ETV Bharat / state

ಮಂಗಳೂರು ಬೀಚ್​ನಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್​: ವಿಡಿಯೋ ಮಾಡಿ ಬ್ಲಾಕ್​ಮೇಲ್‌, ಆರೋಪಿ ಅರೆಸ್ಟ್ - etv bharat kannada

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ವಿಡಿಯೋ ಸೆರೆಹಿಡಿದು ಬ್ಲಾಕ್​ಮೇಲ್​- ಮಂಗಳೂರಿನಲ್ಲಿ ಆರೋಪಿ ಅಂದರ್​

rape-on-a-student-in-beach-at-mangaluru
ಬೀಚ್​ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ವಿಡಿಯೋ ಸೆರೆಹಿಡಿದು ಬ್ಲಾಕ್​ಮೇಲ್‌: ಆರೋಪಿ ಅರೆಸ್ಟ್
author img

By

Published : Aug 1, 2022, 4:34 PM IST

ಮಂಗಳೂರು: ಕಡಲತೀರಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಆ ದುಷ್ಕೃತ್ಯದ ವಿಡಿಯೋವನ್ನು ಸೆರೆಹಿಡಿದು ಬ್ಲಾಕ್​ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮೀನು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾಝ್ ಅಹಮ್ಮದ್(30) ಎಂಬಾತ ಬಂಧಿತ ಆರೋಪಿ.

ಆರೋಪಿಯು ಜುಲೈ 27ರಂದು‌ ಎನ್​​ಐಟಿಕೆ ಬೀಚ್​​ಗೆ ಸಹಪಾಠಿಯೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿಯ ಸಹಪಾಠಿಯನ್ನು ಆರೋಪಿ ಮುನಾಝ್ ಅಹಮ್ಮದ್ ಹೆದರಿಸಿ ಓಡಿಸಿ ದುಷ್ಕೃತ್ಯ ಮೆರೆದಿದ್ದಾನೆ. ಅಲ್ಲದೆ ತನ್ನ ಮೊಬೈಲ್​​‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ಬಳಿಕ ಅದನ್ನು ತೋರಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ದೂರಲಾಗಿದೆ.

ಅತ್ಯಾಚಾರದ ಬಗ್ಗೆ ವಿದ್ಯಾರ್ಥಿನಿಯು ಪೊಲೀಸ್ ಕಮೀಷನರ್ ಭೇಟಿ ಮಾಡಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪತ್ನಿಯ ನಗ್ನ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಪತಿಯಿಂದಲೇ ಬ್ಲಾಕ್​ಮೇಲ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.