ETV Bharat / state

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಎನ್ಐಟಿಕೆ ಪ್ರಾಧ್ಯಾಪಕ - ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಎನ್ಐಟಿಕೆ ಪ್ರಾಧ್ಯಾಪಕ ಡಾ.ದೇಂತಾಜೆ ಕೃಷ್ಣ ಭಟ್

ವಸ್ತು ವಿಜ್ಞಾನ ಹಾಗೂ ಭೌತ ರಸಾಯನ ಶಾಸ್ತ್ರ ಕ್ಷೇತ್ರಗಳಲ್ಲಿ ಮಾಡಿರುವ ಉನ್ನತ ಮಟ್ಟದ ಸಂಶೋಧನಾ ಕಾರ್ಯಗಳಿಗಾಗಿ ಪ್ರೊ.ದೇಂತಾಜೆ ಕೃಷ್ಣ ಭಟ್ ಅವರಿಗೆ ಈ ಗೌರವ ಸಂದಿದೆ..

ಪ್ರಾಧ್ಯಾಪಕ ಡಾ.ದೇಂತಾಜೆ ಕೃಷ್ಣ ಭಟ್​​
ಪ್ರಾಧ್ಯಾಪಕ ಡಾ.ದೇಂತಾಜೆ ಕೃಷ್ಣ ಭಟ್​​
author img

By

Published : Nov 14, 2021, 10:14 PM IST

ಮಂಗಳೂರು : ನಗರದ ಸುರತ್ಕಲ್​​​ನಲ್ಲಿರುವ ಎನ್ಐಟಿಕೆಯ ರಸಾಯನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ದೇಂತಾಜೆ ಕೃಷ್ಣ ಭಟ್​​ರಿಗೆ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ದೊರಕಿದೆ.

ಅಮೆರಿಕಾದ ಪ್ರತಿಷ್ಠಿತ ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಂತಾರಾಷ್ಟ್ರೀಯ ನಿಯತಕಾಲಿಕ ಸಮೂಹ ಎಲ್ಸೇವಿಯರ್ ಸಹಯೋಗದೊಂದಿಗೆ ಈ ಪಟ್ಟಿಯನ್ನು ತಯಾರಿಸಿದ್ದಾರೆ.

ವಸ್ತು ವಿಜ್ಞಾನ ಹಾಗೂ ಭೌತ ರಸಾಯನ ಶಾಸ್ತ್ರ ಕ್ಷೇತ್ರಗಳಲ್ಲಿ ಮಾಡಿರುವ ಉನ್ನತ ಮಟ್ಟದ ಸಂಶೋಧನಾ ಕಾರ್ಯಗಳಿಗಾಗಿ ಪ್ರೊ.ದೇಂತಾಜೆ ಕೃಷ್ಣ ಭಟ್ ಅವರಿಗೆ ಈ ಗೌರವ ಸಂದಿದೆ.

ವೈಜ್ಞಾನಿಕ ಪ್ರಬಂಧಗಳಿಗೆ ಇತರ ಸಂಶೋಧಕರಿಂದ ಸಿಗುವ ಉಲ್ಲೇಖಗಳನ್ನು ಆಧರಿಸಿ ಲಂಡನ್ ರಾಯಲ್ ಸೊಸೈಟಿಯವರು ತಯಾರಿಸಿರುವ ಪಟ್ಟಿಯಲ್ಲೂ ಪ್ರೊ. ಭಟ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ಅಲ್ಲದೆ ಎನ್ಐಟಿಕೆಯ ಸಂಶೋಧಕರ ಪಟ್ಟಿಯಲ್ಲೂ ಇವರಿಗೆ ಅಗ್ರಸ್ಥಾನ ಲಭ್ಯವಾಗಿದೆ. ಎನ್ಐಟಿಕೆ ನಿರ್ದೇಶಕ ಪ್ರೊ.ಉಮಾ ಮಹೇಶ್ವರ್ ರಾವ್ ಅವರು ಪ್ರೊ. ಭಟ್ ಅವರ ಈ ವಿಶೇಷ ಸಾಧನೆಯನ್ನು ಗುರುತಿಸಿ, ಅಭಿನಂದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.