ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ ನಕಲಿ ಎನ್​​ಜಿಒ: ಈವರೆಗೆ ದಾಖಲಾಗಿಲ್ಲ ಯಾವುದೇ ದೂರು

author img

By

Published : Mar 13, 2021, 4:12 PM IST

ಸಮಾಜ ಸೇವೆ ಮಾಡಬೇಕೆಂಬ ಹಂಬಲದಲ್ಲಿ ಹಲವೆಡೆ ಸಾವಿರಾರು ಸಂಖ್ಯೆಗಳಲ್ಲಿ ಎನ್​​ಜಿಒಗಳು ಹುಟ್ಟಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿಯಾಗಿ ಕಾರ್ಯನಿರ್ವಹಿಸುವ ಎನ್​ಜಿಒಗಳ ಬಗ್ಗೆ ಯಾವುದೇ ದೂರುಗಳು ದಾಖಲಾಗಿಲ್ಲ.

no fake NGOs is in Dakshina Kannada District
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ ನಕಲಿ ಎನ್​​ಜಿಒ ; ಈವರೆಗೆ ದಾಖಲಾಗಿಲ್ಲ ಯಾವುದೇ ದೂರುಗಳು

ಮಂಗಳೂರು: ಸಮಾಜದಲ್ಲಿ ಶೋಷಿತರಾಗಿರುವವರ ಕಣ್ಣೀರು ಒರೆಸಲೆಂದೇ ಸರ್ಕಾರೇತರ ಸಂಸ್ಥೆ ಅಥವಾ ಎನ್​ಜಿಒಗಳು ಕಾರ್ಯನಿರ್ವಹಿಸುತ್ತವೆ. ಏನೂ ಇಲ್ಲದವರ ಪಾಲಿಗೆ ನೆರವಾಗುತ್ತಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಉದ್ದೇಶದಿಂದಲೇ ಅದೆಷ್ಟೋ ಎನ್​ಜಿಒಗಳು ಹುಟ್ಟಿಕೊಂಡಿವೆ. ಈ ನಕಲಿ ಎನ್​​ಜಿಒಗಳ ಜಾಲ ಎಲ್ಲೆಡೆ ಹಬ್ಬಿದೆಯೇ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ಎನ್​ಜಿಒಗಳಿವೆಯೇ? ಇಲ್ಲಿದೆ ಒಂದಿಷ್ಟು ಮಾಹಿತಿ.

ಸಮಾಜ ಸೇವೆ ಮಾಡಬೇಕೆಂಬ ಹಂಬಲದಲ್ಲಿ ಹಲವೆಡೆ ಸಾವಿರಾರು ಸಂಖ್ಯೆಗಳಲ್ಲಿ ಎನ್​​ಜಿಒಗಳು ಹುಟ್ಟಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿಯಾಗಿ ಕಾರ್ಯನಿರ್ವಹಿಸುವ ಎನ್​ಜಿಒಗಳ ಬಗ್ಗೆ ಯಾವುದೇ ದೂರುಗಳು ದಾಖಲಾಗಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ ನಕಲಿ ಎನ್​​ಜಿಒಗಳು

ಎನ್​ಜಿಒಗಳನ್ನು ಆರಂಭಿಸಬೇಕಿದ್ದರೆ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಆರಂಭಿಸಬೇಕಾಗುತ್ತದೆ. ಕಾಲಕಾಲಕ್ಕೆ ಹಣಕಾಸು ವ್ಯವಹಾರದ ಬಗ್ಗೆ ಲೆಕ್ಕಪತ್ರಗಳನ್ನು ನೀಡಬೇಕಾಗುತ್ತದೆ. ಹಣ ಸಂಗ್ರಹಕ್ಕೆ ಸಂಬಂಧಿಸಿ, ಸರ್ಕಾರದ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕಾಗುತ್ತದೆ.

ಅನಾಥ ಮಕ್ಕಳು, ವೃದ್ಧರು, ಮಹಿಳೆಯರಿಗೆ ರಕ್ಷಣೆ ಸೇರಿದಂತೆ ಇನ್ನೂ ಹತ್ತು ಹಲವು ಕಾರಣದಿಂದ ಹಲವು ಎನ್​ಜಿಒ ಸಂಸ್ಥೆಗಳು ಆರಂಭವಾಗುತ್ತವೆ. ಇವೆಲ್ಲವೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ನೋಂದಾಣಿಯಾಗಬೇಕು. ಹೀಗೆ ನೋಂದಾಣಿಯಾದ ಎನ್​ಜಿಒಗಳು ಸರ್ಕಾರದ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ.

ಓದಿ: ಕೋವಿಡ್​​ ಎಫೆಕ್ಟ್: ಕೆಲವರು ಶಾಲೆ ಬಿಟ್ಟರು, ಹಲವರು ಸರ್ಕಾರಿ ಶಾಲೆಗೆ ಸೇರಿದರು - ಉಳಿದವರು?

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರನ್ನು ವಂಚಿಸುತ್ತಿರುವ ಎನ್​ಜಿಒಗಳ ಬಗ್ಗೆ ಯಾವುದೇ ದೂರುಗಳು ಈವರೆಗೆ ಬಂದಿಲ್ಲ. ಇಂತಹ ಪ್ರಕರಣಗಳು ಕಂಡುಬಂದರೆ ಸರ್ಕಾರಿ ಇಲಾಖೆಗೆ ಮಾಹಿತಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ಎನ್​ಜಿಒಗಳು ಇರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ವಂಚನೆ ಮಾಡುವ ಎನ್​ಜಿಒಗಳ ಇರುವಿಕೆ ಈವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆ ಮಾಹಿತಿಗಳಿದ್ದರೆ ನೀಡುವಂತೆ ಸಾರ್ವಜನಿಕರಲ್ಲಿ ಜಿಲ್ಲಾಡಳಿತ ವಿನಂತಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.