ಮಂಗಳೂರು: ಕರಾವಳಿ ವಿಭಾಗದ ಮೂರು ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಿಭಾಗಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಕಾರವಾರ -ಯಶವಂತಪುರ-ಕಾರವಾರ ರೈಲು ಸಂಚಾರ ಆರಂಭವಾಗಿದೆ.
ಸೆಪ್ಟೆಂಬರ್ 4ರ ಶುಕ್ರವಾರ ಸಂಜೆ 6.45ಕ್ಕೆ ನಂ.06585 ಯಶವಂತಪುರ ಹಾಗೂ ಕಾರವಾರ ನಡುವೆ ರೈಲು ಸಂಚಾರ ಕಾರ್ಯಾರಂಭಿಸಿದೆ. ಸೆಪ್ಟೆಂಬರ್ 5 ರಂದು ಸಂಜೆ 6 ಗಂಟೆಗೆ ನಂ. (6595) ರೈಲು ಕಾರವಾರದಿಂದ ಸಂಚಾರ ಮಾಡಿದೆ.
ಬೆಂಗಳೂರು-ಮಂಗಳೂರಿನ (06515) ನಡುವೆ ವಾರದಲ್ಲಿ ನಾಲ್ಕು ದಿನಗಳ ಕಾಲ ಚಲಿಸುವ ರೈಲು ಸೆಪ್ಟೆಂಬರ್ 4 ರಿಂದ ಕಾರ್ಯಾಚರಣೆ ಆರಂಭಿಸಿದೆ. ಸೆಪ್ಟೆಂಬರ್ 6 ರಿಂದ ನಂ.(06516) ರೈಲು ಕಾರ್ಯಾರಂಭಿಸಲಿದೆ. ವಾರಕ್ಕೆ ಮೂರು ಬಾರಿ ಬೆಂಗಳೂರು-ಮಂಗಳೂರು ನಡುವೆ ಚಲಿಸುವ ನಂ.(06517) ರೈಲು ಇಂದಿನಿಂದ ಆರಂಭವಾಗಲಿದ್ದು, ಮಂಗಳೂರು - ಬೆಂಗಳೂರು ನಡುವಿನ ನಂ.(06518) ರ ರೈಲು ಸೆಪ್ಟೆಂಬರ್ 5 ರಿಂದ ಕಾರ್ಯಾಚರಣೆ ಆರಂಭಿಸಿದೆ.
ಈ ವಿಶೇಷ ರೈಲುಗಳು ಮುಂದಿನ ಸೂಚನೆ ಬರುವವರೆಗೂ ಕಾರ್ಯನಿರ್ವಹಿಸಲಿದ್ದು, ಈ ರೈಲುಗಳಲ್ಲಿ ಪ್ರಯಾಣ ಮಾಡಲು ಮುಂಗಡ ಬುಕ್ಕಿಂಗ್ ಮಾಡಬೇಕಾಗಿದೆ.