ಸುಳ್ಯ : ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರೋ ಅಭ್ಯರ್ಥಿಯನ್ನೇ ಪೊಲೀಸರು ಬಂಧಿಸಿರೋ ಘಟನೆ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಅಲಿಯಾಸ್ ನಾರಾಯಣ ಪುಚ್ಚಮ ಎಂಬ ಅಭ್ಯರ್ಥಿಯೇ ಬಂಧಿತ ಆರೋಪಿ. ಈತನ ಮೇಲೆ ತನ್ನ ಸೋದರ ಸಂಬಂಧಿಯಾದ ಅಪ್ರಾಪ್ತೆಯನ್ನ ಅತ್ಯಾಚಾರಗೈದ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಾರೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಕಲ್ಮಡ್ಕ ಗ್ರಾಮದ ವಾರ್ಡ್1ರಿಂದ ಹುಕ್ರಪ್ಪ ಸ್ಪರ್ಧಿಸಿದ್ದಾರೆ. ಬಾಲಕಿಯ ಮನೆಯವರ ದೂರಿನ ಮೇರೆಗೆ ಬೆಳ್ಳಾರೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.