ETV Bharat / state

3.2 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ.. ಮಂಗಳೂರು ಸಿಸಿಬಿಯಿಂದ ಇಬ್ಬರ ಬಂಧನ - ETv Bharat Kannada News

ಮಂಗಳೂರು ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ- ಕೋಟ್ಯಾಂತರ ಬೆಲೆಬಾಳುವ ಆ್ಯಂಬರ್​ ಗ್ರೀಸ್(ತಿಮಿಂಗಿಲ ವಾಂತಿ)ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ - 3.2 ಕೋಟಿ ಮೌಲ್ಯದ ಅಪರೂಪ ತಿಮಿಂಗಿಲ ವಾಂತಿ ವಶ

whale
ತಿಮಿಂಗಿಲ
author img

By

Published : Jan 8, 2023, 6:28 PM IST

ಮಂಗಳೂರು(ದಕ್ಷಿಣ ಕನ್ನಡ) : ತೇಲುವ ಚಿನ್ನ ಎಂದೇ ಖ್ಯಾತಿ ಹೊಂದಿರುವ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದ್ದು ಕೋಟ್ಯಾಂತರ ಬೆಲೆಬಾಳುವ ಆ್ಯಂಬರ್​ ಗ್ರೀಸ್​ ಅಥವಾ ತಿಮಿಂಗಿಲ ವಾಂತಿಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿಮಿತ್ (26), ಪುಂಜಲ್ ಕಟ್ಟೆಯ ಯೋಗೀಶ್ (41) ಬಂಧಿತರು.

ನಗರದ ಲಾಲ್ ಭಾಗ್ ನ ಕರಾವಳಿ ಮೈದಾನ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನವಾದ ಅಂಬರ್-ಗ್ರೀಸ್(ತಿಮಿಂಗಿಲ ವಾಂತಿ)ನ್ನು ಇವರು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತ್ರತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇವರನ್ನು ವಶಕ್ಕೆ ಪಡೆದುಕೊಂಡು ಕೋಟ್ಯಾಂತರ ರೂಪಾಯಿ ಬೆಲೆಬಾಳುವ 3.2 ಕೆಜಿ ತೂಕದ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ)ನ್ನು ಹಾಗೂ 2 ಮೊಬೈಲ್ ಫೋನ್​ನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3.2 ಕೋಟಿ ಮೌಲ್ಯವಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಪರೂಪದ ಬೆಲೆಬಾಳುವ ಅಂಬರ್ ಗ್ರೀಸ್ ಹಾಗೂ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ಪಿಎಸ್ಐ ಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

ಏನಿದು ಆ್ಯಂಬರ್​ ಗ್ರೀಸ್​? : ಸ್ಪರ್ಮ್​ ವೇಲ್​ ಪ್ರಭೇದದ ತಿಮಿಂಗಿಲ ಹೊರಹಾಕುವ ವಾಂತಿಯನ್ನು ಆ್ಯಂಬರ್​ ಗ್ರೀಸ್​ ಎಂದು ಕರೆಯಲಾಗುತ್ತದೆ. ಘನ ಮೇಣದ ರೀತಿಯಲ್ಲಿದ್ದು, ವಾಸನೆಯಿಂದ ಕೂಡಿರಲಿದೆ. ಸುಂಗಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಅರಬ್​, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರವಾದ ಬೇಡಿಕೆ ಕೂಡ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಆ್ಯಂಬರ್​ ಗ್ರೀಸ್​ ಸುಮಾರು ಒಂದು ಕೋಟಿ ರೂಪಾಯಿಗಳ ವರೆಗೆ ಬೆಲೆಯಿದೆ.

Two arrested for selling whale vomit
ತಿಮಿಂಗಿಲ ವಾಂತಿ ಮಾರಾಟ ಮಾಡುತ್ತಿದ ಇಬ್ಬರ ಬಂಧನ

ಪರ್ಫ್ಯೂಮ್​​ಗಾಗಿ ವಳಕೆಯಾಗುವ ಈ ಆ್ಯಂಬರ್​ ಗ್ರೀಸ್​ ಭಾರತದಲ್ಲಿ ಮಾರಟ ಮಾಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಸಂಶೋಧನೆಗಾಗಿ ಮಾತ್ರ ಬಳಸಸಬಹುದಾಗಿದೆ. ದುಬಾರಿ ಸುಂಗಧದ್ರವ್ಯದಲ್ಲಿ ಅತಿಯಾಗಿ ಬಳಕೆಯಾಗುವ ಆ್ಯಂಬರ್​ ಗ್ರೀಸ್​ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅಕ್ರಮ ಸಂಗ್ರಹಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಕ್ರಮ ಜಾಲದ ವಿರುದ್ದ ಸಿಸಿಬಿ ಕಣ್ಣಿಟ್ಟಿತ್ತು . ಈ ಹಿಂದೆಯೂ ಸಹಾ ಮಂಗಳೂರು ನಗರದಲ್ಲಿ ತಿಮಿಂಗಳ ವಾಂತಿಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರು ಮಂದಿಯನ್ನು ಮಂಗಳೂರು ಪೊಲೀಸರು ಬಂಧಸಿದ್ದರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಶಾಂತ್​(24), ಬೆಂಗಳೂರಿನ ಸತ್ಯರಾಜ್​(32), ಮಂಗಳೂರಿನ ತೆಂಕೆ ಎಡಪದವು ಗ್ರಾಮದ ರೋಹಿತ್​(27), ಮತ್ತೊಬ್ಬ ಅದೇ ಗ್ರಾಮದ ವಿರೂಪಾಕ್ಷ, ಉಡುಪಿ ಜಿಲ್ಲೆಯ ಕಾಪುವಿನ ನಾಗರಾಜ್​(31) ಹಾಗೂ ಮಂಗಳೂರಿನ ಅಡ್ಡೂರು ಗ್ರಾಮದ ರಾಜೇಶ್​(37) ಬಂಧಿತರು.

ಇವರಿಂದ ಸುಮಾರು 3,48 ಕೋಟಿ ರೂ. ಮೌಲ್ಯದ 3 ಕೆ.ಜಿ 480 ಗ್ರಾಂ. ತಿಮಿಂಗಲ ವಾಂತಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಇವರು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ್ಯ ಎಂಬಾತ ನೀಡಿದ ತಿಮಿಂಗಿಲ ವಾಂತಿ (ಆ್ಯಂಬರ್​ ಗ್ರೀಸ್​)ಯನ್ನು ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸಿದ್ದರು. ಈ ವೇಳೆ ಇವರನ್ನು ಬಂಟ್ವಾಳ ತಾಲೂಕಿನ ಬಾಳೆಮಣಿ ಗ್ರಾಮದ ನವೋದಯ ಶಾಲೆಯ ಬಳಿ ಪೊಲೀಸರು ದಾಳಿ ನಡೆಸಿ ಮಾರಾಟಕ್ಕೆ ಯತ್ನಿಸಿದವರನ್ನು ಬಂಧಿಸಿ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ : 80 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ, ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಾಲದ ವಸ್ತುಗಳ ಕದ್ದು ಮಾರಾಟ: ಬೆಂಗಳೂರಿನಲ್ಲಿ ಐವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.