ETV Bharat / state

ಧರ್ಮಸ್ಥಳದಲ್ಲಿ ಕಮ್ಮಟದ ಬದಲು ನಡೆಯಿತು ‘ಪ್ರಾರ್ಥನಾ ಸಮಾವೇಶ’ - Prarthana samavesh in Dharmasthala

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ಭಜನಾ ತರಬೇತಿ ಸಮಿತಿಯಿಂದ 22 ನೇ ವರ್ಷದ ಭಜನಾ ತರಬೇತಿ ಕಮ್ಮಟದ ಬದಲಾಗಿ ಸಾಂಕೇತಿಕವಾಗಿ ‘ಪ್ರಾರ್ಥನಾ ಸಮಾವೇಶ’ ಇಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು.

ಪ್ರಾರ್ಥನಾ ಸಮಾವೇಶ
ಪ್ರಾರ್ಥನಾ ಸಮಾವೇಶ
author img

By

Published : Oct 3, 2020, 8:39 PM IST

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ಭಜನಾ ತರಬೇತಿ ಸಮಿತಿಯಿಂದ 22 ನೇ ವರ್ಷದ ಭಜನಾ ತರಬೇತಿ ಕಮ್ಮಟದ ಬದಲಾಗಿ ಸಾಂಕೇತಿಕವಾಗಿ ‘ಪ್ರಾರ್ಥನಾ ಸಮಾವೇಶ’ ಇಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು.

Prarthana samavesh in Dharmasthala
ಪ್ರಾರ್ಥನಾ ಸಮಾವೇಶ

ಪ್ರಾರ್ಥನಾ ಸಮಾವೇಶದಲ್ಲಿ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಸಮಾಜದ ಜನಸಾಮಾನ್ಯರಲ್ಲಿ ಧಾರ್ಮಿಕ ಭಾವನೆ ಉಳಿಸುವ ಪ್ರಯತ್ನ ಭಜನಾ ಕಮ್ಮಟದಿಂದ ಸಾಧ್ಯವಾಗಿದೆ. ಮಾನವೀಯ ಮೌಲ್ಯ ನಮ್ಮಲ್ಲಿ ಅಳವಡಿಸಿಕೊಂಡು ಪ್ರಕೃತಿ ಮತ್ತು ನಿಸರ್ಗವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನಸ್ಸನ್ನು ಪರಿಶುದ್ಧ ಮಾಡಿ ಭಗವಂತನನ್ನು ಪ್ರಾರ್ಥಿಸಿ. ತುಳು ವಿದ್ವಾಂಸ, ನಿವೃತ್ತ ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್ ಅವರು, ಭಗವಂತನ ಜಪಿಸಿ ನೆಲೆಯಾಗುವುದೇ ‘ಭಜನೆ’. ಆಡಂಬರದ ಸಂಪತ್ತು ಬದುಕಲ್ಲ. ದೇವರ ಆರಾಧನೆಯೇ ಬದುಕಿನ ಸಾರ್ಥಕತೆ ಎಂದು ಹೇಳಿದರು.

Prarthana samavesh in Dharmasthala
ಪ್ರಾರ್ಥನಾ ಸಮಾವೇಶ

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಹೆಚ್ಚು ಜನ ಸೇರಿದರೆ ಅಪಾಯ ಎಂದು ಅರಿತು ಸಾಂಕೇತಿಕವಾಗಿ ಈ ವರ್ಷ ‘ಪ್ರಾರ್ಥನಾ ಸಮಾವೇಶ’ವನ್ನು ನಡೆಸಿದ್ದೇವೆ. ಭಜನೆಯಿಂದ ಸಂಘಟನಾ ಶಕ್ತಿ, ಭಜನಾ ಮಂಡಳಿಗಳು ಉತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಿರುವುದರಿಂದ ಭಜನೆಯ ಬಗ್ಗೆ ಗೌರವ, ಶ್ರದ್ಧೆ, ಭಕ್ತಿ ಹೆಚ್ಚಾಗಿದೆ. ಮುಂದಿನ ವರ್ಷದಿಂದ ಲಕ್ಷಾಂತರ ಜನರಿಗೆ ಭಜನಾ ಕಮ್ಮಟದ ತರಬೇತಿಯನ್ನು ವೀಕ್ಷಿಸಲು ಆನ್‌ಲೈನ್ ಮೂಲಕ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.