ETV Bharat / state

ಮಾಲೀಕನೆದುರೇ ಸ್ಕೂಟರ್​​ ದರೋಡೆ ; ದೂರು ದಾಖಲು - ಮೂಡುಬಿದಿರೆ ಸ್ಕೂಟರ್​​ ಕಳ್ಳತನ

ಈ ಸಂದರ್ಭದಲ್ಲಿ ಪೆಡ್ಡಿ ಡಾಯಸ್, ಮಗಳನ್ನು ಆರೋಪಿಯ ಕೈಯಿಂದ ಬಿಡಿಸಿಕೊಳ್ಳುವ ವೇಳೆ ಆರೋಪಿ ತಂದೆ-ಮಗಳನ್ನು ದೂಡಿ ಸ್ಕೂಟರ್ ದರೋಡೆ ಮಾಡಿ ಕಾರ್ಕಳದ ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾನೆಂದು ಆರೋಪಿಸಲಾಗಿದೆ..

scooter theft in moodbidire; case registerd
ಮಾಲೀಕನೆದುರೇ ಸ್ಕೂಟರ್​​ ದರೋಡೆ; ದೂರು ದಾಖಲು
author img

By

Published : Nov 14, 2020, 7:05 AM IST

ಮಂಗಳೂರು : ಮಾಲೀಕನೆದುರೇ ಸ್ಕೂಟರ್​​ ದರೋಡೆ ನಡೆಸಿ ವ್ಯಕ್ತಿ ಪರಾರಿಯಾದ ಘಟನೆ ಮೂಡುಬಿದಿರೆ ಸಮೀಪದ ಬನ್ನಡ್ಕ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಪೆಡ್ಡಿ ಡಾಯಸ್ ಎಂಬುವರು ತಮ್ಮ ಮಗಳೊಂದಿಗೆ ಸ್ಕೂಟರ್​​ನಲ್ಲಿ ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ವಾಪಸ್ ಮನೆಗೆ ಹಿಂದಿರುಗುತ್ತಿದ್ದರು.‌ ಸಂಜೆ 5.15ರ ಸುಮಾರಿಗೆ ಬನ್ನಡ್ಕ ತಲುಪುತ್ತಿದ್ದಂತೆ ಅಪರಿಚಿತ ವ್ಯಕ್ತಿಯೋರ್ವ ದೋಸೆಯ ತವಾ ಹಿಡಿದು ಸ್ಕೂಟರ್​​ಗೆ ಅಡ್ಡಗಟ್ಟಿದ್ದಾನೆ. ಅಷ್ಟೇ ಅಲ್ಲ, ಪೆಡ್ಡಿ ಡಾಯಸ್ ಅವರ ತಲೆಗೆ ಹೆಲ್ಮೆಟ್ ಮೇಲಿನಿಂದಲೇ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇನ್ನೂ ಸ್ಕೂಟರ್ ಹಿಂಬದಿ ಸವಾರೆಯಾಗಿದ್ದ ಪೆಡ್ಡಿ ಡಾಯಸ್ ಅವರ ಮಗಳ ಮೈಮುಟ್ಟಿ ಬಲವಂತವಾಗಿ ಕೈಯನ್ನು ಎಳೆದಾಡಿದ್ದಾನೆ. ಈ ಸಂದರ್ಭದಲ್ಲಿ ಪೆಡ್ಡಿ ಡಾಯಸ್, ಮಗಳನ್ನು ಆರೋಪಿಯ ಕೈಯಿಂದ ಬಿಡಿಸಿಕೊಳ್ಳುವ ವೇಳೆ ಆರೋಪಿ ತಂದೆ-ಮಗಳನ್ನು ದೂಡಿ ಸ್ಕೂಟರ್ ದರೋಡೆ ಮಾಡಿ ಕಾರ್ಕಳದ ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾನೆಂದು ಆರೋಪಿಸಲಾಗಿದೆ.

ಸದ್ಯ ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ತನಿಖೆ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.