ಮಂಗಳೂರು: ತಮ್ಮ ಅನುಕೂಲಕ್ಕಾಗಿ ಲಿಂಗಾಯತರು ಹಿಂದುಗಳು ಅಲ್ಲ ಎಂದು ಹೇಳುವುದು ಬಸವತತ್ವಕ್ಕೆ ವಿರುದ್ದವಾದದ್ದು ಎಂದು ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಹೇಳಿದರು.
ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಬಿಡುಗಡೆಯಾದ 'ತಮ್ಮ ಸತ್ಯಂ ಶೋಧಂ ನಿರ್ಭೀತಂ' ಕೃತಿಗೆ ಸಂಬಂಧಿಸಿದಂತೆ ಸಂವಾದದಲ್ಲಿ ಮಾತನಾಡಿದ ಅವರು, ಲಿಂಗಾಯತರು ಹಿಂದುಗಳು ಅಲ್ಲ ಎಂದು ಹೇಳಲಾಯಿತು. ಇದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಯಿತು. ಹುಸಿಯ ನುಡಿಯಲು ಬೇಡ ಎಂದು ಬಸವಣ್ಣ ಹೇಳಿದರು. ಆದರೆ ತಮ್ಮ ಅನುಕೂಲಕ್ಕಾಗಿ ಸುಳ್ಳು ಹೇಳುವುದು ಬಸವತತ್ವಕ್ಕೆ ವಿರುದ್ದವಾದದ್ದು ಎಂದು ತನ್ನ ಕೃತಿಯಲ್ಲಿ ಬರೆದಿದ್ದೇನೆ ಎಂದರು.
ಹಿಂದೆ ಕನ್ನಡದ ಮೇಲೆ ಸಂಸ್ಕೃತ ಪ್ರಭಾವ ಬೀರಿತ್ತು. ಇವತ್ತು ನಮ್ಮೊಳಗಿನ ಪದವಾಗಿ ಸಂಸ್ಕೃತ ಇದೆ. ಸಂಸ್ಕೃತ ಕನ್ನಡವನ್ನು ಹಿಂದಕ್ಕೆ ತಳ್ಳಿರಲಿಲ್ಲ. ಆದರೆ ಇಂಗ್ಲಿಷ್ ಭಾಷೆ ಕನ್ನಡವನ್ನು ಹಿಂದಕ್ಕೆ ತಳ್ತಾ ಇದೆ ಎಂದು ಖೇದ ವ್ಯಕ್ತಪಡಿಸಿದರು. ಬೆಂಗಳೂರು ಕಡೆ ಸಾಹಿತಿಗಳು ಆಕರ್ಷಕವಾಗಿ ಬರೆಯುತ್ತಾರೆ. ಆದರೆ ಬರೆದಷ್ಟು ಪ್ರಾಮಾಣಿಕ ವಾಗಿರುವುದಿಲ್ಲ. ಸಂಜೆ 4 ಗಂಟೆವರೆಗೆ ಚೆನ್ನಾಗಿರುತ್ತಾರೆ, 5 ಗಂಟೆ ಬಳಿಕ ಬೇರೆ ಕಡೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.