ETV Bharat / state

ಮದ್ಯ ಸೇವಿಸಿ ಕಾರು ಚಲಾಯಿಸಿ ರಿಕ್ಷಾ ಚಾಲಕನ ಸಾವು ಪ್ರಕರಣ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ

ಕಾರು ಚಾಲಕ ಮಂಗಳೂರಿನ ಬಿಕರ್ನಕಟ್ಟೆಯ ಅನೀಶ್ ಜಾನ್ ಶಿಕ್ಷೆಗೊಳಗಾದ ಆರೋಪಿ. 2017ರ ಆಗಸ್ಟ್ 6ರಂದು ರಾತ್ರಿ ನಗರದ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ನಡೆದಿತ್ತು.

Mangalore crime
Mangalore crime
author img

By

Published : Mar 25, 2021, 1:27 AM IST

ಮಂಗಳೂರು: ಕಂಠಪೂರ್ತಿ ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿ, ರಿಕ್ಷಾ ಚಾಲಕನೋರ್ವನ ಸಾವಿಗೆ ಕಾರಣನಾಗಿದ್ದ ಕಾರು ಚಾಲಕನಿಗೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಕಾರು ಚಾಲಕ ಮಂಗಳೂರಿನ ಬಿಕರ್ನಕಟ್ಟೆಯ ಅನೀಶ್ ಜಾನ್ ಶಿಕ್ಷೆಗೊಳಗಾದ ಆರೋಪಿ. 2017ರ ಆಗಸ್ಟ್ 6ರಂದು ರಾತ್ರಿ ನಗರದ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಅನೀಶ್ ಜಾನ್, ಜ್ಯೋತಿ ಸರ್ಕಲ್ ಸಮೀಪ ಆಟೋರಿಕ್ಷಾ ನಿಲ್ದಾಣದಲ್ಲಿ ನಿಂತಿದ್ದ ರಿಕ್ಷಾ ಚಾಲಕ ಪ್ರವೀಣ್ ಎಂ.ಎ. ಅಶೋಕ್ ಪಾಸ್ಕಲ್ ಡಿಸೋಜ ಮತ್ತು ಜಗದೀಶ್ ಎಂಬವರಿಗೆ ಡಿಕ್ಕಿ ಹೊಡೆದಿದ್ದನು. ಪರಿಣಾಮ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಘಟನೆಯಲ್ಲಿ ಉಳಿದ ಇಬ್ಬರು ಗಾಯಗೊಂಡಿದ್ದರು. ಈ ಬಗ್ಗೆ ಪೊಲೀಸರು ಬಂದರ್ ಪೊಲೀಸ್ ಠಾಣೆಯಲ್ಲಿ ‘ಕೊಲೆಯಲ್ಲದ ಮಾನವ ಹತ್ಯೆ’ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಹತ್ತು ವರ್ಷದ ಬಾಲೆಯ ಅಶ್ವ ಪ್ರೇಮ : ನಿರ್ಗತಿಕ ಕುದುರೆಗಳ ನೆರವಿಗೆ ಸಿಂಹಸ್ಥಿತ

ಚಾಲಕ ಮದ್ಯ ಸೇವನೆ ಮಾಡಿದ್ದನು ಎನ್ನವುದು ದೂರಿನಲ್ಲಿ ಉಲ್ಲೇಖಗೊಂಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಲೀಧರ ಪೈ ಬಿ. ಆರೋಪಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದು, ಮದ್ಯ ಸೇವಿಸಿ ವಾಹನ ಚಲಾಯಿಸಿರುವುದಕ್ಕೆ 1 ವರ್ಷ ಸಾದಾ ಶಿಕ್ಷೆ ಹಾಗೂ 1,000 ರೂ. ದಂಡ ಹಾಗೂ ಕೊಲೆಯಲ್ಲದ ಮಾನವ ಹತ್ಯೆ ನಡೆಸಿರುವುದಕ್ಕೆ ಮೂರು ವರ್ಷ ಸಾದಾ ಶಿಕ್ಷೆ ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಮತ್ತೆ 1 ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ, ಸಂತ್ರಸ್ತರ ಕಡೆಯವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಪ್ರಾಸಿಕೂಷನ್ ಪರವಾಗಿ ಈ ಹಿಂದಿನ ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ಹಾಗೂ ಈಗಿನ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದ ಮಂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.