ಮಂಗಳೂರು: ಉಳ್ಳಾಲ ಬಳಿ ಕಡಲಿಗೆ ತ್ಯಾಜ್ಯ ಸುರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆ.ಎ 19 ಬಿ 7955 ನಂಬರಿನ ಲಾರಿಯಲ್ಲಿ ಒಂದು ಲೋಡ್ ತ್ಯಾಜ್ಯ ತಂದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಡಲಿಗೆ ಸುರಿಯಲಾಗಿತ್ತು. ತ್ಯಾಜ್ಯ ಸುರಿದ ವಿಡಿಯೋದೊಂದಿಗೆ ಉಳ್ಳಾಲ ನಗರಸಭೆ ಪೊಲೀಸ್ ಠಾಣೆಗೆ ದೂರು ನೀಡಿತ್ತು.
ಓದಿ : ಕೇರಳಿಗರಿಗೆ ಆರ್ಟಿಪಿಸಿಆರ್ ಪರೀಕ್ಷೆ ಬಳಿಕ ರಾಜ್ಯದೊಳಗೆ ಅನುಮತಿ: ದ.ಕ ಜಿಲ್ಲಾಧಿಕಾರಿ
ತನಿಖೆಗಿಳಿದ ಉಳ್ಳಾಲ ಪೊಲೀಸರು, ತ್ಯಾಜ್ಯ ಸುರಿದ ವಾಹನವನ್ನು ವಶಕ್ಕೆ ಪಡೆದು ಉಳ್ಳಾಲ ನಗರಸಭೆ ಆರೋಗ್ಯಾಧಿಕಾರಿಗೆ ಹಸ್ತಾಂತರಿಸಿದ್ದಾರೆ. ವಶಪಡಿಸಿಕೊಂಡ ಲಾರಿ ಉಳಾಯಿಬೆಟ್ಟುವಿನ ಉಸ್ಮಾನ್ ಎಂಬವರಿಗೆ ಸೇರಿದ್ದು, ಅಬ್ದುಲ್ ಖಾದರ್ ಎಂಬವರು ಇದನ್ನು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.