ETV Bharat / state

ಹೆದ್ದಾರಿ ಅವ್ಯವಸ್ಥೆ.. ಜನಪ್ರತಿನಿಧಿಗಳ ಮುಖವಾಡ ಧರಿಸಿ ಗಮನ ಸೆಳೆದ ಎಸ್​ಡಿಪಿಐ

author img

By

Published : Sep 29, 2020, 9:22 PM IST

ಮುಂದಿನ ಹತ್ತು ದಿನಗಳೊಳಗಾಗಿ ಹೆದ್ದಾರಿ ಗುಂಡಿಗಳನ್ನು ಮುಚ್ಚದೇ ಇದ್ದಲ್ಲಿ ಮುಂದೆ ಹೆದ್ದಾರಿ ತಡೆಯುವ ಮೂಲಕ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು..

ಎಸ್​ಡಿಪಿಐಯಿಂದ ಪ್ರತಿಭಟನೆ
ಎಸ್​ಡಿಪಿಐಯಿಂದ ಪ್ರತಿಭಟನೆ

ಬಂಟ್ವಾಳ : ಮೇಲ್ಕಾರ್ ಮತ್ತು ಕಲ್ಲಡ್ಕ ಜಂಕ್ಷನ್​ಗಳಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಜನಪ್ರತಿನಿಧಿಗಳ ಮುಖವಾಡ ಧರಿಸಿ ಅಣಕು ಪ್ರದರ್ಶನ ಮಾಡ್ಲಾಯಿತು.

ಜನಪ್ರತಿನಿಧಿಗಳ ಮುಖವಾಡ ಧರಿಸಿ ಗಮನ ಸೆಳೆದ ಎಸ್​ಡಿಪಿಐ

ಕಲ್ಲಡ್ಕದಲ್ಲಿ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಮುಂದಿನ ಹತ್ತು ದಿನಗಳೊಳಗಾಗಿ ಹೆದ್ದಾರಿ ಗುಂಡಿಗಳನ್ನು ಮುಚ್ಚದೇ ಇದ್ದಲ್ಲಿ ಮುಂದೆ ಹೆದ್ದಾರಿ ತಡೆಯುವ ಮೂಲಕ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮೇಲ್ಕಾರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್​ಡಿಪಿಐ ರಾಜ್ಯ ಅಧ್ಯಕ್ಷರಾದ ಇಲ್ಲಿಯಾಸ್ ಮೊಹಮ್ಮದ್ ತುಂಬೆ ಮಾತನಾಡಿ, ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡದೆ ಜನರ ಹಕ್ಕನ್ನು ಹತ್ತಿಕುವ ಪ್ರಯತ್ನಕ್ಕೆ ಕೈಹಾಕಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್‌ ಎಸ್‌ ಹೆಚ್. ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕ, ಪ್ರಮುಖರಾದ ಸಲೀಂ ಕುಂಪನಮಜಲ್, ಮುನೀಶ್ ಅಲಿ, ಇದ್ರೀಸ್ ಪಿ ಜೆ, ಸಲೀಂ ಅಲಾಡಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.