ETV Bharat / state

ಇಲ್ಯಾಸ್ ತುಂಬೆಯಿಂದ ಪೊಲೀಸ್​ ಕಮಿಷನರ್​ ಹರ್ಷ ಮೇಲೆ ಧರ್ಮ ಭೇದ ಆರೋಪ

ಮಂಗಳೂರು ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ಅವರನ್ನು ಅಮಾನತು ಮಾಡಬೇಕಿತ್ತು. ಸಾಧ್ಯವಾದರೆ ಅವರೇ ರಾಜಿನಾಮೆ ನೀಡಬೇಕಿತ್ತು ಎಂದು ಎಸ್​.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹ್ಮದ್​ ತುಂಬೆ ತಿರುಗೇಟು ನೀಡಿದ್ದಾರೆ.

Police Commissioner Harsha accused of religion discrimination
ಇಲ್ಯಾಸ್ ತುಂಬೆಯಿಂದ ಪೊಲೀಸ್​ ಕಮಿಷನರ್​ ಹರ್ಷ ಮೇಲೆ ಧರ್ಮ ಭೇದ ಆರೋಪ
author img

By

Published : Feb 26, 2020, 10:30 AM IST

ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ಅವರನ್ನು ಅಮಾನತು ಮಾಡಬೇಕಿತ್ತು. ಸಾಧ್ಯವಾದರೆ ಅವರೇ ರಾಜಿನಾಮೆ ನೀಡಬೇಕಿತ್ತು ಎಂದು ಎಸ್​.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹ್ಮದ್​ ತುಂಬೆ ತಿರುಗೇಟು ನೀಡಿದ್ದಾರೆ.

ಇಲ್ಯಾಸ್ ತುಂಬೆಯಿಂದ ಪೊಲೀಸ್​ ಕಮಿಷನರ್​ ಹರ್ಷ ಮೇಲೆ ಧರ್ಮ ಭೇದ ಆರೋಪ

ಮುಸ್ಲಿಂ ಐಕ್ಯತಾ ವೇದಿಕೆಯಿಂದ ಸಿಎಎ, ಎನ್ಆರ್ ಸಿ, ಎನ್ ಪಿಆರ್ ಕಾಯ್ದೆಯ ವಿರುದ್ಧ ನಗರದ ಕುದ್ರೋಳಿಯ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ನಡೆದ 'ಕುದ್ರೋಳಿ ಚಲೋ' ಬೃಹತ್ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹರ್ಷ ಅವರು ತಮ್ಮ ಮೇಲೆ ಪ್ರಕರಣ ದಾಖಲಾಗಿ ತಮ್ಮ ಕೆಲಸ ಹೋಗುತ್ತೆ ಎಂದಾಗ ಮುಸಲ್ಮಾನ ಮುಖಂಡರ ಜೊತೆಗೆ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಅವರಿಗೆ ಚೂರು ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಛೇಡಿಸಿದರು.

ನಿನ್ನೆ ದೆಹಲಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ಲಾಠಿಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಹಿಂಸಿಸಿರುವ ಪೊಲೀಸರಿಗೂ, ಇತ್ತೀಚೆಗೆ ಮಂಗಳೂರಿನಲ್ಲಿ ಲಾಠಿಚಾರ್ಜ್ ನಡೆಸಿ ಗೋಲಿಬಾರ್ ಮಾಡಿದ ಪೊಲೀಸರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದರು.

ಪೊಲೀಸರೇ, ಬಜರಂಗದಳದವರು ಅಥವಾ ಹಿಂದೂ ಸಂಘಟನೆಯವರು ಪ್ರತಿಭಟನೆ ಮಾಡಿದಾಗ ನೀವು ಇದೇ ರೀತಿ ಪ್ರತಿಕ್ರಿಯಿಸುತ್ತಿದ್ದಿರಾ?. ಮಂಗಳೂರಿಗೆ ಹಿಂದೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಬಂದಾಗ ನಿಷೇಧಾಜ್ಞೆ ಜಾರಿಗೊಳಿಸಿ, 144 ಸೆಕ್ಷನ್ ಹಾಕಿದ್ದರೂ, ಆರ್ ಎಸ್ಎಸ್, ಬಜರಂಗದಳದ ಗೂಂಡಾಗಳು ಕಟೌಟ್ ಗಳನ್ನು ಹರಿದು, ಚಿಂದಿ ಮಾಡಿದ್ದರು. ನೀವು ಅವರಿಗೆ ಲಾಠಿಚಾರ್ಜ್ ಮಾಡಿದ್ದೀರಾ?, ಕನಿಷ್ಠ ಪಕ್ಷ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದೀರಾ? ಎಂದು‌ ಇಲ್ಯಾಸ್ ತುಂಬೆ ಪೊಲೀಸರಿಗೆ ಪ್ರಶ್ನಿಸಿದರು.

ಪೊಲೀಸರು ದ. ಕ. ಜಿಲ್ಲೆಯಲ್ಲಿ ಶಾಂತಿಯಿಂದ ಇರಬೇಕು ಎಂದು ನಮ್ಮಲ್ಲಿ ಹೇಳುತ್ತಿದ್ದಾರೆ. ಆದರೆ, ನೀವು ಶಾಂತಿಯಿಂದ ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದೀರಿ. ಕಲ್ಲಡ್ಕ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಕೃತ್ಯವನ್ನು ಮಕ್ಕಳಿಂದ ಅಣಕು ದೃಶ್ಯ ಮಾಡಿಸಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಪ್ರಕರಣವನ್ನೇ ದಾಖಲಿಸಿಲ್ಲ. ಆದರೆ, ಪ್ರತಿಭಟನೆಯೊಂದಕ್ಕೆ ಜನ ಸೇರಿಸಬೇಕು ಎಂದು ಕರೆ ನೀಡಿರುವ ರಿಯಾಝ್ ಫರಂಗಿಪೇಟೆಯವರ ಮೇಲೆ ದೇಶದ್ರೋಹದ ಕೇಸ್ ದಾಖಲಿಸುತ್ತೀರಿ. ಇದಕ್ಕೆ ಏನು ಉತ್ತರ ಕೊಡುತ್ತೀರಿ ಪೊಲೀಸರೇ ಎಂದು ಇಲ್ಯಾಸ್ ತುಂಬೆ ಪೊಲೀಸರ ಮೇಲೆ ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.