ಬೆಳ್ತಂಗಡಿ: ಏರ್ ಕಂಡೀಷನ್ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಮೆಕ್ಯಾನಿಕ್ ಸಾವನ್ನಪ್ಪಿರುವ ಘಟನೆ ಉಜಿರೆಯ ಕಕ್ಕಿಂಜೆಯಲ್ಲಿ ನಡೆದಿದೆ.
ಉಜಿರೆಯಲ್ಲಿ ಎ.ಸಿ. ಮೆಕ್ಯಾನಿಕ್ ಅಂಗಡಿ ನಡೆಸುತ್ತಿದ್ದ ಅತ್ತಾಜೆ ನಿವಾಸಿ ಮಹಮ್ಮದ್ ಸಿರಾಜುದ್ದೀನ್ ಸೋಮವಾರ ಸಂಜೆ ಕಕ್ಕಿಂಜೆಯ ಮನೆಯೊಂದರಲ್ಲಿ ಎಸಿ ದುರಸ್ತಿ ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ತಕ್ಷಣವೇ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.