ಪುತ್ತೂರು: ಇಲ್ಲಿನ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಜೂಜಾಟದಲ್ಲಿ ನಿರತರಾಗಿದ್ದ 15 ಜನರನ್ನು ಬಂಧಿಸಿದ್ದಾರೆ.
ನಗರದ ಮಾರ್ಕೆಟ್ ರಸ್ತೆಯ ಸಮೀಪದಲ್ಲಿರುವ ಕ್ಲಬ್ ನಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 15 ಜನರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದೂವರೆ ಲಕ್ಷಕ್ಕೂ ಅಧಿಕ ಹಣ ಸೇರಿದಂತೆ 4 ಟೇಬಲ್,14 ಚೇರ್, ಆಡಲು ಉಪಯೋಗಿಸಿದ 208 ಇಸ್ಪೀಟ್ ಕಾರ್ಡ್ಸ್, ಎರಡು ಮದ್ಯದ ಬಾಟಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿಯವರ ನಿರ್ದೇಶನದಂತೆ ಪುತ್ತೂರು ನಗರ ಠಾಣೆ ಇನ್ಸ್ ಪೆಕ್ಟರ್ ಗೋಪಾಲ ನಾಯ್ಕ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆಯಲ್ಲಿ ಪಿಎಸ್ಐ ಜಂಬೂರಾಜ್, ಎ.ಎಸ್ ಐ ಲೋಕನಾಥ್, ಹೆಡ್ ಕಾನ್ಸಟೇಬಲ್ ಗಳಾದ ಕೃಷ್ಣಪ್ಪ, ಜಯರಾಮ, ಜಗದೀಶ್, ಜಸವರಾಜ್, ವಿಶ್ವನಾಥ, ಶ್ರೀಶೈಲ, ಲಕ್ಷ್ಮೀಶ್ ಭಾಗವಹಿಸಿದ್ದರು.