ETV Bharat / state

ಪಂಜಾಬ್ ಮೂಲದ ಯುವತಿ ಮಂಗಳೂರಿನಲ್ಲಿ ನಾಪತ್ತೆ - ಮಂಗಳೂರು ಯುವತಿ ನಾಪತ್ತೆ

ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಪಂಜಾಬ್ ಮೂಲದ ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರಲ್ಲಿ ಪ್ರಕರಣ ದಾಖಲಾಗಿದೆ.

punjab-based-girl-missing-in-mangaluru
ಪಂಜಾಬ್ ಮೂಲದ ಯುವತಿ ಮಂಗಳೂರಿನಲ್ಲಿ ನಾಪತ್ತೆ
author img

By

Published : Sep 1, 2021, 9:27 AM IST

ಮಂಗಳೂರು: ನಗರದ ನಂದಿಗುಡ್ಡೆಯಲ್ಲಿರುವ ‘ವಿ ಕೇರ್ ನರ್ಸಿಂಗ್ ಹೋಮ್ ಪಿಜಿ’ಯಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಪಂಜಾಬ್ ಮೂಲದ ಯುವತಿ ನಾಪತ್ತೆ ಆಗಿರುವ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಂಜಾಬ್ ಮೂಲದ ಲಿಶ್ಬ (21) ನಾಪತ್ತೆಯಾಗಿರುವ ಯುವತಿ.

‘ವಿ ಕೇರ್ ನರ್ಸಿಂಗ್ ಹೋಮ್ ಪಿಜಿ’ಯಲ್ಲಿ ಕೆಲಸ ಮಾಡುತ್ತ, ಅದೇ ಪಿಜಿಯಲ್ಲಿ ನೆಲೆಸಿದ್ದಳು. ಆ.17ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಊರಿಗೆ ಹೋಗುವುದಾಗಿ ಪಿಜಿ ಮಾಲೀಕರಿಗೆ ತಿಳಿಸಿದ್ದ ಯುವತಿ ಬಳಿಕ ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಆ.18 ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿಯ ತಾಯಿ ಮಂಜಿತ್ ಅವರು ಲಿಶ್ಬ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಆ ತಕ್ಷಣ ಅವರು ಪಿಜಿ ಮಾಲೀಕರು ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 5.3 ಅಡಿ ಎತ್ತರ ಇರುವ ಯುವತಿ ಲಿಶ್ಬ ಪಿಜಿಯಿಂದ ತೆರಳುವಾಗ ನೀಲಿ ಬಣ್ಣದ ಜೀನ್ಸ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದರು. ಹಿಂದಿ, ಪಂಜಾಬಿ ಮಾತನಾಡುತ್ತಾರೆ.

ನಾಪತ್ತೆಯಾದ ಯುವತಿಯ ಬಗ್ಗೆ ತಿಳಿದು ಬಂದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆ (0824- 2220518, 9480805339) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಇಂದಿನಿಂದ ಹೊಸ ರೂಲ್ಸ್​​..ಪಾನ್, ಆಧಾರ್​, ಪಿಎಫ್..​ ಏನೆಲ್ಲಾ ಬದಲಾಗುತ್ತೆ..?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.