ಕಾರ್ಕಳ : ಆಹಾರ ಅರಸಿ 3 ಕಾಡುಕೋಣಗಳ ತಂಡ ಕಾಡಿನಿಂದ ನಗರಕ್ಕೆ ಬಂದ ಘಟನೆ ಕಾರ್ಕಳದ ಕಸಬಾ ಗ್ರಾಮದ ಪೆರ್ವಾಜೆಯಲ್ಲಿ ನಡೆದಿದೆ.
ಇಲ್ಲಿನ ಪುರಸಭೆ ವ್ಯಾಪ್ತಿಯ ಕಲ್ಲೋಟ್ಟೆ ನಾಗಬನದ ಹತ್ತಿರದಿಂದ ಮೂರು ಬೃಹತ್ ಗಾತ್ರದ ಕಾಡುಕೋಣಗಳು ಮುಖ್ಯ ರಸ್ತೆಯಲ್ಲಿ ಸಾಗುತ್ತಿರುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ಮೂಲಕ ಸೆರೆ ಹಿಡಿದ್ದಾರೆ. ಹಾಡು ಹಗಲೇ ಈ ರೀತಿ ಜನವಸತಿ ಪ್ರದೇಶದಲ್ಲಿ ಕಾಡುಕೋಣಗಳು ಓಡಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ.
ನಂತರ ಈ ಕೋಣಗಳು ರಸ್ತೆ ಮೂಲಕ ಸಾಗಿ ಕಾಡಿನ ಕಡೆಗೆ ಹೋಗಿರುವುದು ಕಂಡು ಬಂದಿದೆ.