ETV Bharat / state

ಮಂಗಳೂರಲ್ಲಿ ಮರಳು ಸಮಸ್ಯೆಯಿಂದ ಕಾಮಗಾರಿಗಳಿಗೆ ಸಂಕಷ್ಟ, ನಾಳೆ ಪ್ರತಿಭಟನೆ: ಮಹಾಬಲ ಕೊಟ್ಟಾರಿ - President of Civil Contractors Association

ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆ, ಸಾಗಾಟ ಸ್ಥಗಿತಗೊಂಡಿದ್ದು ಹಲವರಿಗೆ ಉದ್ಯೋಗದ ಕೊರತೆಯಾಗಿದೆ. ಈ ಹಿನ್ನೆಲೆ ಶುಕ್ರವಾರ ಕಾಂಟ್ರ್ಯಾಕ್ಟರ್ ಮತ್ತು ಹಲವು ಅಸೋಸಿಯೇಶನ್​ನಗಳ ಬೆಂಬಲದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಮಹಾಬಲ ಕೊಟ್ಟಾರಿ ತಿಳಿಸಿದ್ದಾರೆ.

ಮಂಗಳೂರಲ್ಲಿ ಮರಳು ಸಮಸ್ಯೆt
ಮಂಗಳೂರಲ್ಲಿ ಮರಳು ಸಮಸ್ಯೆ
author img

By ETV Bharat Karnataka Team

Published : Nov 9, 2023, 5:16 PM IST

ಮರಳು ಸಮಸ್ಯೆ ಬಗ್ಗೆ ಮಹಾಬಲ ಕೊಟ್ಟಾರಿ ಮಾಹಿತಿ

ಮಂಗಳೂರು: ಯಾವುದೇ ಕಟ್ಟಡ, ಮನೆ, ರಸ್ತೆ ಮೊದಲಾದವುಗಳ ನಿರ್ಮಾಣಕ್ಕೆ ಅತಿ ಅಗತ್ಯವಾಗಿ ಬೇಕಾದದ್ದು ಮರಳು. ಮರಳು ಲಭ್ಯ ಇಲ್ಲ ಅಂದರೆ ಈ ನಿರ್ಮಾಣ ಕಾಮಗಾರಿಯ ಕಾರ್ಯ ಸ್ಥಗಿತಗೊಳ್ಳುತ್ತದೆ. ಈ ಪರಿಸ್ಥಿತಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆದೋರಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಡಿಕೆಯಿದ್ದರೂ ಮರಳಿನ ಅಭಾವದಿಂದ ಸಮಸ್ಯೆ ಉಂಟಾಗಿದೆ. ಜಿಲ್ಲೆಯಲ್ಲಿ ಎರಡು ಬಗೆಯ ಮರಳಿನ ಲಭ್ಯತೆ ಇದೆ. ಒಂದು ಸಿ ಆರ್ ಝಡ್ ಪ್ರದೇಶದ ನದಿ ಪಾತ್ರದಿಂದ ತೆಗೆಯುವ ಮರಳು ಮತ್ತೊಂದು ನಾನ್ ಸಿ ಆರ್ ಝಡ್ ಪ್ರದೇಶದಿಂದ ತೆಗೆಯುವ ಮರಳು. ಆದರೆ ಈ ಎರಡು ಬಗೆಯ ಮರಳು ಲಭ್ಯವಾಗುತ್ತಿಲ್ಲ.

ಸಿ ಆರ್ ಝಡ್ ಪ್ರದೇಶದಲ್ಲಿ ಮರಳು ತೆಗೆಯಲು ಜೂನ್‌ 1 ರಿಂದ ಆಗಸ್ಟ್​ 15ವರೆಗೆ ಅವಕಾಶ ಇರಲಿಲ್ಲ. ಆದರೆ ಈ ಪ್ರದೇಶದಲ್ಲಿ ಮರಳು ತೆಗೆಯಲು ಆ ಬಳಿಕವೂ‌ ಅನುಮತಿ ನೀಡಲಾಗಿಲ್ಲ. ನಾನ್ ಸಿ ಆರ್ ಝಡ್ ಪ್ರದೇಶದಲ್ಲಿ ವೇ ಬ್ರಿಡ್ಜ್​ ಮಾಡಬೇಕೆಂಬ ಷರತ್ತು ವಿಧಿಸಿ ಮರಳು ತೆಗೆಯಲು ಅವಕಾಶ ನೀಡುತ್ತಿಲ್ಲವಂತೆ.

ಮರಳು ಅಲಭ್ಯತೆ ವಿಚಾರ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಇದೆ. ಮರಳು ಕೊರತೆಯಿಂದ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ ಆಗಿದ್ದಲ್ಲದೆ, ಮರಳು ತೆಗೆಯುವವರು, ಲಾರಿ ಡ್ರೈವರ್, ಕಟ್ಟಡ ಕಾರ್ಮಿಕರು ಮೊದಲಾದವರಿಗೆ ಉದ್ಯೋಗ ಇಲ್ಲದಂತಾಗಿದೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಸಿವಿಲ್ ಕಾಂಟ್ರ್ಯಾಕ್ಟರ್ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಮರಳು ಅಭಾವದಿಂದ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ ಎದುರಾಗಿದೆ. ಸಿ ಆರ್ ಝಡ್ ಪ್ರದೇಶದಲ್ಲಿ ಅವಧಿಗಿಂತ ಮುಂಚೆಯೇ ಮರಳು ತೆಗೆಯುವುದನ್ನು ನಿಲ್ಲಿಸಲಾಗಿತ್ತು. ಆಗಸ್ಟ್​ 15 ಕ್ಕೆ ಆರಂಭಿಸಬೇಕಾದುದನ್ನು ಇನ್ನೂ ಆರಂಭಿಸಿಲ್ಲ. ನಾನ್ ಸಿ ಆರ್ ಝಡ್ ಪ್ರದೇಶದಲ್ಲಿ ವೇ ಬ್ರಿಡ್ಜ್ ನಿರ್ಮಾಣದ ನೆಪದಲ್ಲಿ ಮರಳು ತೆಗೆಯಲು ಬಿಡುತ್ತಿಲ್ಲ. ಆದರೆ ಕಾಳ ಸಂತೆಯಲ್ಲಿ ಮರಳು ಲಭ್ಯವಿದೆ. ಇದಕ್ಕೆ ಲೋಡ್​​ಗೆ 15 ರಿಂದ 18 ಸಾವಿರದವರೆಗೆ ದರ ವಸೂಲಿ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ನವೆಂಬರ್​ 10 ಕ್ಕೆ ಪ್ರತಿಭಟನೆ : ನಮಗೆ ಅಧಿಕೃತವಾಗಿ ಮರಳು ಸಿಗಬೇಕಾಗಿದೆ. ಇಲ್ಲಿ ಉದ್ಯೋಗವಿಲ್ಲದೆ ಕನ್ಸ್​​ಸ್ಟ್ರಕ್ಷನ್ ಕೆಲಸಗಾರರು ಬೇರೆ ಕಡೆಗೆ ಹೋಗುತ್ತಿದ್ದಾರೆ. ಹೀಗಾಗಿ ನಮ್ಮ ಕಟ್ಟಕಡೆಯ ನಿರ್ಧಾರ ಪ್ರತಿಭಟನೆ ಮಾಡುವುದು. ಸಮಸ್ಯೆ ಬಗ್ಗೆ ವಿಧಾನಪರಿಷತ್​ ಸದಸ್ಯರಿಗೂ ಕೂಡ ತಿಳಿಸಿಯಾಗಿದೆ. ಎಲ್ಲರಿಗೂ ಹೇಳಿಯಾಗಿದೆ. ಆದ್ದರಿಂದ ನಾವು ಪ್ರತಿಭಟನೆಯ ನಿರ್ಧಾರ ಕೈಗೊಂಡು ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಮಹಾಬಲ ಕೊಟ್ಟಾರಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಮರಳೆತ್ತುವ ಕಾರ್ಯ ಆರಂಭ-ಜಿಲ್ಲಾಧಿಕಾರಿ: ಈ ಕುರಿತು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ದ.ಕ. ಜಿಲ್ಲೆಯಲ್ಲಿ ಸಿಆರ್ ಝಡ್ ಹಾಗೂ ನಾನ್ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ಎತ್ತಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಶೀಘ್ರದಲ್ಲೇ ಮರಳೆತ್ತುವ ಕಾರ್ಯ ಆರಂಭವಾಗುವ ನಿರೀಕ್ಷೆಯಿದೆ. ಈ ಮೂಲಕ ಜಿಲ್ಲೆಯ ಮರಳು ಅಭಾವ ಸಮಸ್ಯೆ ನೀಗಲಿದೆ. ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬವನ್ನು ಗುರುತಿಸಿ ಜಿಲ್ಲೆಯ ಸಿಆರ್ ಝಡ್ ಕ್ಲಿಯರೆನ್ಸ್ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಆಗಿದೆ.

ಅದನ್ನು ಕ್ಲೀಯರೆನ್ಸ್​ಗೆ ಈಗಾಗಲೇ ರಾಜ್ಯ ಸಿಆರ್​ ಝಡ್​ಗೆ ಕಳುಹಿಸಲಾಗಿದೆ. ಅದು ಅಲ್ಲಿಂದ ಕ್ಲಿಯರ್ ಆಗಿ ಬಂದ ಬಳಿಕ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲಾಗುತ್ತದೆ. ನಾನ್​ ಸಿಆರ್​ ಝಡ್​ ವ್ಯಾಪ್ತಿಯಲ್ಲಿ ಮಳೆಗಾಲದ ಜೂನ್​ನಿಂದ ಅಕ್ಟೋಬರ್ 15 ರವರೆಗೆ ಮರಳುಗಾರಿಕೆ ನಡೆಸಲು ಅವಕಾಶವಿಲ್ಲ. ನಾನ್ ಸಿಆರ್ ಝಡ್ ನಲ್ಲಿ 25 ಮಂದಿ ಟೆಂಡರ್​ದಾರರಿದ್ದು, ನಿಯಮಗಳ ಪ್ರಕಾರ ಅವರೆಲ್ಲರೂ ವೇಯ್ ಬ್ರಿಡ್ಜ್ (ಮರಳು ತೂಕ ಮಾಡುವ ಬ್ರಿಡ್ಜ್) ಅಳವಡಿಸಲು ಅಕ್ಟೋಬರ್ 15ಕ್ಕೆ ಸಮಯಾವಕಾಶ ನೀಡಲಾಗಿತ್ತು.

ಆದರೆ ಟೆಂಡರ್​ದಾರರು ಅಷ್ಟೊಂದು ಶೀಘ್ರದಲ್ಲಿ ವೇಯ್ ಬ್ರಿಡ್ಜ್ ಅಳವಡಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿರುವ ಹಿನ್ನಲೆಯಲ್ಲಿ ಅವರಿಗೆ ಸಮಯಾವಕಾಶ ನೀಡಿ ಇದನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ. ಎಷ್ಟು ಬೇಗ ವೇಯ್ ಬ್ರಿಡ್ಜ್​ನ್ನು ಅವರು ಮಾಡುತ್ತಾರೋ. ಅಷ್ಟು ಬೇಗ ಮರಳೆತ್ತಲು ಅವಕಾಶ ನೀಡಲಾಗುತ್ತದೆ. ಈ ಸಮಸ್ಯೆ ಪರಿಹಾರವಾದ ತಕ್ಷಣ ಜಿಲ್ಲೆಯ ಮರಳು ಅಭಾವ ಸಮಸ್ಯೆ ನೀಗಲಿದೆ‌ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಕೊಲೆಟ್​, ಸಾಕ್ಸ್​ನಲ್ಲೂ ಚಿನ್ನ ಕಳ್ಳ ಸಾಗಣೆ.. ಮಂಗಳೂರು ಏರ್​ಪೋರ್ಟ್​ನಲ್ಲಿ 42.90 ಲಕ್ಷ ಮೌಲ್ಯದ ಗೋಲ್ಡ್​ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.