ETV Bharat / state

ಮಂಗಳೂರು ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ತೆರೆ: ಈ ಸಲ 159 ಜೋಡಿ ಕೋಣಗಳು ಭಾಗಿ - ಬಂಗ್ರ ಕೂಳೂರು ಗೋಲ್ಡ್​ ಫಿಂಚ್​ ಸಿಟಿ ಮೈದಾನ

6ನೇ ವರ್ಷದ ಮಂಗಳೂರು ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಅದ್ಧೂರಿ ತೆರೆ ಬಿತ್ತು.

Mangalore Rama Lakshman Jodukare Kambala
ಮಂಗಳೂರು ರಾಮ ಲಕ್ಷ್ಮಣ ಜೋಡುಕರೆ ಕಂಬಳ
author img

By

Published : Jan 24, 2023, 12:52 PM IST

Updated : Jan 24, 2023, 2:33 PM IST

ಮಂಗಳೂರು ರಾಮ ಲಕ್ಷ್ಮಣ ಜೋಡುಕರೆ ಕಂಬಳದ ಆಕರ್ಷಕ ದೃಶ್ಯ

ಮಂಗಳೂರು: ಈ ಬಾರಿಯ ಮಂಗಳೂರು ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಅದ್ಧೂರಿಯಾಗಿ ನಡೆದಿದ್ದು, ಕಂಬಳ ಕ್ಷೇತ್ರದ ಸ್ಟಾರ್ ಓಟಗಾರ ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಈ ಸಲವೂ ಫೈನಲ್ ಪ್ರವೇಶಿಸಿ ಪದಕ ಗೆದ್ದರು. ಕಂಬಳದಲ್ಲಿ ಸತತ 6ನೇ ಬಾರಿ ಇವರು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಈ ಸಲದ ಕೂಟದಲ್ಲಿ ಒಟ್ಟು 159 ಜೊತೆ ಕೋಣಗಳು ಭಾಗವಹಿಸಿದ್ದು ಕರಾವಳಿ ಗ್ರಾಮೀಣ ಕ್ರೀಡೆಯ ಕಳೆ ಹೆಚ್ಚಿಸಿತು.

ಬಂಗ್ರ ಕೂಳೂರು ಗೋಲ್ಡ್​ ಫಿಂಚ್​ ಸಿಟಿ ಮೈದಾನದಲ್ಲಿ ಆಯೋಜಿಸಿದ್ದ ಜೋಡುಕರೆ ಕಂಬಳ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯಿತು. ಕಂಬಳದ ಎಲ್ಲಾ ವಿಭಾಗಗಳಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರಿಗೆ ಚಿನ್ನ ಬಹುಮಾನವಾಗಿ ನೀಡಲಾಯಿತು. ಪ್ರಥಮ ಸ್ಥಾನ ಪಡೆದವರಿಗೆ ಎರಡು ಪವನ್​ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಒಂದು ಪವನ್​ ಚಿನ್ನವನ್ನು ಬಹುಮಾನವಾಗಿ ನೀಡಲಾಗಿದೆ. ಗ್ರಾಮೀಣ ಕ್ಷೇತ್ರಕ್ಕೆ ಸೀಮಿತವಾಗಿದ್ದ ಕಂಬಳ ಇದೀಗ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದು, ರಾಮ ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಲಕ್ಷಾಂತರ ಜನರು ಸೇರಿ ರೋಚಕ ಸನ್ನಿವೇಶಗಳನ್ನು ಕಣ್ತುಂಬಿಕೊಂಡರು.

ನಿಶಾಂತ್ ಶೆಟ್ಟಿ ಅವರು ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ ಅವರ ಕೋಣಗಳನ್ನು ಓಡಿಸಿ ಪ್ರಥಮ ಸ್ಥಾನದ ಗೌರವ ಪಡೆದರು. ಕಂಬಳ ಕ್ಷೇತ್ರದ ಶರವೇಗದ ಸರದಾರ ಬೋಳದ ಬೊಲ್ಲಿ ಬೊಲ್ಲೆ ಹಾಗೂ ಚೆನ್ನೆ ಕೋಣಗಳು ಕಂಬಳದ ಜನಾಕರ್ಷಣೆ ಗಿಟ್ಟಿಸಿದವು. ಆರು ವರ್ಷಗಳ ಹಿಂದೆ ನಿವೃತ್ತ ಸೈನಿಕ ಬ್ರಿಜೇಶ್​ ಚೌಟ ನೇತೃತ್ವದ ಯುವಕರ ತಂಡ ಗೋಲ್ಡ್​ ಫಿಂಚ್​ ಸಿಟಿ ಮೈದಾನದಲ್ಲಿ ಕಂಬಳ ಪ್ರಾರಂಭಿಸಿದ್ದರು. ಇದೀಗ ಪ್ರತೀ ವರ್ಷವೂ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ.

ಕನೆಹಲಗೆ ವಿಭಾಗದಲ್ಲಿ 5 ಜೊತೆ, ಅಡ್ಡಹಲಗೆಯಲ್ಲಿ 9 ಜೊತೆ, ಹಗ್ಗ ಹಿರಿಯದಲ್ಲಿ 19 ಜೊತೆ, ನೇಗಿಲು ಹಿರಿಯದಲ್ಲಿ 29 ಜೊತೆ, ಹಗ್ಗ ಕಿರಿಯದಲ್ಲಿ 19 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ ಒಟ್ಟು 78 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು. ಇಷ್ಟು ಜೊತೆ ಕೋಣಗಳಲ್ಲಿ ಈ ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ ಜೋಡಿಗಳ ವಿವರ ಇಲ್ಲಿದೆ.

ಮಂಗಳೂರು ಕಂಬಳ ಫಲಿತಾಂಶ- ಕನೆಹಲಗೆ (ನೀರು ನೋಡಿ ಬಹುಮಾನ):

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ

ಓಡಿಸಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡಹಲಗೆ ವಿಭಾಗ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ

ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ ವಿಭಾಗ:

ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್

ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ಹಗ್ಗ ಕಿರಿಯ ವಿಭಾಗ:

ಪ್ರಥಮ: ಬೇಳಿಂಜೆ ವಿಪಿನ್ ರೈ

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಮೂಡುಬಿದಿರೆ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಹಿರಿಯ ವಿಭಾಗ:

ಪ್ರಥಮ: ಗುರುಪುರ ಕಾರಮೊಗರು ಗುತ್ತು ಯಶ್ ಜಗದೀಶ್ ಆಳ್ವ

ಓಡಿಸಿದವರು: ನಕ್ರೆ ಪವನ್ ಮಡಿವಾಳ್

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ ವಿಭಾಗ:

ಪ್ರಥಮ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ಕಟೀಲು ಕೊಡೆತ್ತೂರು ಕಿನ್ನೆಚ್ಚಿಲ್ ಲತಾ ಪ್ರಸಾದ್ ಶೆಟ್ಟಿ

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ಇದನ್ನೂ ಓದಿ: ಕಂಬಳ‌ ಕರೆಯಲ್ಲಿ ಯುವಕನ ಸಾಹಸ: ಓಟದ ಮಧ್ಯೆ ಜಾರಿ ಬಿದ್ದು ಎದ್ದೋಡಿ ಚಿನ್ನ ಗೆದ್ದರು!

Last Updated : Jan 24, 2023, 2:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.