ETV Bharat / state

ಸುಳ್ಯ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ: ಎಸ್.ಅಂಗಾರ - ETV Bharat kannada News

ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಕೆಲಸ ಆರಂಭಿಸಲಾಗಿದೆ ಎಂದು ಎಸ್​.ಅಂಗಾರ ಹೇಳಿದರು.

Minister S. Angara
ಸಚಿವ ಎಸ್.ಅಂಗಾರ
author img

By

Published : Apr 9, 2023, 7:37 PM IST

ಎಸ್. ಅಂಗಾರ ಹೇಳಿಕೆ

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ ನಿಗದಿಯಾಗಿದ್ದು, ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷ ಈಗಾಗಲೇ ಕೆಲಸ ಕಾರ್ಯಗಳನ್ನು ಆರಂಭಿಸಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸುಳ್ಯ ಸೇರಿದಂತೆ ಇಡೀ ರಾಜ್ಯದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಅಂಗಾರ ಸ್ಪಷ್ಟಪಡಿಸಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಮ್ಮತದಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಹಿಂದಿನ ಬಿಜೆಪಿ ಆಡಳಿತದ ಅಭಿವೃದ್ಧಿ ಕೆಲಸಗಳನ್ನು ಜನತೆ ಮೆಚ್ಚಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. 135ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ : 'ರಾಜಕೀಯ ಪಕ್ಷದವರಿಗೆ ಪ್ರವೇಶವಿಲ್ಲ' ಗಮನ ಸೆಳೆಯುತ್ತಿದೆ ಗೇಟಿಗೆ ಅಳವಡಿಸಲಾಗಿರುವ ಬ್ಯಾನರ್

ಪಾರ್ಟಿ ನಿರ್ಧಾರಕ್ಕೆ ಬದ್ದ: ಏ.11ರ ಬಳಿಕ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದ್ದು, ಸುಳ್ಯಕ್ಕೆ ಸಂಬಂಧಿಸಿದಂತೆ ಆಕಾಂಕ್ಷಿಗಳಿದ್ದಾರೆ. ಸ್ಪರ್ಧೆಗೆ ಆಕಾಂಕ್ಷೆಯನ್ನು ಯಾರೂ ವ್ಯಕ್ತಪಡಿಸಬಹುದು. ಆದರೆ ನಿರ್ಧಾರವನ್ನು ಪಾರ್ಟಿ ಮಾಡಲಿದ್ದು, ನಾವೆಲ್ಲ ಬದ್ಧರಾಗಿದ್ದೇವೆ ಎಂದು ಎಸ್​.ಅಂಗಾರ ತಿಳಿಸಿದರು.

S. Angara performed  Tulabhara.
ತುಲಾಭಾರ ಸೇವೆ

ತುಲಾಭಾರ ಸೇವೆ: ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿದ ಅಂಗಾರ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ನವಧಾನ್ಯಗಳಿಂದ ತುಲಾಭಾರ ಸೇವೆ ನೆರವೇರಿಸಿದರು. ಈ ಹಿಂದೆ ಸಲ್ಲಿಸಿದ್ದ ಹರಕೆಯಂತೆ ತುಲಾಭಾರ ಸೇವೆ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ. ಹೊಸಳಿಗಮ್ಮನ ದರ್ಶನವನ್ನೂ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ.

ಇದನ್ನೂ ಓದಿ : ಮೂಡುಬಿದಿರೆಯಲ್ಲಿ ಮೋಡಿ ಮಾಡ್ತಾರಾ ಮಿಥುನ್ ರೈ?... ಬಿಜೆಪಿ ಟಿಕೆಟ್​ ಯಾರಿಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.