ETV Bharat / state

ಕೊರೊನಾ ಬಳಿಕ ಬ್ಯಾಂಕ್​​ನಲ್ಲಿ ಶೇ. 11ರಷ್ಟು ಠೇವಣಿ ಹೆಚ್ಚಳ : ವಾಹನ ಸಾಲಕ್ಕೂ ಡಿಮ್ಯಾಂಡ್ - ಎಸ್​​ ಸಿಡಿಸಿಸಿ ಬ್ಯಾಂಕ್​​ನಲ್ಲಿ ಕೊರೊನಾ ಬಳಿಕ ಠೇವಣಿ ಹೆಚ್ಚಳ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಲ್ಲಿ ಕೋವಿಡ್​-19 ತರುವಾಯ ಠೇವಣಿ ಸಂಗ್ರಹದಲ್ಲಿ ಶೇ.11 ರಷ್ಟು ಹೆಚ್ಚಳವಾಗಿದ್ದು, ವಾಹನ ಸಾಲಕ್ಕೆ ಸಹ ಬೇಡಿಕೆ ಹೆಚ್ಚಾಗಿದೆ ಎಂದು ಎಸ್​​ ಸಿಡಿಸಿಸಿ ಬ್ಯಾಂಕ್​​ನ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ..

SCDCC  bank deposits increases 11% after corona
ಕೊರೊನಾ ಬಳಿಕ ಬ್ಯಾಂಕ್​​ನಲ್ಲಿ ಶೇ. 11ರಷ್ಟು ಠೇವಣಿ ಹೆಚ್ಚಳ
author img

By

Published : Nov 13, 2020, 4:59 PM IST

ಮಂಗಳೂರು ; ಕೊರೊನಾ ಬಳಿಕ ಮತ್ತೊಮ್ಮೆ ಎಸ್ ಸಿಡಿಸಿಸಿ (ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಪುಟಿದೆದ್ದಿದ್ದು , ಕಳೆದ ವರ್ಷಕ್ಕಿಂತ 11 ಶೇ.11 ರಷ್ಟು ಹೆಚ್ಚು ಠೇವಣಿ ಸಂಗ್ರಹವಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಕೊರೊನಾ ಬಳಿಕ ಬ್ಯಾಂಕ್​​ನಲ್ಲಿ ಶೇ. 11ರಷ್ಟು ಠೇವಣಿ ಹೆಚ್ಚಳ
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್​ನಲ್ಲಿ ಠೇವಣಿ ಇಡುವವರ ಸಂಖ್ಯೆ ಜಾಸ್ತಿಯಾಗಿದೆ. ಸಾಲ ವಸೂಲಾತಿಯು ಉತ್ತಮವಾಗಿದೆ ಎಂದರು. ಇನ್ನು, ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಲು ಹಿಂದೇಟು ಹಾಕುವವರು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಖರೀದಿಸುತ್ತಿದ್ದು, ಇದರಿಂದಾಗಿ ವಾಹನ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರು.

ಅಕ್ಟೋಬರ್ 15 ರಂದು ಮಂಗಳೂರಿನ ಕೊಡಿಯಾಲ್ ಬೈಲ್​ನ ಟಿ.ವಿ. ರಮಣ ಪೈ ಕನ್ವೆನ್ಷನ್ ಹಾಲ್​​ನಲ್ಲಿ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಉದ್ಘಾಟಿಸಲಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.