ETV Bharat / state

ನಾನು ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಸಾಬೀತು ಪಡಿಸಬೇಕಿಲ್ಲ: ಶಾಸಕ ಹರೀಶ್ ಪೂಂಜ - mangalore news

ಮಾಜಿ ಶಾಸಕ ವಸಂತ ಬಂಗೇರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಹರೀಶ್​ ಪೂಂಜ, ನನ್ನ ಕೋವಿಡ್ ವರದಿಯನ್ನು ವೆಬ್ ಸೈಟ್​ನಲ್ಲಿ ಹಾಕಲಾಗಿದೆ. ಆ ವರದಿಯಲ್ಲಿ ಪಾಸಿಟಿವ್ ಬಂದಿದೆ. ಹಾಗಾಗಿ ನಾನು ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಸಾಬೀತು ಪಡಿಸುವ ಅಗತ್ಯ ಇಲ್ಲ ಎಂದಿದ್ದಾರೆ.

ಶಾಸಕ ಹರೀಶ್ ಪೂಂಜ
ಶಾಸಕ ಹರೀಶ್ ಪೂಂಜ
author img

By

Published : Aug 26, 2020, 5:02 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಕಳೆದ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ ಅನಾರೋಗ್ಯಕ್ಕೆ ತುತ್ತಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿಶ್ರಾಂತಿಯಲ್ಲಿದ್ದರು. ಈ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ಅವರು ಕಾರ್ಯಕ್ರಮವೊಂದರಲ್ಲಿ ಹರೀಶ್​ ಪೂಂಜ ಅವರು ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದ್ದರು.

ಮಾಜಿ ಶಾಸಕರ ಟೀಕೆಗೆ ಶಾಸಕ ಹರೀಶ್ ಪೂಂಜ ತೀಕ್ಷ್ಣ ಪ್ರತಿಕ್ರಿಯೆ

ಈ ಬಗ್ಗೆ ಮಾಧ್ಯಮದವರು ಶಾಸಕರನ್ನು ಪ್ರಶ್ನಿಸಿದಾಗ, ಅನಾರೋಗ್ಯಕ್ಕೀಡಾಗಿರುವುದನ್ನು ನಾನು ಸಾಬೀತು ಪಡಿಸಿಕೊಳ್ಳಬೇಕೆಂದಿಲ್ಲ. ಕೋವಿಡ್ ವರದಿಯನ್ನು ವೆಬ್ ಸೈಟ್​ನಲ್ಲಿ ಹಾಕಲಾಗಿದೆ. ಆ ವರದಿಯಲ್ಲಿ ಪಾಸಿಟಿವ್ ಬಂದಿದೆ. ಹಾಗಾಗಿ ನಾನು ಸಾಬೀತು ಪಡಿಸುವ ಅಗತ್ಯ ಇಲ್ಲ. ಯಾರು ನಾಟಕ ಎಂದು ಹೇಳಿದ್ದಾರೋ ಅವರು ಮೊದಲು ನಾಟಕ ಆಡಿರಬಹುದು. ಆದ್ದರಿಂದ ಅವರಿಗೆ ಹೀಗೆ ಅನ್ನಿಸಿರಬಹುದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅದೇ ರೀತಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಮಾಜಿ ಶಾಸಕರು ಕೇವಲವಾಗಿ ಮಾತನಾಡಿದ್ದರ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದರು.

ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಪೂಂಜ, ಅನೇಕ ಸಾಮಾಜಿಕ ಸೇವೆಗಳನ್ನು ಮಾಡುತ್ತ, ಜನರ ಕಷ್ಟಗಳಿಗೆ ಸ್ಪಂದಿಸುತ್ತ, ಇಡೀ ದೇಶ ಗುರುತಿಸುವಂತಹ ಮಾದರಿ ಕಾರ್ಯಗಳನ್ನು ಮಾಡಿದ ದಕ್ಷ ನಿಷ್ಟಾವಂತ ಅಧಿಕಾರಿ ಅಣ್ಣಾಮಲೈ. ಅವರು ನಮ್ಮ ಪಕ್ಷದ ಸಿದ್ಧಾಂತ ಹಾಗೂ ಮೋದಿಜೀಯವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿಗೆ ಬಂದಿದ್ದಾರೆ. ಭಾರತೀಯ ಜನತಾಪಕ್ಷದಲ್ಲಿ ಮತ್ತೊಮ್ಮೆ ದೇಶ ಸೇವೆ ಮಾಡಬಹುದು ಎಂಬ ಸಂಕಲ್ಪವನ್ನು ಇಟ್ಟುಕೊಂಡು ಬಂದಿದ್ದಾರೆ. ಅವರು ಪಕ್ಷಕ್ಕೆ ಸೇರಿರುವುದರಿಂದ ಇನ್ನಷ್ಟು ಶಕ್ತಿ ಬಂದಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.