ETV Bharat / state

ಎಸ್​ಡಿಪಿಐ ನಿಷೇಧಕ್ಕೆ ಆಗ್ರಹಿಸಿ ಉಜಿರೆ, ಬೆಳ್ತಂಗಡಿಯಲ್ಲಿ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ‌ದೇಶದ್ರೋಹಿ ಘೋಷಣೆ ಕೂಗಿದ ಎಸ್​ಡಿಪಿಐ ಸಂಘಟನೆಯ ಕೃತ್ಯ ಖಂಡಿಸಿ ಹಾಗೂ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬಿಜೆಪಿ‌ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಯುವ ಮೋರ್ಚಾ ವತಿಯಿಂದ ಉಜಿರೆ ನಗರದ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಬೆಳ್ತಂಗಡಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಲಾಯಿತು.

Protests at Ujire and Belthangi demanding ban on SDPI organization
ಎಸ್​ಡಿಪಿಐ ಸಂಘಟನೆ ನಿಷೇದಕ್ಕೆ ಆಗ್ರಹಿಸಿ ಉಜಿರೆ, ಬೆಳ್ತಂಗಡಿಯಲ್ಲಿ ಪ್ರತಿಭಟನೆ
author img

By

Published : Dec 31, 2020, 5:00 PM IST

ಮಂಗಳೂರು: ಚುನಾವಣೆ ವಿಜಯೋತ್ಸವ ಸಂದರ್ಭ ಎಸ್​ಡಿಪಿಐ ಸಂಘಟನೆಯವರು ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ, ಸಂಘಟನೆಯನ್ನು ನಿಷೇಧಿಸಬೇಕೆಂದು ಬಿಜೆಪಿ‌ ದ.ಕ. ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಯುವ ಮೋರ್ಚಾ ವತಿಯಿಂದ ಉಜಿರೆ ನಗರದ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮಹಿಳಾ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷೆ ಮಾತನಾಡಿ, ಗ್ರಾಪಂ ಚುನಾವಣೆಯ ಸಂದರ್ಭದಲ್ಲಿ ಆಯಾ ಪಕ್ಷಗಳು ಸಂಭ್ರಮಾಚರಣೆ ಮಾಡೋದು ಸಹಜ. ಆದರೆ, ಎಸ್​ಡಿಪಿಐ ಕಾರ್ಯಕರ್ತರು ಭಾರತದ ಭೂಮಿಯಲ್ಲಿದ್ದು ಇಲ್ಲಿನ ಗಾಳಿ, ನೀರು ಸೇವನೆ ಮಾಡಿ ಪಾಕ್ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿರುವುದು ಖಂಡನೀಯ. ಈ ಮೂಲಕ ಅವರ ಮನೋದೌರ್ಬಲ್ಯವೇನು ಎಂದು ಈಗಾಗಲೇ ಜನತೆಗೆ ಅರ್ಥವಾಗಿದೆ. ಇಂತಹ ದುಷ್ಕೃತ್ಯವನ್ನು ಮಾಡಲು ಯತ್ನಿಸಿರುವ ಸಂಘಟನೆ ಇದೆ ಎಂದಾದಲ್ಲಿ ನಮ್ಮ ಯುವ ಜನತೆ ಯಾವ ದಾರಿ ಹಿಡಿಯಲಿದೆ ಎಂಬುದನ್ನು ನಾವೆಲ್ಲ ಊಹಿಸಿಕೊಳ್ಳಬಹುದು ಎಂದರು.

ಇತ್ತಿಚೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಈ ಸಂಘಟನೆ ಯತ್ನಿಸಿತ್ತು. ಇವರಿಗೆ ಮುತ್ತಿಗೆ ಹಾಕುವುದರಲ್ಲಿ ಅಷ್ಟೊಂದು ಆಸಕ್ತಿಯಿದ್ದಲ್ಲಿ ಗಡಿಯಲ್ಲಿ ನುಸುಳುಕೋರರು ಬಾರದಂತೆ ಮುತ್ತಿಗೆ ಹಾಕಲಿ. ದೇಶ ವಿರೋಧಿ ಚಟುವಟಿಕೆಗಳ ಮೂಲಕ ಎಸ್​ಡಿಪಿಐ ಪಕ್ಷದ ಬಲವರ್ಧನೆ ಮಾಡಬಹುದೆಂದು ನೀವು ಕನಸು ಕಂಡಲ್ಲಿ ಅದು ಖಂಡಿತ ನನಸಾಗೋದಿಲ್ಲ. ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡವರು ಒಂದು ದಿನ ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಪೀಪಿ ಊದಿ ಟೋಪಿ ಹಾಕಿದ ಕೂಡಲೇ ನೀವೇನು ಸುಭಗರಲ್ಲ.‌ ಎಸ್​ಡಿಪಿಐ ಬೆನ್ನಿಗೆ ಚೂರಿ ಹಾಕುವ ಸಂಘಟನೆ. ಭಯೋತ್ಪಾದಕರು, ಉಗ್ರವಾದಿಗಳನ್ನು ಎಲ್ಲೂ ಹುಡುಕಬೇಕೆಂದು ಇಲ್ಲ. ನಮ್ಮ ಸುತ್ತಲೂ ಪಾಪಾಸುಕಳ್ಳಿ ತರಹ ಹುಟ್ಟಿಕೊಳ್ಳುತ್ತಿದ್ದಾರೆ. ಆದ್ದರಿಂದ ಶೀಘ್ರವಾಗಿ ಸರಕಾರ ಹಾಗೂ ಕಾನೂನು ಎಸ್​ಡಿಪಿಐ ಪಕ್ಷವನ್ನು ನಿಷೇಧಿಸಬೇಕು ಎಂದು ಧನಲಕ್ಷ್ಮೀ ಗಟ್ಟಿ ಹೇಳಿದರು.

ಉಜಿರೆಯಲ್ಲಿ ‌ದೇಶದ್ರೋಹಿ ಘೋಷಣೆ ಕೂಗಿದ ಎಸ್​ಡಿಪಿಐ ವಿರುದ್ಧ ವಿಶ್ವ ಹಿಂದೂ ಪರಿಷತ್, ಬೆಳ್ತಂಗಡಿ ಬಜರಂಗದಳದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.