ಮಂಗಳೂರು : ನಗರದ ಪಣಂಬೂರು ನವ ಮಂಗಳೂರು ಬಂದರು ವತಿಯಿಂದ ರಾಷ್ಟ್ರ ಮಟ್ಟದ ಹತ್ತು ಪ್ರಮುಖ ಬಂದರು ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜೆಎನ್ಸಿ ಹಾಲ್‌ನಲ್ಲಿ ನಡೆಯಿತು.
ಕೋಲ್ಕತ್ತಾ, ಮುಂಬೈ ಹಾಗೂ ಮಂಗಳೂರು ಬಂದರಿನ ಸಿಬ್ಬಂದಿ, ಚೆನ್ನೈ, ಕೇರಳ, ಗುಜರಾತ್, ಗೋವಾ ಮುಂತಾದ ಬಂದರುಗಳ ಸಿಬ್ಬಂದಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಅಧಿಕ ಬಂದರು ಸಿಬ್ಬಂದಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ಈ ಕಾರ್ಯಕ್ರಮವು ಇಂದು ಮುಕ್ತಾಗೊಂಡಿದೆ. ಈ ಪ್ರದರ್ಶನದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲೆಯನ್ನು ಬಂದರು ಸಿಬ್ಬಂದಿ ನೃತ್ಯ, ಸಂಗೀತ, ನಾಟಕಗಳ ಮೂಲಕ ಪ್ರದರ್ಶಿಸಿದ್ದಾರೆ.