ಮಂಗಳೂರು: ಆರ್ಟಿಪಿಸಿಆರ್ ವರದಿಯಿಲ್ಲದೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿದ 51 ಪ್ರಯಾಣಿಕರನ್ನು ಪುರಭವನದಲ್ಲಿ ತಾತ್ಕಾಲಿಕ ಕ್ವಾರಂಟೈನ್ ಇರಿಸಲಾಗಿದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆದರೆ ಯಾವುದೇ ಪ್ರಯಾಣಿಕರನ್ನು ವಶಕ್ಕೆ ಪಡೆಯದೆ ಕೇವಲ ತಾತ್ಕಾಲಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಪ್ರಯಾಣಿಕರ ಗಂಟಲು ಸ್ರಾವದ ಮಾದರಿಯನ್ನು ಪಡೆಯಲಾಗಿದ್ದು, ಫಲಿತಾಂಶ ಇನ್ನೂ ಬಂದಿಲ್ಲ. ನೆಗೆಟಿವ್ ಬಂದ ಪ್ರಯಾಣಿಕರನ್ನು ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಪಾಸಿಟಿವ್ ಬಂದ ಪ್ರಯಾಣಿಕರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಕಳುಹಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.
ಈ ತಪಾಸಣಾ ಕಾರ್ಯಾಚರಣೆಯು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: "ನನ್ನ ಆ ಆಸೆ ಈಡೇರಿಸಿದ್ರೆ, ಪಾಸಿಂಗ್ ಪ್ರಮಾಣ ಪತ್ರ ನೀಡುವೆ"..ವಿದ್ಯಾರ್ಥಿನಿಗೆ ಪ್ರಾಂಶುಪಾಲನ ಕಿರುಕುಳ!