ETV Bharat / state

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವಿರುದ್ಧ ಎನ್ಎಸ್​ಯುಐ ಪ್ರತಿಭಟನೆ - Karnataka State Law University

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ಎನ್ಎಸ್​ಯುಐ ಹಾಗೂ ಇತರ ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಮಂಗಳೂರು ಮನಪಾ ಬಳಿ ಪ್ರತಿಭಟನೆ ನಡೆಸಿದವು.

ಎನ್ಎಸ್​ಯುಐ ಪ್ರತಿಭಟನೆ
ಎನ್ಎಸ್​ಯುಐ ಪ್ರತಿಭಟನೆ
author img

By

Published : Aug 21, 2020, 4:08 PM IST

Updated : Aug 21, 2020, 4:44 PM IST

ಮಂಗಳೂರು: ರಾಜ್ಯ ಸರ್ಕಾರ ಮಧ್ಯಂತರ ವಿದ್ಯಾರ್ಥಿಗಳನ್ನು(Intermediate Students)ಪ್ರಮೋಟ್ ಮಾಡಬೇಕು ಎಂದು ಆದೇಶ ಹೊರಡಿಸಿದ್ದರೂ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇದನ್ನು ಗಣನೆಗೆ ತೆಗೆದುಕೊಳ್ಳದೆ ಪರೀಕ್ಷೆ ಮಾಡಲು ಸುತ್ತೋಲೆ ಹೊರಡಿಸಿದೆ. ಇದನ್ನು ವಿರೋಧಿಸಿ ಎನ್ಎಸ್​ಯುಐ ಹಾಗೂ ಇತರ ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಮಂಗಳೂರು ಮನಪಾ ಬಳಿ ಪ್ರತಿಭಟನೆ ನಡೆಸಿದವು.

ಎನ್ಎಸ್​ಯುಐ ಪ್ರತಿಭಟನೆ

ಈ ಸಂದರ್ಭ ಎನ್ಎಸ್​​ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಪರೀಕ್ಷೆ ಬರೆಸಲು ಹೊರಟಿದೆ‌. ಇದೀಗ ಕೇರಳ, ಕೊಡಗುಗಳಲ್ಲಿ ನೆರೆಯ ಹಾವಳಿಯಿದ್ದು, ಕೊರೊನಾ ಭೀತಿಯಿಂದ ಕ್ವಾರಂಟೈನ್​​ಗೊಳಗಾಗಿ ಪರೀಕ್ಷೆ ಬರೆಯುವುದು ಕಷ್ಟ. ಕಾನೂನು ವಿದ್ಯಾರ್ಥಿಗಳಿಗೆ 50 ಪ್ರತಿಶತ ತರಗತಿಯಾಗಿಲ್ಲ. ಆದ್ರೆ ಪರೀಕ್ಷೆ ನಡೆಸಲು ತಯಾರಿ ನಡೆಸಲಾಗಿದೆ. ಕೊರೊನಾದಿಂದಾಗಿ ಎಲ್ಲಾ ಗ್ರಂಥಾಲಯಗಳು ಮುಚ್ಚಿದ್ದು, ಇದರಿಂದ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ರು.

ರಾಜ್ಯ ಸರ್ಕಾರ ಇದನ್ನು ಗಮನ ಹರಿಸಿ ಕಾನೂನು ವಿಶ್ವವಿದ್ಯಾಲಯಕ್ಕೆ ತಕ್ಷಣ ಸುತ್ತೋಲೆಯೊಂದನ್ನು ಹೊರಡಿಸಿ, ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಪ್ರೊಮೋಟ್ ಮಾಡಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸಮಯಾವಕಾಶ ನೀಡಬೇಕು. ಅಥವಾ ಆನ್‌ಲೈನ್ ಮೂಲಕ ಪರೀಕ್ಷೆಯನ್ನು ನಡೆಸಲಿ. ಆದ್ದರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ, ಆ‌.24 ರಂದು ರಾಜ್ಯಾದ್ಯಂತ ಎನ್ಎಸ್​ಯುಐ ಹೋರಾಟ ನಡೆಸಲಿದೆ ಎಂದು ಹೇಳಿದರು.

Last Updated : Aug 21, 2020, 4:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.