ETV Bharat / state

ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ: ಎನ್ಐಎಗೆ ಜಿಲ್ಲೆಯಿಂದ 9 ಪೊಲೀಸರ ನೇಮಕ - ರಾಷ್ಟ್ರೀಯ ತನಿಖಾ ದಳ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ತನಿಖೆಗೆ ಎನ್ಐಎಗೆ ಸಹಕಾರ ನೀಡಲು 9 ಮಂದಿ ಜಿಲ್ಲೆಯ ಪೊಲೀಸರನ್ನು ನೇಮಕ ಮಾಡಿ ಎಡಿಜಿಪಿ ಆದೇಶ ಮಾಡಿದ್ದಾರೆ.

praveen-nettaru-murder-case-9policemen-appointed-to-nia
ಪ್ರವೀಣ್ ನೆಟ್ಟಾರು
author img

By

Published : Aug 26, 2022, 11:13 AM IST

ಸುಳ್ಯ (ದಕ್ಷಿನ ಕನ್ನಡ) : ಬೆಳ್ಳಾರೆಯ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಹತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಇದೀಗ NIA ಜೊತೆಗೆ ತನಿಖೆಗೆ ಸಹಕರಿಸಲು 9 ಮಂದಿ ಜಿಲ್ಲೆಯ ಪೊಲೀಸರನ್ನು ನೇಮಕ ಮಾಡಿ ಎಡಿಜಿಪಿ ಆದೇಶ ಮಾಡಿದ್ದಾರೆ.

praveen-nettaru-murder-case-9policemen-appointed-to-nia
ಏನ್ಐಎಗೆ ಜಿಲ್ಲೆಯಿಂದ 9 ಪೋಲಿಸರ ನೇಮಕ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೆತ್ತಿಕೊಂಡಿದೆ. ಎನ್ಐಎ ತನಿಖೆಗೆ ಸಹಕರಿಸಲು ಒಂದು ತಿಂಗಳವರೆಗೆ ಒಒಡಿ ಮೂಲಕ ಬೆಂಗಳೂರು ಎನ್ಐಎ ವಿಭಾಗದ ಅಧಿಕಾರಿಗಳ‌ ಜೊತೆ ಪ್ರಕರಣದ ತನಿಖೆಗಾಗಿ ಜಿಲ್ಲೆಯ 9 ಪೊಲೀಸ್ ಅಧಿಕಾರಿಗಳನ್ನು ಎಡಿಜಿಪಿ ಡಾ ಎಮ್​ ಎ ಸಲೀಂ ಐಪಿಸ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಬೆಂಗಳೂರಿನ ಎನ್ಐಎ ಕಚೇರಿಗೆ ವರದಿ ಮಾಡಿಕೊಳ್ಳಲು ತಿಳಿಸಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಉದಯ ರವಿ, ವೇಣೂರು ಠಾಣೆಯ ಹೆಡ್ ಕಾನ್ಸ್​ಟೇಬಲ್​ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್​​ ಪ್ರವೀಣ್ ರೈ ಮತ್ತು ಆದ್ರಾಮ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್​ ಉದಯ ರೈ, ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್ ರೈ ಮತ್ತು ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್ ಅನಿಲ್ ಇವರನ್ನು ಒಳಗೊಂಡ ಪೋಲಿಸರ ತಂಡವನ್ನು ಒಂದು ತಿಂಗಳವರೆಗೆ ಎನ್ಐಎಗೆ ಒಒಡಿ ಮೂಲಕ ನೇಮಕ ಮಾಡಲಾಗಿದೆ.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಗೌರವಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.