ETV Bharat / state

ಉಡುಪಿಯಿಂದ ಕಲಬುರಗಿಗೆ ಹೊರಟಿದ್ದ ಕಾರ್ಮಿಕರ ಬಸ್​ಗೆ ಪೊಲೀಸರಿಂದ ತಡೆ - Kalaburagi Railway Station

ಮಂಗಳೂರಿನಲ್ಲಿ ಛತ್ತೀಸ್​ಘಡಕ್ಕೆ ತೆರಳುವ ರೈಲು ವ್ಯವಸ್ಥೆ ಇಲ್ಲದಿರುವುದರಿಂದ ಮಧ್ಯವರ್ತಿಯೋರ್ವನ ಸಹಾಯ ಪಡೆದ ಕಾರ್ಮಿಕರೆಲ್ಲರೂ ಇ-ಪಾಸ್ ಪಡೆದು ಕಲಬುರಗಿಗೆ ತೆರಳಲು ಬಸ್​​ನಲ್ಲಿ ಹೊರಟಿದ್ದರು. ಈ ವೇಳೆ ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ಬಸ್​ ತಡೆದ ಪೊಲೀಸರು, ವಾಪಸ್​​ ಕಳುಹಿಸಿದ್ದಾರೆ.

Police stopped workers bus those who planned to travel Udupi to kalburgi
ಉಡುಪಿಯಿಂದ ಕಲಬುರಗಿಗೆ ಹೊರಟಿದ್ದ ಕಾರ್ಮಿಕರ ಬಸ್​ಗೆ ಪೊಲೀಸರಿಂದ ತಡೆ
author img

By

Published : May 13, 2020, 10:31 PM IST

ಉಡುಪಿ(ದಕ್ಷಿಣ ಕನ್ನಡ): ತಲಪಾಡಿಯಿಂದ ಕಾರ್ಮಿಕರನ್ನು ತುಂಬಿಕೊಂಡು ಕಲಬುರಗಿಗೆ ಹೊರಟಿದ್ದ ಖಾಸಗಿ ಬಸ್​ಅನ್ನು ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ತಡೆಯಲಾಗಿದೆ. ಪೊಲೀಸರು ವಾಹನವನ್ನು ಮರಳಿ ತಲಪಾಡಿಗೆ ಕಳುಹಿಸಿದ್ದಾರೆ. ಗಾರೆ ಕೆಲಸ ನಿರ್ವಹಿಸುತ್ತಿದ್ದ ಛತ್ತೀಸ್​ಘಡ ಮೂಲದ ಸುಮಾರು 26 ಜನ ಕಾರ್ಮಿಕರು ಲಾಕ್​​ಡೌನ್​​ ಹಿನ್ನೆಲೆ ತಾಯ್ನಾಡಿಗೆ ತೆರಳಲಾಗದೆ ಅಲ್ಲೇ ಉಳಿದಿದ್ದರು.

ಮಂಗಳೂರಿನಲ್ಲಿ ಛತ್ತೀಸ್​ಘಡಕ್ಕೆ ತೆರಳುವ ರೈಲು ವ್ಯವಸ್ಥೆ ಇಲ್ಲದಿರುವುದರಿಂದ ಮಧ್ಯವರ್ತಿಯೋರ್ವನ ಸಹಾಯ ಪಡೆದ ಕಾರ್ಮಿಕರೆಲ್ಲರೂ ಇ-ಪಾಸ್ ಪಡೆದು ಕಲಬುರಗಿಯ ರೈಲು ನಿಲ್ದಾಣದವರೆಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿಂದ ರೈಲು ಮೂಲಕ ಛತ್ತೀಸ್​​ಘಡಕ್ಕೆ ತೆರಳುವವರಿದ್ದರು.

ಇಬ್ಬರು ಚಾಲಕರೊಂದಿಗೆ ಹೆಜಮಾಡಿಯ ಉಡುಪಿ ಗಡಿ ಭಾಗಕ್ಕೆ ಬಸ್​ ಆಗಮಿಸಿದ್ದು, ತಪಾಸಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಾಪು ಪಿಎಸ್ಐ ರಾಜಶೇಖರ ಸಾಗನೂರು, ಬಸ್​​ ತಡೆದು ವಿಚಾರಿಸಿದರು. ಈ ವೇಳೆ ಕಾರ್ಮಿಕರಲ್ಲಿ ಓರ್ವ ಮಾತನಾಡಿ, ಕಲಬುರಗಿಯಿಂದ ರೈಲಿನಲ್ಲಿ ಹೋಗುವುದಾಗಿ ತಿಳಿಸಿದಾಗ, ಅಲ್ಲಿನ ಪ್ರಸಕ್ತ ಪರಿಸ್ಥಿತಿ ಕುರಿತು ಪಿಎಸ್​ಐ ವಿವರಿಸಿದರು.

ಕಲಬುರಗಿಯಲ್ಲಿ ಈಗಾಗಲೇ ಸೀಲ್​​​ ಡೌನ್​​ ಮಾಡಲಾಗಿದೆ. ನೀವು ಮುಂಗಡ ಟಿಕೆಟ್​​ ಪಡೆಯದೆ ಕಲಬುರಗಿಯಲ್ಲಿ ಉಳಿಯಲು ಯಾವುದೇ ವ್ಯವಸ್ಥೆಯನ್ನೂ ಮಾಡದೆ, ಏಕಾಏಕಿ ಹೊರಟರೆ ಸಮಸ್ಯೆಯಲ್ಲಿ ಸಿಲುಕಬೇಕಾದೀತು. ಬಸ್​​ ನೇರವಾಗಿ ಛತ್ತೀಸ್​ಘಡಕ್ಕೆ ಚಲಿಸುವುದೇ ಆದರೆ ಅನುಮತಿ ನೀಡುತ್ತೇವೆ. ಇಲ್ಲವಾದರೆ ಮಂಗಳೂರಿನಿಂದ ರೈಲು ಮೂಲಕ ಹೋಗುವಂತೆ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.