ETV Bharat / state

ಮಂಗಳೂರು ಕಂಬಳದಲ್ಲಿ ಚೊಚ್ಚಲ ದಾಖಲೆ ನಿರ್ಮಿಸಿದ ನಿಶಾಂತ್ ಶೆಟ್ಟಿ

ಮಂಗಳೂರು ಕಂಬಳದ ಲಕ್ಷ್ಮಣ ಕರೆಯಲ್ಲಿ 125 ಮೀ ಗುರಿಯನ್ನು 11.49 ಸೆಕೆಂಡ್ ನಲ್ಲಿ ತಲುಪಿದ್ದಾರೆ. ಅಂದರೆ 100 ಮೀ ಓಟಕ್ಕೆ ಅದನ್ನು ಪರಿವರ್ತಿಸಿದಾಗ 9.19 ಸೆಕೆಂಡ್ಸ್​​ನಲ್ಲಿ ಕೋಣ ಓಡಿಸಿ ನೂತನ ದಾಖಲೆ ಬರೆದಿದ್ದಾರೆ.

Nishant Shetty made his debut in Mangalore Kambala
ಮಂಗಳೂರು ಕಂಬಳದಲ್ಲಿ ಚೊಚ್ಚಲ ದಾಖಲೆ ನಿರ್ಮಿಸಿದ ನಿಶಾಂತ್ ಶೆಟ್ಟಿ
author img

By

Published : Mar 7, 2021, 10:39 PM IST

ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳದಲ್ಲಿ ಕಾರ್ಕಳ ಬಜಗೋಳಿ ಮಾಳ ನಿವಾಸಿ ನಿಶಾಂತ್ ಶೆಟ್ಟಿಯವರು 9.19 ಸೆಕೆಂಡ್ಸ್​​​ನಲ್ಲಿ 100ಮೀ ದೂರ ಕೋಣಗಳನ್ನು ಓಡಿಸಿ ದಾಖಲೆ ನಿರ್ಮಿಸಿದ್ದಾರೆ.

ಮುಲ್ಕಿ ತೋಡಾರುಗುತ್ತು ಶಮ್ಮಿ ಶಿವಪ್ರಸಾದ್ ಅವರ ಕೋಣಗಳನ್ನು ಓಡಿಸಿರುವ ನಿಶಾಂತ್ ಶೆಟ್ಟಿ, ಈ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರು ಕಂಬಳದ ಲಕ್ಷ್ಮಣ ಕರೆಯಲ್ಲಿ 125 ಮೀ ಗುರಿಯನ್ನು 11.49 ಸೆಕೆಂಡ್ ನಲ್ಲಿ ತಲುಪಿದ್ದಾರೆ. ಅಂದರೆ 100 ಮೀ. ಓಟಕ್ಕೆ ಅದನ್ನು ಪರಿವರ್ತಿಸಿದಾಗ 9.19 ಸೆಕೆಂಡ್ಸ್​​ನಲ್ಲಿ ಕೋಣ ಓಡಿಸಿ ನೂತನ ದಾಖಲೆ ಬರೆದಿದ್ದಾರೆ.

ಓದಿ: ಮಂಗಳೂರು: ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಚಾಲನೆ

ಮಂಗಳೂರು ಕಂಬಳದಲ್ಲಿ ನಿಶಾಂತ್ ಶೆಟ್ಟಿಯವರದ್ದು ಚೊಚ್ಚಲ ದಾಖಲೆಯಾದರೆ, ಈ ವರ್ಷದಲ್ಲಿ ಈವರೆಗೆ ನಡೆದ ಕಂಬಳದಲ್ಲಿ ಎರಡನೇ ಅಗ್ರ ದಾಖಲೆಯಾಗಿದೆ. ಮೊದಲ ಅಗ್ರ ದಾಖಲೆಯನ್ನು ಬೈಂದೂರಿನ ವಿಶ್ವನಾಥ್ ದೇವಾಡಿಗ ಇತ್ತೀಚೆಗೆ ನಡೆದ ಐಕಳ ಕಂಬಳದಲ್ಲಿ 9.15 ಸೆಕೆಂಡ್ಸ್​​ನಲ್ಲಿ ಕೋಣಗಳನ್ನು ಓಡಿಸಿ ನಿರ್ಮಿಸಿದ್ದಾರೆ. ಅವರ ಈ ದಾಖಲೆಯನ್ನು ಈವರೆಗೆ ಯಾರೂ ಮುರಿದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.