ETV Bharat / state

ಅಪ್ರಾಪ್ತನಿಂದ, ಅಪ್ರಾಪ್ತೆ ಮೇಲೆ ಅತ್ಯಾಚಾರ : ಪೋಕ್ಸೊ ಕೇಸ್ ದಾಖಲು, ಆರೋಪಿ ಅರೆಸ್ಟ್.. - undefined

ಮದುವೆಯಾಗುವುದಾಗಿ ಪುಲಾಯಿಸಿ ಒತ್ತಾಯಪೂರ್ವಕವಾಗಿ ಅಪ್ರಾಪ್ತೆ ಜೊತೆ ದೈಹಿಕ ಸಂಬಂಧ ಬೆಳೆಸಿದ ಬಾಲಕನನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Mar 26, 2019, 10:58 AM IST

ಮಂಗಳೂರು: ಅಪ್ರಾಪ್ತ ಬಾಲಕನೋರ್ವ ಅಪ್ರಾಪ್ತೆಯೊಂದಿಗೆ ಬಲಾತ್ಕಾರವಾಗಿ ದೈಹಿಕ ಸಂಬಂಧ ಬೆಳೆಸಿದ ಬಗ್ಗೆ ಜಿಲ್ಲೆಯ ವಿಟ್ಲ ಪೊಲೀಸ್​ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ಬಂಧಿಸಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯೋರ್ವಳು ಓದನ್ನು ಅರ್ಧಕ್ಕೆ ಬಿಟ್ಟು ಮನೆಯಲ್ಲಿ ಇದ್ದು, ಈ ಸಂದರ್ಭ ಅವರ ದೂರದ ಸಂಬಂಧಿ ಬಾಲಕನೊಬ್ಬ ಆಗಾಗ ಮನೆಗೆ ಬರುತ್ತಿದ್ದ. ಆತ ಬಾಲಕಿಯೊಂದಿಗೆ ಸಲುಗೆಯಿಂದ ಇರುತ್ತಿದ್ದುದನ್ನು ಕಂಡು ಮನೆಗೆ ಬರಬಾರದೆಂದು ಮನೆಯವರು ತಾಕೀತು ಮಾಡಿದ್ದರು.

ಆದರೆ, ಆ ಅಪ್ರಾಪ್ತ ಬಾಲಕ ಅಪ್ರಾಪ್ತೆಯನ್ನು ಒಂದು ತಿಂಗಳ ಹಿಂದೆ ಮಡಿಕೇರಿಗೆ ಕರೆದುಕೊಂಡು ಹೋಗಿದ್ದ. ಬಳಿಕ ಮನೆಯವರು ಆಕೆಯನ್ನು ಅಲ್ಲಿಂದ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ, ಮಾರ್ಚ್ 22ರಂದು ಬಾಲಕಿ ಮತ್ತೆ ಮನೆ ಬಿಟ್ಟು ಹೋಗಿ ಆತನ ಮನೆಯಲ್ಲಿ ಇರುವುದಾಗಿ ತಿಳಿದು ಬಂದಿದೆ.

ಮತ್ತೊಮ್ಮೆ ಆಕೆಯನ್ನು ಕರೆದುಕೊಂಡು ಬಂದು ವಿಚಾರಿಸಿದಾಗ ಆರೋಪಿಯು ಈ ಹಿಂದೆ ಮನೆಗೆ ಬರುತ್ತಿರುವ ವೇಳೆ ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಬಂಧ ಬೆಳೆಸಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಆದರೆ, ಬಾಲಕಿಯ ಪೋಷಕರು ಮರ್ಯಾದೆಗೆ ಅಂಜಿ ಈ ಬಗ್ಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ.

ಈಗ ಸಂಬಂಧಿಕರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದು, ಬಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Mangaluru File name_Pocso Case Reporter_Vishwanath Panjimogaru ಅಪ್ರಾಪ್ತೆಯೊಂದಿಗೆ ದೈಹಿಕ ಸಂಬಂಧ: ಅಪ್ರಾಪ್ತ ಬಾಲಕನ ಬಂಧನ, ಪೊಕ್ಸೊ ಪ್ರಕರಣ ದಾಖಲು ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಅಪ್ರಾಪ್ತೆಯೊಂದಿಗೆ ಬಲಾತ್ಕಾರವಾಗಿ ದೈಹಿಕ ಸಂಬಂಧ ಬೆಳೆಸಿದ ಬಗ್ಗೆ ವಿಟ್ಲ ತಡವಾಗಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ದಸ್ತಗಿರಿ ಮಾಡಿ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ವಿವರ: ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯೋರ್ವಳು ಓದನ್ನು ಅರ್ಧಕ್ಕೆ ಬಿಟ್ಟು ಮನೆಯಲ್ಲಿ ಇದ್ದಿದ್ದು, ಈ ಸಂದರ್ಭ ಅವರ ದೂರದ ಸಂಬಂಧಿ ಅವಿನಾಶ್(17) ಎಂಬಾತನು ಆಗಾಗ ಮನೆಗೆ ಬರುತ್ತಿದ್ದ. ಅವನು ಬಾಲಕಿಯೊಂದಿಗೆ ಸಲುಗೆಯಿಂದ ಇರುತ್ತಿದ್ದುದನ್ನು ಕಂಡು ಮನೆಗೆ ಬರಬಾರದೆಂದು ಮನೆಯವರು ತಿಳಿಸಿದ್ದರು. ಆದರೆ ಅವಿನಾಶ್ ಬಾಲಕಿಯನ್ನು ಒಂದು ತಿಂಗಳ ಹಿಂದೆ ಬಾಲಕಿಯನ್ನು ಮಡಿಕೇರಿಗೆ ಕರೆದುಕೊಂಡು ಹೋಗಿದ್ದು, ಮನೆಯವರು ಆಕೆಯನ್ನು ಅಲ್ಲಿಂದ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಮಾರ್ಚ್ 22 ರಂದು ಬಾಲಕಿ ಮತ್ತೆ ಮನೆ ಬಿಟ್ಟು ಹೋಗಿ ಅವಿನಾಶ್ ನ ಮನೆಯಲ್ಲಿ ಇರುವುದಾಗಿ ತಿಳಿದು ಬಂದಿದೆ. ಈ ಸಂದರ್ಭ ಆಕೆಯನ್ನು ಕರೆದುಕೊಂಡು ಬಂದು ವಿಚಾರಿಸಿದಾಗ ಆರೋಪಿಯು ಮನೆಗೆ ಬರುತ್ತಿರುವ ಸಮಯ ಮದುವೆಯಾಗುತ್ತೇನೆ ಎಂದು ಪುಲಾಯಿಸಿ ಒತ್ತಾಯ ಪೂರ್ವಕವಾಗಿ ಬಲಾತ್ಕಾರವಾಗಿ ದೈಹಿಕ ಸಂಬಂಧ ಬೆಳೆಸಿರುದಾಗಿ ತಿಳಿದು ಬಂದಿದೆ ಎಂದು ಬಾಲಕಿಯ ಹೆತ್ತವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಅವರು ಮರ್ಯಾದೆಗೆ ಅಂಜಿ ಈ ಬಗ್ಗೆ ದೂರು ನೀಡಿರಲಿಲ್ಲ. ಆದರೆ ಈಗ ಸಂಬಂಧಿಕರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದು, ಅವಿನಾಶ್ ನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಪಕ್ಸೊ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದಾರೆ. Reporter_Vishwanath Panjimogaru  

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.