ETV Bharat / state

ಆಂಜನೇಯ ಮೂರ್ತಿಗೆ ಪುಷ್ಪಾರ್ಚನೆಗೈದು ಹನುಮಾನ್ ಚಾಲೀಸಾ ಪಠಿಸಿದ ಸಂಸದೆ ಸಾಧ್ವಿ ಪ್ರಜ್ಞಾ.. - ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಸಾಧ್ವಿ

ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಸಾಧ್ವಿ ಅವರು ಮುಂಚಿತವಾಗಿ ಪುತ್ತೂರಿಗೆ ಆಗಮಿಸಿದ್ದರು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಸಮಾಜೋತ್ಸವ ಕಾರ್ಯಕ್ರಮವೂ ರದ್ದಾಗಿದೆ. ಆದ್ದರಿಂದ ಅವರು ಬಯಲು ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು.

kn_mng_01_sadvi_prajna_sing_meet_puttur_script_kac10010
ಆಂಜನೇಯ ಮೂರ್ತಿಗೆ ಪುಷ್ಪಾರ್ಚನೆಗೈದು ಹನುಮಾನ್ ಚಾಲೀಸ ಪಠಿಸಿದ ಸಂಸದೆ ಸಾಧ್ವಿ ಪ್ರಜ್ಞಾ....!
author img

By

Published : Mar 14, 2020, 8:33 PM IST

ಪುತ್ತೂರು: ವಿಟ್ಲದಲ್ಲಿ ಮಾ.15ರಂದು ನಡೆಯಬೇಕಾಗಿದ್ದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಲೆಂದು ಆಗಮಿಸಿರುವ ಭೋಪಾಲ್ ಕ್ಷೇತ್ರದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಇಂದು ನೆಲಪ್ಪಾಲ್ ಬಯಲು ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಆಂಜನೇಯ ಮೂರ್ತಿಗೆ ಪುಷ್ಪಾರ್ಚನೆಗೈದು ಹನುಮಾನ್ ಚಾಲೀಸಾ ಪಠಿಸಿದ ಸಂಸದೆ ಸಾಧ್ವಿ ಪ್ರಜ್ಞಾ..

ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಸಾಧ್ವಿ ಅವರು ಮುಂಚಿತವಾಗಿ ಪುತ್ತೂರಿಗೆ ಆಗಮಿಸಿದ್ದರು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಸಮಾಜೋತ್ಸವ ಕಾರ್ಯಕ್ರಮವೂ ರದ್ದಾಗಿದೆ. ಆದ್ದರಿಂದ ಅವರು ಬಯಲು ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಳಿಕ ಆಂಜನೇಯ ಮೂರ್ತಿಗೆ ಪುಷ್ಪಾರ್ಚನೆಗೈದು ಹನುಮಾನ್ ಚಾಲೀಸಾ ಪಠಿಸಿ ಆರತಿಯೆತ್ತಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಬಜರಂಗ ದಳದ ಪ್ರಾಂತ ಸಂಯೋಜಕ ಮುರಲೀಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷದ್‌ನ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಹಾಗೂ ಮತ್ತಿತರರು ಭಾಗವಹಿಸಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.