ಉಳ್ಳಾಲ (ಮಂಗಳೂರು): ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಲ್ಲಿ 100 ರೂ. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಉಳ್ಳಾಲ ಸೋಮೇಶ್ವರ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯಾಪಾರಸ್ಥರು ತಮ್ಮ ಅಂಗಡಿಯ ಮುಂದೆ ಮಾಸ್ಕ್ ಕಡ್ಡಾಯ ಎಂಬ ಬೋರ್ಡನ್ನು ಅಳವಡಿಸುವುದು ಮತ್ತು ಕಡ್ಡಾಯವಾಗಿ ಅಂಗಡಿಗಳ ಮುಂದೆ ಒಂದು ಮೀಟರ್ ಅಂತರವನ್ನು ಗುರುತು ಹಾಕಿ ವ್ಯಾಪಾರ ನಡೆಸಬೇಕು. ಅಂತರ ಮತ್ತು ಮಾಸ್ಕ್ ಧರಿಸದೇ ಇದ್ದಲ್ಲಿ ವ್ಯಾಪಾರಸ್ಥರಿಗೆ ಹಾಗೂ ವ್ಯಕ್ತಿಗಳಿಗೆ ಸರ್ಕಾರದ ಆದೇಶದಂತೆ ಸ್ಥಳದಲ್ಲೇ 100 ರೂ. ದಂಡ ವಿಧಿಸಲಾಗುವುದು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಸರ್ಕಾರದ ಆದೇಶದಂತೆ 500 ರೂ. ದಂಡ ವಿಧಿಸಲಾಗುವುದು.
ಈ ನಿಟ್ಟಿನಲ್ಲಿ ಕೋವಿಡ್-19ರ ವಿರುದ್ಧ ಹೋರಾಡಲು ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸೋಮೇಶ್ವರ ಪುರಸಭೆ ಜತೆಗೆ ಸಹಕರಿಸಬೇಕು ಎಂದು ಪುರಸಭೆ ಪೌರಾಯುಕ್ತೆ ವಾಣಿ ಆಳ್ವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.