ಮಂಗಳೂರು: ಎಂಆರ್‌ಪಿಎಲ್ (Mangalore Refinery and Petrochemicals Limited) ಕಂಪನಿಗೆ 2021-22ರ ದ್ವಿತೀಯ ತ್ರೈಮಾಸಿಕ ಹಣಕಾಸು ಅವಧಿಯಲ್ಲಿ 243 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
ಕಳೆದ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಎಂಆರ್‌ಪಿಎಲ್ 31 ಕೋಟಿ ರೂ. ಲಾಭ ಗಳಿಸಿತ್ತು. ಈ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ನಷ್ಟವು 390 ಕೋಟಿ ರೂ.(ತೆರಿಗೆ ಸೇರಿ) ಆಗಿದ್ದರೆ, ಕಳೆದ ಸಾಲಿನ ಈ ಅವಧಿಯಲ್ಲಿ ಸಂಸ್ಥೆಯು 51 ಕೋಟಿ ರೂ. ಒಟ್ಟು ಲಾಭ ಗಳಿಸಿತ್ತು.
ಕಂಪನಿಯ ಸ್ಥಾವರದ ಕಾರ್ಯಾಚರಣೆಯಿಂದ ಕಳೆದ ಸಾಲಿನಲ್ಲಿದ್ದ ಒಟ್ಟು ಆದಾಯ 9,686 ಕೋಟಿ ರೂ.ನಿಂದ ಈ ಬಾರಿ 17,692 ಕೋಟಿ ರೂ.ಗೆ ಏರಿಕೆಯಾಗಿದೆ. ಗ್ರಾಸ್ ರಿಫೈನರಿ ಸ್ಥಾವರದ ಹಿಂದಿನ 3.85 ಮಾರ್ಜಿನ್ (ಜಿಆರ್‌ಎಂ) ಡಾಲರ್/ಪ್ರತಿ ಬ್ಯಾರೆಲ್‌ನಿಂದ ಈ ಸಾಲಿನಲ್ಲಿ 2.22 ಡಾಲರ್ ಬ್ಯಾರೆಲ್‌ಗೆ ಇಳಿಕೆಯಾಗಿದೆ.
ಅರ್ಧ ವಾರ್ಷಿಕ ಲೆಕ್ಕಾಚಾರದಲ್ಲಿ 2021-22ರ ಪ್ರತಿ ಸಾಲಿನಲ್ಲಿ ನಿವ್ವಳ ನಷ್ಟವು 329 ಕೋಟಿ ರೂ. ಆಗಿದ್ದರೆ, ಕಳೆದ ಸಾಲಿನ ಅರ್ಧ ವಾರ್ಷಿಕ ಅವಧಿಯಲ್ಲಿ ನಿವ್ವಳ ನಷ್ಟವು 493 ಕೋಟಿ ರೂಪಾಯಿ ಆಗಿತ್ತು.
ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,451 ಸೋಂಕಿತರು ಪತ್ತೆ: 585 ಮಂದಿ ಸಾವು