ETV Bharat / state

ಕೊರೊನಾ ಸಮುದಾಯಕ್ಕೆ ಹರಡಲು ಬಿಜೆಪಿಯೇ ಕಾರಣ; ಪಿ.ವಿ. ಮೋಹನ್

author img

By

Published : Jul 16, 2020, 6:16 PM IST

ದಕ್ಷಿಣ ಕನ್ನಡ ಜಿಲ್ಲೆಯು ಮೂರನೇ ಹಂತದ ಅಪಾಯ ಸ್ಥಿತಿಗೆ ಬಂದಿದೆ. ಇದಕ್ಕೆ ಸರಕಾರದ ನಿರ್ಲಕ್ಷ್ಯ, ಉದಾಸೀನತೆ ಮತ್ತು ಕಾರ್ಯಕ್ಷಮತೆಯ ಕೊರತೆ ಕಾರಣ ಎಂದು ಕೆಪಿಸಿಸಿ ವಕ್ತಾರ ಮೋಹನ್ ಆರೋಪಿಸಿದರು.

PV Mohan
ಪಿ ವಿ ಮೋಹನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಲು ಬಿಜೆಪಿ ಕಾರಣ ಎಂದು ಕೆಪಿಸಿಸಿ ವಕ್ತಾರ ಪಿ.ವಿ. ಮೋಹನ್ ಆರೋಪಿಸಿದ್ದಾರೆ.

ಕೆಪಿಸಿಸಿ ವಕ್ತಾರ ಪಿ ವಿ ಮೋಹನ್ ಆರೋಪ

ಮಂಗಳೂರಿನಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕೊರೊನಾ ಹರಡಿದ್ದು ಸಮುದಾಯದಲ್ಲಿ ಪಸರಿಸಿಕೊಂಡಿದೆ. ಇಂತಹ ಆತಂಕದ ಪರಿಸ್ಥಿತಿಗೆ ಬಿಜೆಪಿಯ ದುರ್ಬಲ ರಾಜಕೀಯ ನಾಯಕತ್ವವೇ ಕಾರಣ. ಇದೀಗ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಲಾಕ್​ಡೌನ್ ಮಾಡಲಾಗಿದೆ ಎಂದರು.

ಆರಂಭದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕಿನ ಮೂಲವನ್ನು ಕಂಡುಹಿಡಿಯಲು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡಿತ್ತು. ಪ್ರಾಥಮಿಕ ಹಂತದಲ್ಲಿಯೇ ಸೋಂಕಿನ ಸರಪಳಿಯನ್ನು ತುಂಡರಿಸಲು ಜಿಲ್ಲಾಡಳಿತ ಹೆಚ್ಚು ಒತ್ತು ಕೊಡಬೇಕಿತ್ತು. ಅದರ ಬದಲು ಕಾಂಗ್ರೆಸ್ ಪಕ್ಷವು ಸಹಕರಿಸುತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷವು ಜನರ ಗಮನವನ್ನು ಬೇರೆ ಕಡೆ ಸೆಳೆಯುವ ರಾಜಕೀಯವನ್ನು ಮಾಡಿದೆ. ಬಂಟ್ವಾಳದ ಕೊರೊನಾ ಕೇಸ್ ಬಗ್ಗೆ ತನಿಖೆಗೆ ಆದೇಶ ನೀಡಿ ಜನರ ಕಣ್ಣೊರೆಸುವ ತಂತ್ರ ಮಾಡಿದರು. ಆದರೆ ‌ಎರಡು ತಿಂಗಳಾದರೂ ತನಿಖೆಯು ಪೂರ್ಣಗೊಂಡಿಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯು ಮೂರನೇ ಹಂತದ ಅಪಾಯ ಸ್ಥಿತಿಗೆ ಬಂದಿದೆ. ಇದಕ್ಕೆ ಸರಕಾರದ ನಿರ್ಲಕ್ಷ್ಯ, ಉದಾಸೀನತೆ ಮತ್ತು ಕಾರ್ಯಕ್ಷಮತೆಯ ಕೊರತೆ ಕಾರಣ. ಲಾಕ್​ಡೌನ್​ ಅವಧಿಯಲ್ಲಿ ತಪಾಸಣೆ, ಸೋಂಕಿತರ ಸಂಪರ್ಕ ಹೊಂದಿದವರ ಪತ್ತೆ ಮತ್ತು ಕ್ವಾರಂಟೈನ್​ಗೆ ಅಗತ್ಯವಿರುವ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರವು ರೋಗಿಗಳಿಗೆ ಮೀಸಲಾದ ಖಾಸಗಿ ಆಸ್ಪತ್ರೆ ಮತ್ತು ಹೋಟೆಲ್ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ದುಬಾರಿ ದರ ನಿಗದಿಪಡಿಸಿದೆ. ಅವರ ಜೊತೆ ಸೇರಿ ಜನತೆಯನ್ನು ಲೂಟಿ ಮಾಡುವುದನ್ನು ನಿಲ್ಲಿಸಲಿ. ವಿಪತ್ತು ನಿರ್ವಹಣೆಗಾಗಿ ಮೀಸಲಾದ ಹಣವನ್ನು ಖಾಸಗಿ ಆಸ್ಪತ್ರೆ ಮತ್ತು ಹೋಟೆಲುಗಳಲ್ಲಿ ದಾಖಲಾಗಿರುವ ಕೊರೊನಾ ರೋಗಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಮತ್ತು ಮೂಲಸೌಕರ್ಯಗಳ ಖರ್ಚಿಗಾಗಿ ಬಳಸಿ, ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲಿ ಎಂದು ಅವರು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.