ETV Bharat / state

ಬೇಕೆಂದಾಗೆಲ್ಲ ಕರ್ನಾಟಕ ಬಂದ್ ಮಾಡಲು ಇದು ಅವರ ಅಪ್ಪನ ಆಸ್ತಿಯಾ? ರಿಷಿ ಕುಮಾರ ಸ್ವಾಮೀಜಿ ಪ್ರಶ್ನೆ - Kalimutt Shri Rishi Kumar swami

ಅವನ್ಯಾವನೋ ನರಿ, ಕತ್ತೆ ತೆಗೆದುಕೊಂಡು ಬಂದು ಉರುಳಾಡಿ ಆ ಬಳಿಕ ಮನೆಗೆ ಹೋಗುತ್ತಾನೆ. ಇಂತವರನ್ನು ಯಾಕೆ ರಾಜ್ಯದ ಪ್ರಾಣ ತೆಗೆಯಲು ಇಟ್ಟಿದ್ದೀರಿ? ಶೂಟ್ ಮಾಡಿ ಬಿಸಾಡಿ ಎಂದು ಬಂದ್​ಗೆ ವಿರೋಧ ವ್ಯಕ್ತಪಡಿಸಿರುವ ರಿಷಿ ಕುಮಾರ ಸ್ವಾಮೀಜಿ ಸಿಎಂಗೆ ಈ ರೀತಿ ಮನವಿ ಮಾಡಿದ್ದಾರೆ..

Rishi Kumar Swamiji reaction about Karnataka bandh
ರಿಷಿ ಕುಮಾರ ಸ್ವಾಮೀಜಿ
author img

By

Published : Nov 23, 2020, 6:32 PM IST

Updated : Nov 23, 2020, 7:17 PM IST

ಮಂಗಳೂರು: ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ದಬ್ಬಾಳಿಕೆ ನಡೆಸಿ ಬಂದ್ ಮಾಡಲು ಬಂದಲ್ಲಿ ಅವರಿಗೆ ಕಲ್ಲು ಹೊಡೆದು ಕಳುಹಿಸಿ ಎಂದು ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮಂಗಳೂರಿಲ್ಲಿ ಇಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಯವರು ಪ್ರತಿಯೊಂದಕ್ಕೂ ಬಂದ್ ಬಂದ್ ಎಂದು ಹೇಳುತ್ತಾರಲ್ಲಾ, ಕರ್ನಾಟಕ ಏನು ಅವರ ಅಪ್ಪನ ಆಸ್ತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರಾಠರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ಕನ್ನಡಪರ ಸಂಘಟನೆಗಳಿಗೆ ಏನು ನಷ್ಟ?. ಕರ್ನಾಟಕದ ಒಳಗಿರುವ ಮರಾಠಿಗರು ತೆರಿಗೆ ಕಟ್ಟೋದಿಲ್ಲವೇ? ಕನ್ನಡದ ಹೆಸರು ಹೇಳಿ ಇವರೆಲ್ಲ ಕಿಡಿಗೇಡಿತನ, ರೌಡಿಸಂ ಮಾಡುತ್ತಿದ್ದಾರೆ. ಬರೀ ಶೇ.20 ರಷ್ಟು ಜನರಿರುವ ಅವರ ಮಾತನ್ನು 6.50 ಕೋಟಿ ಜನರು ಕೇಳಬೇಕಾ? ಎಂದು ಶ್ರೀಗಳು ಪ್ರಶ್ನಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಗೌಡರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹಿಂದೆ 20 ತಿಂಗಳು, ಆ ಬಳಿಕ 14 ತಿಂಗಳು ನೀವು ಸಿಎಂ ಆಗಿ ಆಡಳಿತ ಮಾಡಿದ್ದೀರಿ. ಆಗ ಗೌಡ ಸಮುದಾಯದವರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದರೆ ನಿಮಗೆ ಬೇಡ ಅನ್ನುವವರು ಯಾರು ಇದ್ದರು ಎಂದು ಪ್ರಶ್ನಿಸಿದರು.

ರಿಷಿ ಕುಮಾರ ಸ್ವಾಮೀಜಿ

ವರ್ಷಕ್ಕೆ ಶೇ. 20ರಷ್ಟು ಮಂದಿ ಹಿಂದೂಪರ ಸಂಘಟನೆಗಳ ಯುವಕರು ಮೃತಪಡುತ್ತಿದ್ದಾರೆ‌‌. ಕನ್ನಡಪರ ಸಂಘಟನೆಗಳ ಒಬ್ಬನಾದರೂ ಸತ್ತಿದ್ದಾರಾ ಎಂದು ಪ್ರಶ್ನಿಸಿದ ರಿಷಿ ಕುಮಾರ ಸ್ವಾಮೀಜಿ, ಅವನ್ಯಾವನೋ ನರಿ, ಕತ್ತೆ ತೆಗೆದುಕೊಂಡು ಬಂದು ಉರುಳಾಡಿ ಆ ಬಳಿಕ ಮನೆಗೆ ಹೋಗುತ್ತಾನೆ. ಇಂತವರನ್ನು ಯಾಕೆ ರಾಜ್ಯದ ಪ್ರಾಣ ತೆಗೆಯಲು ಇಟ್ಟಿದ್ದೀರಿ? ಶೂಟ್ ಮಾಡಿ ಬಿಸಾಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

Last Updated : Nov 23, 2020, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.