ETV Bharat / state

ಕಡಲ ಒಡಲಿಗೂ ತಟ್ಟಿದ ಬರದ ಛಾಯೆ... ಬರಿದಾದ ಕುಮಾರಧಾರ, ನೇತ್ರಾವತಿ ನದಿ - kannada news

ದೇವಸ್ಥಾನದಲ್ಲಿ ಪಿಂಡ ಪ್ರಧಾನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ, ಇದಕ್ಕೆಲ್ಲ ಈ‌ ನದಿ ನೀರಿನ ಬಳಕೆ ಆಗುತ್ತಿತ್ತು, ಸದ್ಯ ಪಿಂಡ ಪ್ರಧಾನಕ್ಕೂ ನದಿಯಲ್ಲಿ ನೀರು ಹುಡುಕಬೇಕಾದಂತ ದುಸ್ಥಿತಿ ಎದುರಾಗಿದೆ.

ಬರಿದಾದ ಕುಮಾರಧಾರ, ನೇತ್ರಾವತಿ ನದಿ
author img

By

Published : May 30, 2019, 2:23 PM IST

ಮಂಗಳೂರು : ಹಿಂದೆಂದು ಇಲ್ಲದಂತಹ ಬರದ ಪರಿಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಸ್ಥಾನವಾಗಿರುವ ಉಪ್ಪಿನಂಗಡಿಯಲ್ಲಿ ನದಿ ಸಂಪೂರ್ಣ ಬತ್ತಿ ಹೋಗಿದ್ದು, ತುಂಬಿ ತುಳುಕುತ್ತಿದ್ದ ನದಿ ಇದೀಗ ಖಾಲಿ ಮೈದಾನವಾಗಿದೆ.

ವರ್ಷದ ಹಿಂದೆ ಇದೇ ವೇಳೆಗೆ ಸುರಿದ ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ತುಂಬಿ ತುಳುಕುತ್ತಿತ್ತು. ಆದರೆ ಇದೀಗ ನೇತ್ರಾವತಿಯ ಒಡಲು ಬರಿದಾಗಿದ್ದು, ಖಾಲಿ ಮೈದಾನದಂತಾಗಿದೆ. ಮಂಗಳೂರು ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ಡ್ಯಾಮ್ ಕಟ್ಟಿ ನೀರು ಶೇಖರಿಸಲಾಗುತ್ತದೆ. ಸದ್ಯ ಈ ನೀರು ಜೂನ್ 10 ರ ವರೆಗೆ ಮಾತ್ರ ಬಳಕೆಗೆ ಬರುತ್ತದೆ. ಆ ಬಳಿಕ ನಗರದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ.

ಬರಿದಾದ ಕುಮಾರಧಾರ, ನೇತ್ರಾವತಿ ನದಿ

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಒಂದು ಬದಿಯಿಂದ ನೇತ್ರಾವತಿ ನದಿ ಮತ್ತೊಂದು ಬದಿಯಿಂದ ಕುಮಾರಧಾರ ಹರಿದು ಬಂದು ದೇವಸ್ಥಾನದ ಹತ್ತಿರ ಸಂಗಮವಾಗಿ ಎರಡು ನದಿಗಳು ಇಲ್ಲಿಂದಲೇ ಮುಂದೆ ಹರಿಯುತ್ತವೆ. ಬೆಸಿಗೆಯಲ್ಲೂ ತುಂಬಿ ಹರಿಯಬೇಕಿದ್ದ ನದಿ ಬರದ ಛಾಯೆಗೆ ಬತ್ತಿದ್ದು, ನದಿಯಲ್ಲಿ ಕಣ್ಣು ಹಾಯಿಸಿದಷ್ಟು ಮರಳು ಕಾಣುತ್ತದೆ.

ದೇವಸ್ಥಾನದಲ್ಲಿ ಪಿಂಡ ಪ್ರಧಾನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆಲ್ಲ ಈ‌ ನದಿ ನೀರಿನ ಬಳಕೆ ಆಗುತ್ತಿತ್ತು. ಸದ್ಯ ಪಿಂಡ ಪ್ರಧಾನಕ್ಕೂ ನದಿಯಲ್ಲಿ ನೀರು ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ.

ಹಿಂದೆದೂ ನೇತ್ರಾವತಿ ನದಿ ನೀರು ಬತ್ತಿಲ್ಲ. ನಾನು ಚಿಕ್ಕವನಿದ್ದಾಗ ಹಿಂದೊಮ್ಮೆ ಈ ರಿತಿಯಾಗಿದ್ದು ಬಿಟ್ಟರೆ ಯಾವತ್ತು ಹೀಗೆ ಆಗಿದ್ದಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Intro:ಮಂಗಳೂರು: ಹಿಂದೆಂದು ಇಲ್ಲದಂತಹ ಬರದ ಪರಿಸ್ಥಿತಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಬಂದಿದೆ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಸ್ಥಾನವಾಗಿರುವ ಉಪ್ಪಿನಂಗಡಿಯಲ್ಲಿ ನದಿ ಸಂಪೂರ್ಣ ಬತ್ತಿ ಹೋಗಿದ್ದು ತುಂಬಿ ತುಳುಕುತ್ತಿದ್ದ ನದಿ ಖಾಲಿ ಮೈದಾನವಾಗಿದೆ.

Body:ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಬಿಸಿಲ ಝಲಕ್ಕೆ ಬತ್ತಿ ಹೋಗಿದೆ. ವರುಷದ ಹಿಂದೆ ಇದೇ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ನೇತ್ರಾವತಿ ನದಿ ತುಂಬಿ ತುಳುಕಿತ್ತು. ಆದರೆ ಈಗ ಇದೇ ನೇತ್ರಾವತಿ ನದಿಯಲ್ಲಿ ನೀರಿಲ್ಲದ ಪರಿಸ್ಥಿತಿ ಉದ್ಭವವಾಗಿದೆ.
ಮಂಗಳೂರು ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ತುಂಬೆಯಲ್ಲಿ ಡ್ಯಾಮ್ ಕಟ್ಟಿ ನೀರು ಶೇಖರಿಸಲಾಗುತ್ತದೆ. ಹೀಗೆ ಶೇಖರಿಸಿದ ನೀರು ಜೂನ್‌10 ತಾರೀಖು ವರೆಗೆ ಬಳಕೆಗೆ ಇದೆ. ಆ ಬಳಿಕ ಮಂಗಳೂರು ನಗರಕ್ಕೂ ನೀರು ಇಲ್ಲದಂತಹ ಪರಿಸ್ಥಿತಿ ಉದ್ಭವವಾಗಲಿದೆ. ಹೀಗೆ ತುಂಬೆಯಲ್ಲಿ ಶೇಖರಿಸಿದ ನೀರು ನೇತ್ರಾವತಿ ನದಿಯಲ್ಲಿ ಪಾಣೆಮಂಗಳೂರು ವರೆಗೆ ಕಾಣಿಸುತ್ತದೆ. ಅದರ ನಂತರ ನೇತ್ರಾವತಿ ನದಿ ಹರಿದು ಬರುವಲ್ಲಿಯವರೆಗಿನ ಸ್ಥಿತಿ ಭಯಾನಕವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ನೇತ್ರಾವತಿ ಮತ್ತು ಕುಮಾರಧಾರ ನದಿಯ ತಟದಲ್ಲಿದೆ. ದೇವಸ್ಥಾನ ಒಂದು ಬದಿಯಿಂದ ನೇತ್ರಾವತಿ ನದಿ ಹರಿದು ಬಂದರೆ ಮತ್ತೊಂದು ಬದಿಯಿಂದ ಬರುವ ಕುಮಾರ ಧಾರ ನದಿ ನೇತ್ರಾವತಿ ನದಿ ಸೇರುತ್ತದೆ. ಎರಡು ನದಿಗಳು ಮಳೆಗಾಲದಲ್ಲಿ ಒಂದುಗೂಡಿ ಇಲ್ಲಿಂದ ಹರಿಯುತ್ತಿದೆ. ಆದರೆ ಈಗ ಇಲ್ಲಿ ನದಿ ಹರಿಯುವ ಪರಿಸ್ಥಿತಿ ಗೆ‌ ಭಿನ್ನವಾದ ಪರಿಸ್ಥಿತಿ ಇದೆ. ನದಿಯಲ್ಲಿ ಕಣ್ಣು ಹಾಯಿಸಿದಷ್ಟು ಮರಳು ಕಾಣುತ್ತದೆ. ತುಂಬಿ ಹರಿಯಬೇಕಾದ ನದಿ ಖಾಲಿ ಮೈದಾನವಾಗಿದೆ.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪಿಂಡ ಪ್ರಧಾನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಇದಕ್ಕೆಲ್ಲ ಈ‌ ನದಿ ನೀರಿನ ಬಳಕೆ ಆಗಬೇಕು. ಆದರೆ ಈಗ ಪಿಂಡ ಪ್ರಧಾನಕ್ಕೂ ನದಿಯಲ್ಲಿ ದೂರದಲ್ಲಿ ಇರುವ ಕೊಳದ ರೀತಿಯ ನೀರನ್ನು ಆಶ್ರಯಿಸಬೇಕಾಗಿದೆ.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರು ಈ ರೀತಿ ಬತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಲ್ಲ. ನದಿ ತೀರದಲ್ಲಿ ವಾಸವಿರುವ ಇಬ್ರಾಹಿಂ ಎಂಬ ಹಿರಿಯರೊಬ್ಬರು ಹೇಳುವ ಪ್ರಕಾರ ಅವರ ಬಾಲ್ಯದಲ್ಲಿ ಇಂತ ಪರಿಸ್ಥಿತಿ ಒಮ್ಮೆ ಇತ್ತಂತೆ. ಆ ಬಳಿಕ ಇಂತಹ ಪರಿಸ್ಥಿತಿ ಕಂಡಿಲ್ಲ ಎನ್ನುತ್ತಾರೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆ ಎಂದೂ ಕಾಣದಂತಹ ಬರ ಪರಿಸ್ಥಿತಿ ಎದುರಿಸುತ್ತಿದ್ದು ಬತ್ತಿ ಹೋದ ನೇತ್ರಾವತಿ ನದಿ ಇದರ ಗಂಭೀರತೆಯನ್ನು ಹೇಳುತ್ತಿದೆ.

ಬೈಟ್ - ಇಬ್ರಾಹಿಂ, ಉಪ್ಪಿನಂಗಡಿ ನಿವಾಸಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.