಂದಿಗೆ ಈ ಪೋಷಕ ನಟನ ಜೀವನ ಸಾಗುತ್ತಿದೆ.

ಇವರ ಹೆಸರು ಎಂ.ಕೆ.ಮಠ. ಉಪ್ಪಿನಂಗಡಿಯ ಕೂಟೇಲು ಸಮೀಪದ ನಿವಾಸಿ. ಇವರು ತಮ್ಮ ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದಾರೆ. ರಂಗಭೂಮಿಯಲ್ಲಿ 32 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು, ಪ್ರಸಿದ್ಧ ನಿರ್ದೇಶಕ ಹಾಗೂ ಕಲಾವಿದ ನಾಗಾಭರಣರ ಜೊತೆಗೆ 16 ವರ್ಷಗಳ ಕಾಲ ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಇವರಿಗಿದೆ. ನಾಗಾಭರಣ ಅವರು ನಿರ್ದೇಶನ ಕ್ಷೇತ್ರದಿಂದ ಸ್ವಲ್ಪ ಹಿಂದೆ ಸರಿದಾಗ ಎಂ.ಕೆ ಮಠ ಅವರು ಅಭಿನಯ ಕ್ಷೇತ್ರಕ್ಕೆ ಪ್ರವೇಶಿಸಿದರು.

2008-09 ಸಾಲಿನ ಕರ್ನಾಟಕ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗಗ್ಗರ ಚಿತ್ರಕ್ಕೆ ಎಂ.ಕೆ ಮಠ ರವರು ಪಡೆದುಕೊಂಡರು. ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​ ಅವರದು ಕಾಲೇಜು ರಕ್ಷಿಸುವ ಪಾತ್ರ. ಎಂ.ಕೆ.ಮಠ ಅವರದ್ದು, ಕಾಲೇಜಿನ ಬೆಲ್ ಬಾರಿಸುವ ವೃದ್ಧನ ಪಾತ್ರ. ಇಲ್ಲಿ ಪುನೀತ್ ರಾಜ್‍ಕುಮಾರ್ ಅವರು ಎಂ.ಕೆ ಮಠ ಅವರನ್ನು ಅಪ್ಪಿಕೊಳ್ಳುತ್ತಾರೆ. ಈ ಅಪ್ಪುಗೆಯು ವೀಕ್ಷಕರ ಹೃದಯವನ್ನು ಭಾಷ್ಪಗೊಳಿಸುತ್ತದೆ ಮಾತ್ರವಲ್ಲದೇ ಕಣ್ಣಾಲಿಗಳಲ್ಲಿ ಹನಿ ಮೂಡಿಸುತ್ತವೆ. ಅವರಿಬ್ಬರೂ ನಿಜವಾಗಿಯೂ ತಾತ ಮೊಮ್ಮಗ ತರಹ ಅನಿಸುತ್ತಿದ್ದರು. ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಿದ ಪವರ್ ಸ್ಟಾರ್ ಅಪ್ಪು ಬೆನ್ನಿಗೆ ಎಂ.ಕೆ.ಮಠ ನಿಂತರೆ, ಎಂ.ಕೆ ಮಠ ಅವರ ನಿಜ ಜೀವನದಲ್ಲಿ ಪುನೀತ್ ನಿಂತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಎಂ.ಕೆ ಮಠ ಅವರು ತನ್ನ ಅನುಭವಗಳನ್ನು ವಿವರಿಸಿದ್ದಾರೆ. ಯುವರತ್ನ ಸಿನಿಮಾ ಚಿತ್ರೀಕರಣದ ವೇಳೆ ಎಂ.ಕೆ.ಮಠ ಹಾಗೂ ಪುನೀತ್ ಅವರು ಆಪ್ತರಾಗಿದ್ದರು. ಬಿಡುವಿನ ವೇಳೆಯಲ್ಲಿ ಇಬ್ಬರೂ ಪರಸ್ಪರ ಮಾತನಾಡುತ್ತಿದ್ದರು. ಇದೇ ವೇಳೆ ಎಂ.ಕೆ.ಮಠ ಅವರಿಗೆ ಆರ್ಥಿಕವಾಗಿ ಬಹಳ ಸಮಸ್ಯೆ ಇದೆ ಎಂಬ ವಿಷಯ ಪುನೀತ್ ರಾಜ್​ಕುಮಾರ್​ಗೆ ತಿಳಿದಿತ್ತು. ಸಿನಿಮಾದಲ್ಲಿ ಬಡಪಾಯಿ ಜೀವಗಳ ಪರ ನಿಂತು ಕಾಪಾಡುವ ಅಪ್ಪು ಅವರು ನಿಜ ಜೀವನದಲ್ಲೂ ಅದನ್ನೇ ಮಾಡಿದ್ದಾರೆ ಎನ್ನಲಾಗಿದೆ. ತನಗೆ ವಾಸಕ್ಕೆ ಮನೆ ಇಲ್ಲ. ತನಗೊಂದು ಮನೆ ನಿರ್ಮಾಣಕ್ಕೆ ಸಹಾಯ ಮಾಡಬೇಕೆಂದು ಎಂ.ಕೆ ಮಠ ಮಾಡಿದ ಮನವಿಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ದೊಡ್ಮನೆ ಹುಡುಗ ಅಪ್ಪು ಅಭಯ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಕೊರೊನಾ ಮಾಹಾಮಾರಿಯ ನಂತರದಲ್ಲಿ ಪುನೀತ್ ಅವರ ಸಂಪರ್ಕ ಎಂ.ಕೆ ಮಠ ಅವರಿಗೆ ಸಾಧ್ಯವಾಗಲಿಲ್ಲ. ಆದರೂ ಅಪ್ಪು ನೀಡಿದ ಭರವಸೆಯೊಂದಿಗೆ ಯಾರಿಗೂ ತಿಳಿಸದೇ ಸಂಕಷ್ಟದಲ್ಲೂ ನಗುಮೊಗದೊಂದಿಗೆ ಗುಡಿಸಲಿನಲ್ಲಿ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ ಈ ಪೋಷಕ ನಟ.

Last Updated : Oct 29, 2021, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.