ಸುಳ್ಯ(ದಕ್ಷಿಣ ಕನ್ನಡ): ಪೋಲೀಸರು ಒಂಟಿ ಮಹಿಳೆಯೊಬ್ಬಳಿಗೆ ಆಹಾರ ದಿನಸಿಯನ್ನು ನೀಡಿ ಮಾನವೀಯತೆ ತೋರಿಸಿದ ಘಟನೆ ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ನಡೆದಿದೆ.
ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ವನಜಾಕ್ಷಿ ಎಂಬ ಒಂಟಿ ಮಹಿಳೆಯೊಬ್ಬರು ವಾಸವಾಗಿದ್ದಾರೆ. ಕೈ ಮುರಿದುಕೊಂಡು ಮನೆಯಲ್ಲಿದ್ದ ವನಜಾಕ್ಷಿ ಅವರು ಆಹಾರಕ್ಕಾಗಿ ತೊಂದರೆ ಎದುರಿಸುತ್ತಿರುವುದನ್ನು ಮನಗಂಡ ಬೆಳ್ಳಾರೆ ಠಾಣಾಧಿಕಾರಿ ಅಂಜನೇಯ ರೆಡ್ಡಿ ಮತ್ತು ಸಿಬ್ಬಂದಿ ಅಗತ್ಯ ಸಾಮಗ್ರಿಯನ್ನು ಮನೆವರೆಗೂ ಹುಡುಕಿಕೊಂಡು ಹೋಗಿ ಕೊಟ್ಟಿದ್ದಾರೆ.
ಕೊರೊನಾ ಲಾಕ್ಡೌನ್ ನಡುವೆ ತೀವ್ರ ಕೆಲಸದ ಒತ್ತಡದಲ್ಲೂ ಪೋಲೀಸರು ತೋರಿಸಿದ ಮಾನವೀಯ ಕಾರ್ಯಕ್ಕೆ ಮಹಿಳೆಯ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.