ಸುಳ್ಯ: ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಹತ್ಯೆಯಾಗಿ ತಿಂಗಳು ಸಹ ಆಗಿಲ್ಲ. ಈ ನಡುವೆ ಅವರು ಮನೆಯಲ್ಲಿ ಸಾಕಿದ್ದ ನಾಯಿಯೊಂದು ಮೃತಪಟ್ಟಿದೆ. ಪ್ರವೀಣ್ ನೆಟ್ಟಾರು ಈ ಹಿಂದಿನಿಂದಲೂ ಪ್ರಾಣಿ ಪ್ರಿಯರಾಗಿದ್ದರು.
ಪ್ರವೀಣ್ ಅವರು ತಮ್ಮ ಮನೆಯಲ್ಲಿ ಶ್ವಾನವೊಂದನ್ನು ಸಾಕಿದ್ದರು. ಪ್ರವೀಣ್ ನಿಧನದ ಬಳಿಕ ಕಳೆದ ಕೆಲವು ದಿನಗಳಿಂದ ಈ ಶ್ವಾನ ಅನಾರೋಗ್ಯಕ್ಕೆ ತುತ್ತಾಗಿತ್ತು ಎನ್ನಲಾಗುತ್ತಿದೆ. ಇದೀಗ ಆ ಶ್ವಾನ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಪ್ರವೀಣ್ ಅವರ ಕುಟುಂಬದವರೂ ಇದನ್ನು ದೃಢಪಡಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯಾಗುವ ಕೆಲವು ದಿನಗಳ ಹಿಂದೆ ಬೀದಿಯಲ್ಲಿದ್ದ ಎರಡು ನಾಯಿ ಮರಿಗಳನ್ನು ರಕ್ಷಿಸಿದ್ದರು. ಈ ಕುರಿತಂತೆ ಸ್ವತಃ ಪ್ರವೀಣ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಟೋ ಸಹಿತ ಈ ಮಾಹಿತಿ ಪ್ರಕಟಿಸಿದ್ದರು. 'ಯಾರೂ ಮೂಕ ಪ್ರಾಣಿಗಳನ್ನು ದಾರಿಯಲ್ಲಿ ಬಿಡಬೇಡಿ, ಅವುಗಳನ್ನು ದಾರಿಯಲ್ಲಿ ಬಿಡುವ ಹೀನಾಯ ಮತ್ತು ದುಷ್ಟ ಪ್ರವೃತ್ತಿ ಮಾಡಬೇಡಿ. ನನಗೆ ಒಂದು ಜೀವ ಉಳಿಸಿದ ಸಾರ್ಥಕತೆ ಇದೆ' ಎಂದು ಪ್ರವೀಣ್ ಪೋಸ್ಟ್ ಹಾಕಿದ್ದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು