ಮಂಗಳೂರು : ಜನರು ಕಷ್ಟಪಟ್ಟು ದುಡಿದು ಗಳಿಸಿದ ಸಂಪತ್ತು ಕೆಲವೊಮ್ಮೆ ಸುಲಭವಾಗಿ ಕಳ್ಳರ ಪಾಲಾಗುತ್ತದೆ. ಕಳವು ಆದ ವಸ್ತುಗಳನ್ನು ಮರಳಿ ಪಡೆಯುವುದು ಕೂಡ ದುಸ್ಸಾಹಸ. ಆದರೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಕಳುವಾದ ವಸ್ತುಗಳ ರಿಕವರಿ ಮಾಡುವಲ್ಲಿ ಉತ್ತಮ ಸಾಧನೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಕಳವಾದ ವಸ್ತುಗಳ ರಿಕವರಿಯಲ್ಲಿ ಉತ್ತಮ ಸಾಧನೆ ಮಾಡಿದೆ. 2018ರಲ್ಲಿ ಕೊಲೆ ಮಾಡಿ ದೋಚಲಾದ 6,90,500 ರೂ. ನಲ್ಲಿ 6,55,500 ರೂ. ನಗದು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 94.931 ಶೇಕಡಾ ರಿಕವರಿ ಆಗಿದೆ. ಡಕಾಯಿತಿ ಪ್ರಕರಣದಲ್ಲಿ ಕಳುವಾದ 40,000 ರೂ. ಇನ್ನೂ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ದರೋಡೆ ಪ್ರಕರಣದಲ್ಲಿ 8,17,250 ರೂ. ಕಳವಾಗಿದೆ. ಇದರಲ್ಲಿ 1,35,800 ರೂ. ವಶಪಡಿಸಿಕೊಳ್ಳಲಾಗಿದೆ. ಮನೆ ಒಡೆದು ಮಾಡಿದ ಕಳ್ಳತನದಲ್ಲಿ 87,55,552 ರೂ. ಮೌಲ್ಯ ಕಳವಾಗಿದೆ. ಇದರಲ್ಲಿ 27,32,362 ರೂ. ಮೌಲ್ಯದ ವಸ್ತುಗಳ ರಿಕವರಿಯಾಗಿದೆ. ಇತರ ಕಳವು ಪ್ರಕರಣಗಳಲ್ಲಿ 1,18,49,827 ರೂ. ಮೌಲ್ಯದ ವಸ್ತುಗಳ ಕಳವಾಗಿದ್ರೆ, 51,28,302 ರೂ. ಗಳ ವಸ್ತುಗಳ ರಿಕವರಿಯಾಗಿದೆ. 2018ರಲ್ಲಿ 2,21,53,129 ಮೌಲ್ಯದ ವಸ್ತುಗಳ ಕಳವಾಗಿದ್ದು 86,51,964 ರೂ ಮೌಲ್ಯದ ವಸ್ತುಗಳ ರಿಕವರಿಯಾಗಿದೆ.
2019ರಲ್ಲಿ ಹಣಕ್ಕೆ ನಡೆದ ಕೊಲೆಯಲ್ಲಿ ಕಳವಾದ 1,35,830 ರೂ ಕಳವಾಗಿದ್ದರೆ ಅದರಲ್ಲಿ 1,35,820 ಕೂಡ ವಶಕ್ಕೆ ಪಡೆದು ಶೇಕಡಾ 100 ರಿಕವರಿ ಮಾಡಲಾಗಿದೆ. ಡಕಾಯಿತಿಯಲ್ಲಿ 3000 ರೂ. ಕಳವಾಗಿದ್ದರೆ ಅದರ ರಿಕವರಿ ಇನ್ನೂ ಆಗಿಲ್ಲ. ದರೋಡೆ ಪ್ರಕರಣದಲ್ಲಿ 1,10,367 ರೂ. ಮೌಲ್ಯದ ವಸ್ತುಗಳ ಕಳವಾಗಿದ್ದರೆ, 1,10,367 ರಿಕವರಿ ಮಾಡಿ ಶೇಕಡಾ 100 ಸಾಧನೆ ಮಾಡಲಾಗಿದೆ.
ಮನೆ ಕಳವು ಪ್ರಕರಣದಲ್ಲಿ 1,20,27,384 ರೂ ಮೌಲ್ಯದ ವಸ್ತುಗಳ ಕಳವು ನಡೆದಿದ್ದು, 51,95,543 ರೂ. ಮೌಲ್ಯದ ವಸ್ತುಗಳ ರಿಕವರಿಯಾಗಿದೆ. ಇದರಲ್ಲಿ 43.2 ಶೇಕಡಾ ರಿಕವರಿಯಾಗಿದೆ. ಇತರ ಕಳವು ಪ್ರಕರಣದಲ್ಲಿ33,30,675 ಮೌಲ್ಯದ ವಸ್ತುಗಳ ಕಳವಾಗಿದ್ರೆ, 8,16,552 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2019ರಲ್ಲಿ 1,56,07,246 ರೂ ಮೌಲ್ಯದ ವಸ್ತುಗಳ ಕಳವಾಗಿತ್ತು. ಆ ಪೈಕಿ 62,58,282 ರೂ ಮೌಲ್ಯದ ವಸ್ತುಗಳ ವಶಪಡಿಸಿಕೊಳ್ಳಲಾಗಿದ್ದು, 40.1 ಶೇಕಡಾ ರಿಕವರಿಯಾಗಿದೆ. 2020ರಲ್ಲಿ ಡಕಾಯಿತಿ ಪ್ರಕರಣದಲ್ಲಿ 12,13,000 ಕಳವಾಗಿದ್ದರೆ ಅದರಲ್ಲಿ7,00,000 ರಿಕವರಿಯಾಗಿದೆ. ದರೋಡೆ ಪ್ರಕರಣದಲ್ಲಿ 14,42,000 ಕಳವಾಗಿದ್ದು 71,400 ರಿಕವರಿಯಾಗಿದೆ.
ಮನೆಕಳವು ಪ್ರಕರಣದಲ್ಲಿ 33,22,772 ರೂ.ಮೌಲ್ಯದ ವಸ್ತುಗಳ ಕಳವಾಗಿದ್ದು 9,93,318 ರೂ. ಮೌಲ್ಯದ ವಸ್ತುಗಳ ರಿಕವರಿಯಾಗಿದೆ. ಇತರ ಕಳವು ಪ್ರಕರಣದಲ್ಲಿ 25,96,115 ಕಳವಾಗಿದ್ದು, ಇದರಲ್ಲಿ 12,87,850 ರಿಕವರಿಯಾಗಿದೆ. 2020ರಲ್ಲಿ ಒಟ್ಟು ಕಳವಾದ 85,73,887 ಮೌಲ್ಯದ ವಸ್ತುಗಳಲ್ಲಿ 30,52,568 ವಶಪಡಿಸಿಕೊಳ್ಳಲಾಗಿದ್ದು 35.6 ಶೇಕಡಾ ರಿಕವರಿಯಾಗಿದೆ.
ಕಳುವು ಪ್ರಕರಣಗಳಲ್ಲಿ ಕಳುವಾದ ವಸ್ತುಗಳನ್ನು ರಿಕವರಿ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಕಳುವು ಮಾಡಲಾದ ಹಣಗಳನ್ನು ಖರ್ಚು ಮಾಡುವುದು, ಒಡವೆಗಳನ್ನು ಅನಾಮಧೇಯ ವ್ಯಕ್ತಿಗಳಿಗೆ ಮಾರಿದ ಸಂದರ್ಭದಲ್ಲಿ ಅದರ ರಿಕವರಿಯು ಬಲು ಕಷ್ಟ. ಇಷ್ಟೆಲ್ಲದರ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಕಳುವಾದ ವಸ್ತುಗಳ ರಿಕವರಿಯಲ್ಲಿ ಉತ್ತಮ ಸಾಧನೆ ಮಾಡಿದೆ.