ETV Bharat / state

NIA Raid: ಪಿಎಫ್​ಐ ಸಂಚು ಪ್ರಕರಣ; ದಕ್ಷಿಣಕನ್ನಡ ಜಿಲ್ಲೆಯ 3 ಕಡೆ ಎನ್ಐಎ ದಾಳಿ - ಐದು ರಾಜ್ಯಗಳಲ್ಲಿ ಎನ್​ಐಎ ಶೋಧ ಕಾರ್ಯ

NIA Raid: ಪಿಎಫ್​ಐ ಸಂಚು ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

NIA raids at three places in Dakshina Kannada district
ದಕ್ಷಿಣಕನ್ನಡ ಜಿಲ್ಲೆಯ ಮೂರು ಕಡೆ ಎನ್ಐಎ ದಾಳಿ : ಮಹತ್ವದ ದಾಖಲೆಗಳಿಗೆ ಶೋಧ
author img

By

Published : Aug 13, 2023, 9:38 PM IST

Updated : Aug 13, 2023, 10:39 PM IST

ಬಂಟ್ವಾಳ (ದಕ್ಷಿಣಕನ್ನಡ) : ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾ (ಪಿಎಫ್​ಐ) ಸಂಚು ಪ್ರಕರಣ ಸಂಬಂಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್​ಐಎ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ವಿವಿಧ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನ ಮೆಲ್ಕಾರ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿಯ ವ್ಯಕ್ತಿಯೊಬ್ಬರ ಮನೆ ದಾಳಿ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳಿಗಾಗಿ ಶೋಧಿಸಿದ್ದಾರೆ. ಆರೋಪಿ ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದರು. ಇವರ ಮನೆಯಿಂದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಪಿಎಫ್ಐ ಸಂಘಟನೆಯ ಫಂಡಿಂಗ್ ನೆಟ್​ವರ್ಕ್ ಅ​ನ್ನು ಎನ್ಐಎ ಬೇಧಿಸಿತ್ತು. ಬಂಧಿತರ ವಿಚಾರಣೆಯಲ್ಲಿ ಬಂಟ್ವಾಳದ ಹೆಸರು ಕೇಳಿಬಂದಿತ್ತು. ಪಿಎಫ್ಐ ಫಂಡಿಂಗ್ ನೆಟ್​ವರ್ಕ್​ಗೆ ಇವರಿಗೂ ಸಂಬಂಧ ಇದೆ ಎಂದು ಗೊತ್ತಾಗಿತ್ತು. ಹೀಗಾಗಿ, ಮನೆ ಮೇಲೆ ಎನ್​ಐಎ ದಾಳಿ ನಡೆಸಿತ್ತು. ಮಂಗಳೂರು ನಗರದ ಹೊರವಲಯದಲ್ಲಿನ ವಳಚ್ಚಿಲ್​ ನಿವಾಸಿ ಮುಸ್ತಾಕ್ ಎಂಬವರ ಮನೆ ಮೇಲೂ ಎನ್ಐಎ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಐದು ರಾಜ್ಯಗಳಲ್ಲಿ ಎನ್​ಐಎ ಶೋಧ : ಎನ್​ಐಎ ಇಂದು 5 ರಾಜ್ಯಗಳ ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ದಾಳಿ ನಡೆದಿದೆ. ಕಣ್ಣೂರು, ಮಲಪ್ಪುರಂ, ದಕ್ಷಿಣ ಕನ್ನಡ, ನಾಸಿಕ್, ಕೊಲ್ಲಾಪುರ, ಮುರ್ಷಿದಾಬಾದ್ ಮತ್ತು ಕತಿಹಾರ್ ಜಿಲ್ಲೆಗಳಲ್ಲಿ ಶೋಧ ನಡೆದಿದೆ. ಈ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಪಿಎಫ್ಐ ಸಂಘಟನೆ ತನ್ನ ಕಾರ್ಯಕರ್ತರಿಗೆ ತರಬೇತಿ ನೀಡಲು ದೇಶದ ವಿವಿಧ ರಾಜ್ಯಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿತ್ತು. ಇದಕ್ಕೆ ಕೆಲ ಮಧ್ಯಮ ಮಟ್ಟದ ಪಿಎಫ್ಐ ಏಜೆಂಟ್​ಗಳು ಮಾಸ್ಟರ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಎನ್ಐಎ ಶಂಕಿಸಿದೆ.

ಎನ್​ಐಎ ಪ್ರಕಟಣೆ : ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಎನ್​ಐಎ, ಜನರಲ್ಲಿ ಕೋಮು ಭಾವನೆಯನ್ನು ಬಿತ್ತುವ ಮತ್ತು ಸಮಾಜದಲ್ಲಿ ಶಾಂತಿ ಕದಡುವ ಮೂಲಕ ದೇಶವನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್​ ಆಫ್​ ಇಂಡಿಯಾ ತೊಡಗಿದೆ. ಈ ಸಂಚನ್ನು ವಿಫಲಗೊಳಿಸುವ ಸಲುವಾಗಿ ರಾಜ್ಯದ ವಿವಿಧೆಡೆ ಎನ್​ಐಎ ದಾಳಿ ನಡೆಸಿದೆ. ಪಿಎಫ್​ಐ ಸಂಚು ಪ್ರಕರಣ ಸಂಬಂಧ ಎನ್​ಐಎ ಒಟ್ಟು ಐದು ರಾಜ್ಯಗಳ 14 ಕಡೆಗಳಲ್ಲಿ ಶೋಧ ನಡೆಸಿದೆ. ಡಿಜಿಟಲ್ ಸಾಧನಗಳು ಮತ್ತು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ಎನ್​ಐಎ ನಿಷೇಧಿತ ಪಿಎಫ್​ಐ ಸಂಘಟನೆಯ ಪಿತೂರಿಯನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ. ಅಲ್ಲದೆ ಪಿಎಫ್​ಐ ಯುವಕರ ಸಶಸ್ತ್ರ ಪಡೆಯನ್ನು ನಿರ್ಮಾಣ ಮಾಡಿ, ಭಾರತ ವಿರೋಧಿ ಚಟುವಟಿಕೆಯಲ್ಲಿ ನಡೆಸಲು ಮುಂದಾಗಿದೆ. ಈ ಸಂಚನ್ನು ವಿಫಲಗೊಳಿಸಲು ಎನ್​ಐಎ ಮುಂದಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಐಎಸ್​ಡಿ-ಎನ್​ಐಎ ಭರ್ಜರಿ ಕಾರ್ಯಾಚರಣೆ.. ಅಲ್ ಖೈದಾ ಜೊತೆ ನಂಟು, ಬೆಂಗಳೂರಿನಲ್ಲಿ ಶಂಕಿತ ಅರೆಸ್ಟ್​

Last Updated : Aug 13, 2023, 10:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.