ETV Bharat / state

ವಿಜಯದಶಮಿಯ ಸಂಭ್ರಮದಲ್ಲಿ ಶಾರದೆಯ ಆರಾಧನೆ: ವಿದ್ಯಾರಂಭದ ಮೂಲಕ ಜ್ಞಾನರ್ಜನೆಗೆ ಮುನ್ನುಡಿ - ಈಟಿವಿ ಭಾರತ ಕನ್ನಡ

ನವರಾತ್ರಿಯ ವಿಜಯದಶಮಿಯಂದು ವಿದ್ಯಾರಂಭಕ್ಕೆ ವಿಶೇಷ ಮಹತ್ವ ಇದೆ. ತಾಯಿ ಶಾರದೆಯನ್ನು ಆರಾಧಿಸುವ ಈ ದಿನ ಮಕ್ಕಳಿಗೆ ವಿದ್ಯಾರಂಭ ಮಾಡಿಸಿ ಜ್ಞಾನರ್ಜನೆಗೆ ನಾಂದಿ ಹಾಡುತ್ತಾರೆ.

on-vijayadashami-vidyarambha-is-performed
ವಿಜಯದಶಮಿಯ ಸಂಭ್ರಮದಲ್ಲಿ ಶಾರದೆಯ ಆರಾಧನೆ : ವಿದ್ಯಾರಂಭದ ಮೂಲಕ ಜ್ಞಾನರ್ಜನೆಗೆ ಮುನ್ನುಡಿ
author img

By

Published : Oct 5, 2022, 3:50 PM IST

ಮಂಗಳೂರು : ನವರಾತ್ರಿಯ ವಿಜಯದಶಮಿಯ ದಿನ ವಿದ್ಯಾರಂಭಕ್ಕೆ ವಿಶೇಷ ಮಹತ್ವ ಇದೆ. ಈ ದಿನ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವ ಜ್ಞಾನರ್ಜನೆಗೆ ಮುನ್ನುಡಿ ಬರೆಯುತ್ತಾರೆ.

ನಾಡಿನೆಲ್ಲೆಡೆ ಇಂದು ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ತಾಯಿ ಶಾರದೆಯ ಆರಾಧನೆ ಮಾಡುವ ಇಂದು ವಿದ್ಯಾರಂಭ ಕಾರ್ಯಕ್ರಮ ಹೆಚ್ಚಾಗಿ ನಡೆಯುತ್ತದೆ. ದೇವಿ ದೇವಸ್ಥಾನಗಳು ಸೇರಿದಂತೆ ಹಲವೆಡೆ ಶಾರದೆ ಆರಾಧಿಸಿ ವಿದ್ಯಾರಂಭ ನಡೆಸುವುದು ಹಿಂದಿನಿಂದಲೂ ನಡೆದುಕೊಂಡಿರುವ ಪದ್ಧತಿ. ವಿದ್ಯಾರಂಭ ದಿನ ವಿವಿಧೆಡೆ ಸಾವಿರಾರು ಮಕ್ಕಳಿಗೆ ವಿದ್ಯಾರಂಭ ಮಾಡಿಸುತ್ತಾರೆ. ಈ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಾಗುತ್ತದೆ.

ವಿದ್ಯಾರಂಭ ಹೇಗೆ ಮಾಡುವುದು : ವಿದ್ಯಾರಂಭವನ್ನು ಶಿಕ್ಷಣದ ಅಧಿದೇವತೆ ಶಾರದೆಯನ್ನು ಪ್ರತಿಷ್ಠಾಪಿಸಿ ಮಾಡಲಾಗುತ್ತದೆ. ಶಾರದೆಯನ್ನು ನೆನೆದು ಬಾಳೆ ಎಲೆಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ ಇಟ್ಟು ಅಕ್ಕಿಯಲ್ಲಿ ಓಂಕಾರ ಮತ್ತು ಅ ಆ ಇ ಈ ಅಕ್ಷರಗಳನ್ನು ಬರೆಸಲಾಗುತ್ತದೆ. ಅಕ್ಕಿಯ ರಾಶಿಯಲ್ಲಿ ಅರಿಸಿಣ ಕೊಂಬಿನ ಮೂಲಕ ಮಕ್ಕಳ ಕೈಯಲ್ಲಿ ಅಕ್ಷರಗಳನ್ನು ಬರೆಸಲಾಗುತ್ತದೆ. ಇದು ಸಾಮಾನ್ಯ ಕ್ರಮವಾಗಿದ್ದರೆ, ಇನ್ನೂ ಸಂಗೀತ, ವೇದ, ನೃತ್ಯ ಸೇರಿದಂತೆ ವಿವಿಧ ಅಭ್ಯಾಸಗಳನ್ನು ಆರಂಭಿಸುವವರು ಶಾರದೆ ಮುಂದೆ ವಿದ್ಯಾರಂಭದ ವಿಧಿಯನ್ನು ಮಾಡುತ್ತಾರೆ.

ವಿದ್ಯಾರಂಭ ಯಾಕೆ ಮಾಡುವುದು : ಯಾವುದೇ ಶುಭಕಾರ್ಯಗಳನ್ನು ಮಾಡುವಾಗ ದೇವರ ಮುಂದೆ ಪ್ರಾರ್ಥಿಸುವ ಕ್ರಮ ಇದೆ. ಸಣ್ಣ ಮಕ್ಕಳಿಗೆ ಅನ್ನ ಉಣಿಸುವ ಮುನ್ನ ದೇವರ ಮುಂದೆ ಅನ್ನಪ್ರಾಶನ ಸೇವೆ ನಡೆಸಿದರೆ, ಮಕ್ಕಳು ವಿದ್ಯಾಭ್ಯಾಸ ಆರಂಭಿಸುವಾಗ ದೇವರ ಮುಂದೆ ವಿದ್ಯಾರಂಭ ಕ್ರಮ ಮಾಡಲಾಗುತ್ತದೆ. ಈ ಮೂಲಕ ಸಣ್ಣಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಲಿ ಎಂದು ಹಲವು ಪೋಷಕರು ಬಂದು ವಿದ್ಯಾರಂಭ ಮಾಡಿಸುತ್ತಾರೆ.

ವಿಜಯದಶಮಿಯ ಸಂಭ್ರಮದಲ್ಲಿ ಶಾರದೆಯ ಆರಾಧನೆ : ವಿದ್ಯಾರಂಭದ ಮೂಲಕ ಜ್ಞಾನರ್ಜನೆಗೆ ಮುನ್ನುಡಿ

ವಿಜಯದಶಮಿಯಂದು ಯಾಕೆ ವಿದ್ಯಾರಂಭ : ವಿದ್ಯಾರಂಭವನ್ನು ಇದೇ ದಿನ ಮಾಡಬೇಕೆಂದು ಕಟ್ಟುಪಾಡಿಲ್ಲ. ವಿದ್ಯಾಧಿವತೆ ಶಾರದೆಯ ಆರಾಧನೆ ಯ‌ನ್ನು ಮಾಡುವ ನವರಾತ್ರಿಯಲ್ಲಿ ವಿಜಯದಶಮಿ ದಿನ ವಿದ್ಯಾರಂಭಕ್ಕೆ ಹೆಚ್ಚಿನವರು ಪ್ರಾಶಸ್ತ್ಯ ನೀಡುತ್ತಾರೆ. ಇನ್ನೂ ಹೆಚ್ಚಿನವರು ಮಕ್ಕಳನ್ನು ಶಾಲೆ ಗೆ ಸೇರಿಸುವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ವಿದ್ಯಾರಂಭ ನಡೆಸಿ ಶಾಲೆಗೆ ಸೇರಿಸುತ್ತಾರೆ.

ಹಿರಿಯ ಧಾರ್ಮಿಕ ಮುಂದಾಳು ಪ್ರದೀಪ್ ಕುಮಾರ್ ಕಲ್ಕೂರ ಅವರು ಹೇಳುವಂತೆ, ಅಕ್ಷರಾಭ್ಯಾಸ ಎನ್ನುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವಂತಹ ಪದ್ಧತಿ. ಜ್ಞಾನಾರ್ಜನೆಯ ವ್ಯವಸ್ಥೆಗೆ ಒಂದು ಮೂಲ ಅಕ್ಷರಾಭ್ಯಾಸ ಎಂಬ ಪ್ರಕ್ರಿಯೆ. ಅಕ್ಷರ ಕಲಿಕೆಯ ಜೊತೆಗೆ ಜ್ಞಾನದ ಅಭ್ಯಾಸ ಮಾಡುವುದಕ್ಕೆ ಅಕ್ಷರಭ್ಯಾಸ ಮಾಡಲಾಗುತ್ತದೆ.

ಈ ರೀತಿ ಮಾಡಿದಾಗ ಮಕ್ಕಳಿಗೆ ಶೃದ್ದಾಭಕ್ತಿಯಿಂದ ಕಲಿಯಲು ಸಾಧ್ಯವಾಗುತ್ತದೆ. ಇದು ಒಂದು ಧರ್ಮಕ್ಕೆ ಸೀಮಿತವಾಗದೇ ಎಲ್ಲ ಧರ್ಮಿಯರು ಈ ಪದ್ದತಿಯನ್ನು ಆಚರಣೆ ಮಾಡುವುದನ್ನು ನೋಡಬಹುದು. ಜ್ಞಾನಸಂಪಾದನೆಯ ಆರಂಭಿಕ ಪ್ರಕ್ರಿಯೆಯ ಮೂರ್ತ ಸ್ವರೂಪವೇ ವಿದ್ಯಾರಂಭ ಎಂದು ಅವರು ಹೇಳುತ್ತಾರೆ.

ಮಂಗಳೂರಿನ ಮಂಗಳಾದೇವಿ, ಕಟೀಲು, ಉಡುಪಿ ಕೊಲ್ಲೂರು ಸೇರಿದಂತೆ ಹಲವು ದೇವಿ ದೇವಸ್ಥಾನಗಳಲ್ಲಿ ಅಕ್ಷರಾಭ್ಯಾಸ ನಡೆಯುವ ಜೊತೆಗೆ ಮಂಗಳೂರಿನಲ್ಲಿ ಪ್ರದೀಪ್ ಕುಮಾರ್ ಕಲ್ಕೂರ ಅವರ ಕಲ್ಕೂರ ಪ್ರತಿಷ್ಠಾನದಿಂದ ಮಂಜುಪ್ರಸಾದದಲ್ಲಿ ವಿದ್ಯಾರಂಭ ನಡೆಯಿತು. ಇಂದು ವಿವಿಧೆಡೆ ನಡೆದ ವಿದ್ಯಾರಂಭದಲ್ಲಿ ಸಾವಿರಾರು ಮಂದಿ ಮಕ್ಕಳು ವಿದ್ಯಾರಂಭ ವಿಧಿ ಮಾಡಿದ್ದಾರೆ.

ಇದನ್ನೂ ಓದಿ : ಜಂಬೂಸವಾರಿಗೆ ಮೆರಗು ನೀಡಲಿರುವ ಸ್ತಬ್ಧ ಚಿತ್ರಗಳು.. ಈ ಬಾರಿ ಪುನೀತ್ ಸ್ತಬ್ಧಚಿತ್ರ ಆಕರ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.