ETV Bharat / state

ಮೂರನೇ ತ್ರೈಮಾಸಿಕ ಅವಧಿಯಲ್ಲಿ MRPL​ಗೆ 71 ಕೋಟಿ ರೂ ನಷ್ಟ - MPRL latest news

ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಎಂಆರ್​ಪಿಎಲ್​ಗೆ 71 ಕೋಟಿ ನಷ್ಟವುಂಟಾಗಿದೆ ಎಂದು ಎಂಆರ್​ಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

manglore
ಎಂಆರ್​ಪಿಎಲ್​
author img

By

Published : Feb 2, 2021, 12:58 PM IST

ಮಂಗಳೂರು: ನಗರದ ಎಂಆರ್​ಪಿಎಲ್​ಗೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ 71 ಕೋಟಿ ರೂ ನಷ್ಟವಾಗಿದೆ.

ಎಂಆರ್​​ಪಿಎಲ್ ಕಾರ್ಯಾಚರಣೆಯ ಈ ಹಣಕಾಸು ವರ್ಷದ ಒಟ್ಟು ವ್ಯವಹಾರ 14,136 ಕೋಟಿ ಆಗಿದೆ. ಕಳೆದ ಹಣಕಾಸು ಸಾಲಿನಲ್ಲಿ ಇದೇ ಅವಧಿಯಲ್ಲಿ 16,745 ಕೋಟಿ ಆಗಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ವಹಿವಾಟು ಇಳಿಕೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ (ಮೂರು ತ್ರೈಮಾಸಿಕ ಅವಧಿಯಲ್ಲಿ) ಎಂಆರ್​ಪಿಎಲ್​​ಗೆ ಒಟ್ಟು 555 ಕೋಟಿ ರೂ ನಷ್ಟವುಂಟಾಗಿದೆ.

ಹಿಂದಿನ‌ ನಿರ್ದೇಶಕ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಒಎನ್​ಜಿಸಿಯ ಸಹ ಸಂಸ್ಥೆಯಾದ ಒಎಂಪಿಎಲ್​​​ನ 124.66 ಈಕ್ವಿಟಿ ಶೇರುಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರಂತೆ 1216.73 ಕೋಟಿ ಹಣವನ್ನು ಒಎನ್​ಜಿಸಿಗೆ ಶೇರು ಖರೀದಿಗಾಗಿ ಪಾವತಿಸಲಾಗಿದೆ.

ಇದನ್ನೂ ಓದಿ: ಮಕ್ಕಳಿಗೆ ಅಗತ್ಯವಿರುವ ನ್ಯುಮೋಕೊಕಲ್ ಕುರಿತು ಬಜೆಟ್​ನಲ್ಲಿ ಪ್ರಸ್ತಾಪ: ಲಸಿಕೆಯ ಉಪಯೋಗವೇನು?

ಶೇರು ಖರೀದಿ ಒಪ್ಪಂದದಂತೆ ಒಎನ್​ಜಿಸಿಗೂ 124.66 ಕೋಟಿ ಶೇರುಗಳನ್ನು ಒಎಂಪಿಎಲ್​​ನಿಂದ ಎಂಆರ್​ಪಿಎಲ್​ಗೆ ವರ್ಗಾಯಿಸಿದ್ದು ಒಎಂಪಿಎಲ್ ನಲ್ಲಿ ಎಂಆರ್​ಪಿಎಲ್ ಶೇರು ಶೇಕಡಾ 99.99 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.