ಬಂಟ್ವಾಳ(ದಕ್ಷಿಣ ಕನ್ನಡ): ಬಂಟ್ವಾಳ ಪೇಟೆಯ ಕಂಟೇನ್ಮೆಂಟ್ ವಲಯದ ಗಡಿಯನ್ನು ಮರುನಿಗದಿಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ಹೊರಡಿಸಿದ್ದಾರೆ. ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣಕ್ಕೆ ನಿರ್ದಿಷ್ಟ ಗಡಿ ಗುರುತನ್ನು ತಿಳಿಸಲಾಗಿದೆ.
ಈ ಆದೇಶದ ಬಳಿಕ ಬಂಟ್ವಾಳ ಪುರಸಭೆ ಬಳಿಯಿಂದ ರಥಬೀದಿಯಲ್ಲಿದ್ದ ಗಡಿ ತೆರವುಗೊಳ್ಳಲಿದ್ದು, ರಸ್ತೆ ಕಂಟೇನ್ಮೆಂಟ್ ವಲಯದಿಂದ ಮುಕ್ತಗೊಂಡಂತಾಗುತ್ತದೆ. ಕೋವಿಡ್ ಪ್ರಕರಣಕ್ಕೆ ಸಂಬಂಧಿಸಿದವರು ವಾಸಿಸುವ ಮನೆಗಳ ಸುತ್ತಮುತ್ತಲಿನ ಪ್ರದೇಶವನ್ನಷ್ಟೇ ಹೊಸ ಮಾರ್ಗಸೂಚಿ ಅನ್ವಯ ಗುರುತು ಹಾಕಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಂಟೇನ್ಮೆಂಟ್ ಕುರಿತು ಪ್ರತಿಭಟಸಿದವರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ ಪೇಟೆಯಲ್ಲಿ ಕಂಟೇನ್ಮೆಂಟ್ ವಲಯವನ್ನು ಚಿಕ್ಕದು ಮಾಡುವಂತೆ ಆಗ್ರಹಿಸಿ ಈ ಮೊದಲು ಪ್ರತಿಭಟನೆ ನಡೆದಿದ್ದು, ಈ ಹಿನ್ನೆಲೆ ಗಡಿಯನ್ನು ಮರುನಿಗದಿಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಟೇನ್ಮೆಂಟ್ ವಲಯದೊಳಗೆ ಗುಂಪು ಸೇರಿರುವುದು ನಿಯಮವನ್ನು ಉಲ್ಲಂಘಿಸಿದಂತಾಗಿದ್ದು, ಈ ಹಿನ್ನೆಲೆಯಲ್ಲಿ ಗುಂಪೊಂದರ ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.