ETV Bharat / state

ಸ್ಯಾನಿಟರಿ ನ್ಯಾಪ್​ಕಿನ್ ವಿಲೇವಾರಿಗೆ ಕಿಲ್ಪಾಡಿ ಗ್ರಾ.ಪಂನಿಂದ ಪಿಂಕ್ ಬಾಕ್ಸ್

ಉಪಯೋಗಿಸಿ ಬಿಸಾಡುವ ನ್ಯಾಪ್​ಕಿನ್​ಗಳನ್ನು ಸಂಗ್ರಹಿಸುವ ಸಲುವಾಗಿ ಋತು ಎಂಬ ಶೀರ್ಷಿಕೆಯಡಿ ಪಿಂಕ್ ಬಾಕ್ಸ್ ಪರಿಕಲ್ಪನೆಯನ್ನು ಕಿಲ್ಪಾಡಿ ಗ್ರಾ.ಪಂನಲ್ಲಿ ಜಾರಿಗೆ ತರಲಾಗಿದೆ. ಗ್ರಾ.ಪಂ ಕಚೇರಿ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಪ್ರತೀ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೊಂದರಂತೆ ಗುಲಾಬಿ ಬಣ್ಣದ ಡಸ್ಟ್ ಬಿನ್​ಗಳನ್ನು ಇಡಲಾಗುತ್ತದೆ. ಇದನ್ನು ಮಕ್ಕಳ ಕೈಗೆ ಸಿಗದಷ್ಟು ಎತ್ತರದಲ್ಲಿಟ್ಟು ಕೇವಲ ಮಹಿಳೆಯರು ಪ್ರವೇಶಿಸುವಂತಹ ಕೋಣೆಗಳಲ್ಲಿ ಅಳವಡಿಸಲಾಗುತ್ತದೆ.

pink-box
ಪಿಂಕ್ ಬಾಕ್ಸ್
author img

By

Published : Sep 30, 2021, 8:52 AM IST

ಮಂಗಳೂರು: ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಸದ್ಯದ ಅನಿವಾರ್ಯತೆಯಾಗಿದೆ. ಇದೀಗ ಅದೇ ಪರಿಕಲ್ಪನೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಪ್ರಯತ್ನಗಳು ಆಗುತ್ತಿವೆ. ಈ ನಡುವೆ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಅದಕ್ಕೊಂದು ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ ಮಹಿಳೆಯರು ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್​ಕಿನ್​ಗಳ‌ ವಿಲೇವಾರಿ ಸದ್ಯದ ತಲೆನೋವಾಗಿತ್ತು. ಆದರೆ, ಇದೀಗ ಸರ್ಕಾರದ ನಿರ್ದೇಶನದಂತೆ ಸ್ಯಾನಿಟರಿ ನ್ಯಾಪ್ ಕಿನ್​ಗಳನ್ನು ಸೂಕ್ತ ವಿಲೇವಾರಿಗೆ ಇನ್ಸಿನರೇಟರ್ ಯಂತ್ರವನ್ನು ಬಳಕೆ ಮಾಡಲಾಗುತ್ತದೆ.

ಉಪಯೋಗಿಸಿ ಬಿಸಾಡುವ ನ್ಯಾಪ್​ಕಿನ್​ಗಳನ್ನು ಸಂಗ್ರಹಿಸುವ ಸಲುವಾಗಿ ಋತು ಎಂಬ ಶೀರ್ಷಿಕೆಯಡಿ ಪಿಂಕ್ ಬಾಕ್ಸ್ ಪರಿಕಲ್ಪನೆಯನ್ನು ಕಿಲ್ಪಾಡಿ ಗ್ರಾ.ಪಂನಲ್ಲಿ ಜಾರಿಗೆ ತರಲಾಗಿದೆ. ಗ್ರಾ.ಪಂ ಕಚೇರಿ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಪ್ರತೀ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೊಂದರಂತೆ ಗುಲಾಬಿ ಬಣ್ಣದ ಡಸ್ಟ್ ಬಿನ್​ಗಳನ್ನು ಇಡಲಾಗುತ್ತದೆ. ಇದನ್ನು ಮಕ್ಕಳ ಕೈಗೆ ಸಿಗದಷ್ಟು ಎತ್ತರದಲ್ಲಿಟ್ಟು ಕೇವಲ ಮಹಿಳೆಯರು ಪ್ರವೇಶಿಸುವಂತಹ ಕೋಣೆಗಳಲ್ಲಿ ಅಳವಡಿಸಲಾಗುತ್ತದೆ.

ವಿದ್ಯಾರ್ಥಿನಿಯರು ಹಾಗೂ ಗ್ರಾಮದ ಮಹಿಳೆಯರು ತಾವು ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್​ಕಿನ್​ಗಳನ್ನು ಎಲ್ಲೆಂದರಲ್ಲಿ ಎಸೆಯದೇ ಪೇಪರ್​ನಲ್ಲಿ ಸುತ್ತಿ ಆ ಗುಲಾಬಿ ಬಾಕ್ಸ್​ನಲ್ಲಿ ಹಾಕಬಹುದು. ದಿನಕ್ಕೊಮ್ಮೆ ಪ್ರತಿ ಕೇಂದ್ರಕ್ಕೂ ಭೇಟಿ ನೀಡುವ ಗ್ರಾ.ಪಂ ಸಿಬ್ಬಂದಿ ಅದನ್ನು ಸೂಕ್ತ ಮುಂಜಾಗ್ರತೆಯೊಂದಿಗೆ ಸಂಗ್ರಹಿಸಿ ಇನ್ಸಿನರೇಟರ್ ಯಂತ್ರದ ಮೂಲಕ ಸೂಕ್ತವಾಗಿ ವಿಲೇವಾರಿ ಮಾಡುತ್ತಾರೆ.

ಇನ್ಸಿನರೇಟರ್ ಯಂತ್ರವು ಸುಮಾರು 900 ಸೆಲ್ಸಿಯಸ್ ಉಷ್ಣಾಂಶದಲ್ಲಿ ಉರಿಯುತ್ತದೆ. ಈ ಮೂಲಕ ಅದು ಕೇವಲ ಒಂದು ಬಾರಿಗೆ 20 ನಿಮಿಷಗಳಲ್ಲಿ 50 ರಿಂದ 60 ಸ್ಯಾನಿಟರಿ ನ್ಯಾಪ್​ಕಿನ್​ಗಳನ್ನು ಸುಟ್ಟು ಬೂದಿ ಮಾಡುತ್ತದೆ. ಅಷ್ಟೊಂದು ಪ್ರಮಾಣದ ಸ್ಯಾನಿಟರಿ ನ್ಯಾಪ್​ಕಿನ್​ಗಳನ್ನು ಸುಡುವ ಸಂದರ್ಭದಲ್ಲಿಯೂ ಅದರಿಂದ ಕೇವಲ ಅಲ್ಪ ಪ್ರಮಾಣದ ಹೊಗೆ ಮಾತ್ರ ಹೊರಬರುತ್ತದೆ‌.

ಅಲ್ಲದೇ ಇದು ಮನುಷ್ಯನ ಆರೋಗ್ಯದ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಉಂಟು ಮಾಡದಿಲ್ಲ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಅದೇ ರೀತಿ ಏಕಕಾಲಕ್ಕೆ 60 ಪ್ಯಾಡ್​ಗಳನ್ನು ಸುಡುವ ಸಂದರ್ಭದಲ್ಲಿಯೂ ಗರಿಷ್ಠ ಶೇಕಡಾ 1ರಷ್ಟು ಮಾತ್ರ ಬೂದಿ ಉಳಿಯುತ್ತದೆ ಅದನ್ನು ಬಚ್ಚಲು ಗುಂಡಿಗೆ ಹಾಕಿಬಿಡಬಹುದು. ಇದುವರೆಗೂ ಸ್ವಸ್ಥ ಸಮಾಜಕ್ಕೆ ಸವಾಲಾಗಿ, ಬಳಸಿ ಅಲ್ಲಲ್ಲಿ ಎಸೆಯುತ್ತಿದ್ದ ಸ್ಯಾನಿಟರಿ ನ್ಯಾಪ್​ಕಿನ್​ಳಿಂದ ಪರಿಸರಕ್ಕೆ ಹಾಗೂ ಮನುಕುಲಕ್ಕೆ ಉಂಟಾಗಬಹುದಾದ ಹಾನಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.