ETV Bharat / state

ವೃದ್ಧ ದಂಪತಿ ಕೋಳಿ ಕದ್ದ ಪ್ರಕರಣ: ಅರ್ಕುಳದಲ್ಲಿ ಸಿಕ್ಕಿಬಿದ್ದ ಆರೋಪಿಗಳಿಗೆ ಸಾರ್ವಜನಿಕರು ಮಾಡಿದ್ದೇನು? - ಕೋಳಿ ಕಳವು ಮಾಡುತ್ತಿದ್ದ ವೃದ್ಧ ದಂಪತಿ

ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಸಾಂತೂರಿನಲ್ಲಿ ವೃದ್ಧ ದಂಪತಿ ಕೋಳಿ ಕಳ್ಳತನ ಮಾಡಿದ್ದ ವಿಡಿಯೋ ಈ ಮೊದಲೇ ವೈರಲ್ ಆಗಿತ್ತು. ಮತ್ತೆ ಇದೇ ದಂಪತಿ ಮಂಗಳೂರು ಹೊರವಲಯದ ಅರ್ಕುಳ ತುಪ್ಪೆಕಲ್​ ಮನೆಯೊಂದರಲ್ಲಿ ಕೋಳಿ ಕಳ್ಳತನಕ್ಕೆ ಯತ್ನಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ವೃದ್ಧ ದಂಪತಿ ಕೋಳಿ ಕಳವು ವಿಡಿಯೋ ವೈರಲ್ ಪ್ರಕರಣ
Old couple thefted chickens in Mangalore
author img

By

Published : Jan 30, 2021, 12:39 PM IST

Updated : Jan 30, 2021, 1:53 PM IST

ಮಂಗಳೂರು: ವೃದ್ಧ ದಂಪತಿ ಇಬ್ಬರು ಮನೆಯೊಂದರ ಮುಂದೆ ಕುಳಿತುಕೊಂಡು ಕೋಳಿ ಕದಿಯುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಈ ವೃದ್ಧ ದಂಪತಿ ಮನೆಯೊಂದಕ್ಕೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ ವೇಳೆ ಸಾರ್ವಜನಿಕರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ವೈರಲ್ ವಿಡಿಯೋ

ವೃದ್ಧ ದಂಪತಿ ಬಾಗಿಲು ಹಾಕಿದ ಮನೆಯೊಂದರ ಮುಂದೆ ಕುಳಿತುಕೊಂಡು ಕೋಳಿಗಳಿಗೆ ಅಕ್ಕಿ ಹಾಕುವ ನೆಪದಲ್ಲಿ ಕೋಳಿ ಹಿಡಿಯುತ್ತಿದ್ದರು. ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಸಾಂತೂರಿನಲ್ಲಿ ಕೋಳಿ ಕದಿಯುತ್ತಿದ್ದ ದೃಶ್ಯ ವೈರಲ್ ಆಗಿತ್ತು.

ಈ ದಂಪತಿ ನಿನ್ನೆ ಮಂಗಳೂರು ಹೊರವಲಯದ ಅರ್ಕುಳ ತುಪ್ಪೆಕಲ್​ಗೆ​​ ಬಂದಿದ್ದಾರೆ. ಇವರನ್ನು ಈಗಾಗಲೇ ವೈರಲ್ ಆಗಿದ್ದ ವಿಡಿಯೋದಲ್ಲಿ ಗುರುತಿಸಿದ್ದ ಸ್ಥಳೀಯರು ಅನುಮಾನಗೊಂಡಿದ್ದಾರೆ. ಈ ದಂಪತಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.

ಓಸಿ: ನಾವು ಕರ್ನಾಟಕದಲ್ಲಿರುವುದು ದೇವರ ದಯೆ.. ಮಹಾ ಸಿಎಂಗೆ ಮರಾಠಿ ಭಾಷಿಕರಿಂದಲೇ ಪ್ರತ್ಯುತ್ತರ

ಈ ದಂಪತಿ ಮನೆಯೊಂದರ ಗೇಟ್ ಒಳಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಸಾರ್ವಜನಿಕರು ದಂಪತಿಯನ್ನು ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಕೋಳಿ ಕಳವು ಮಾಡಿರುವುದನ್ನು ನಿರಾಕರಿಸಿದ ವೃದ್ಧ ದಂಪತಿ ಅವರಿಗೆ ವಿಡಿಯೋ ತೋರಿಸಿದ ಬಳಿಕ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

Last Updated : Jan 30, 2021, 1:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.