ಮಂಗಳೂರು: ಭಾರತ ಸರ್ಕಾರ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ಗೆ ತೈಲ ಪರಿಷ್ಕರಣೆಯ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಭಾರತ ಸರ್ಕಾರದ ಪೇಟೆಂಟ್ ಪಡೆದುಕೊಂಡಿದೆ. ಅಕ್ಟೋಬರ್ 1 ರಂದು ಈ ಪೇಟೆಂಟ್ ಎಂಆರ್ಪಿಎಲ್ಗೆ ದೊರೆತಿದೆ.
Process distillation Of Petroleum Fractions- By Making use Of Fuel Gas/ Hydrocarbon vapours instead of Steam ಎಂಬ ವಿಷಯದ ಮೇಲಿನ ಎಂಆರ್ಪಿಎಲ್ ಸಂಶೋಧನೆಗೆ ಈ ಪೇಟೆಂಟ್ ದೊರೆತಿದೆ.
ಎಂಆರ್ಪಿಎಲ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಂದಾಳತ್ವದಲ್ಲಿ ಈ ಸಂಶೋಧನೆ ನಡೆಸಲಾಗಿತ್ತು. ನೀರಿನ ಬಳಸುವಿಕೆಯನ್ನು ಕಡಿಮೆಗೊಳಿಸುವ ಈ ತಂತ್ರಜ್ಞಾನವು ಇಂಧನ ಬಳಕೆಯನ್ನು ಮಿತಗೊಳಿಸುವಲ್ಲಿಯೂ ಆ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಲು ಈ ಸಂಶೋಧನೆ ಸಹಕಾರಿಯಾಗಲಿದೆ ಎಂದು ಎಂಆರ್ಪಿಎಲ್ನ ಪ್ರಕಟಣೆ ತಿಳಿಸಿದೆ.