ETV Bharat / state

ಮತದಾರ ಪ್ರಭುವಿನ ಎದುರು ಹುಲಿಯೂ ಇಲ್ಲ, ಬಂಡೆಯೂ ಇಲ್ಲ : ಕಟೀಲ್ ಹೇಳಿಕೆ - ಉಪಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ ಮುನ್ನಡೆ

ಕಾಂಗ್ರೆಸ್ ಜಾತಿ ಹಾಗೂ ಗೂಂಡಾಗಿರಿ ರಾಜಕಾರಣವನ್ನು ಮಾಡುತ್ತಿದೆ. ಯಾವಾಗಲೂ ಅವರು ಸೋಲುತ್ತೇವೆ ಎನ್ನುವಾಗ ಇಂತಹ ತಂತ್ರಗಾರಿಕೆ ಮಾಡುತ್ತಾರೆ. ಅಭಿವೃದ್ಧಿ ಮುಂದೆ ಯಾವ ಜಾತಿಯೂ ಇಲ್ಲ, ಗೂಂಡಾಗಿರಿಯೂ ನಡೆಯೋದಿಲ್ಲ. ಇನ್ನು‌ಮುಂದೆ ಇದನ್ನು ಸಹಿಸೋದಿಲ್ಲ ಎಂದು ಜನರು ಉತ್ತರ ಕೊಟ್ಟಿದ್ದಾರೆ..

nalin-kumar-katil-talk-about-by-election-issue
ಮತದಾರ ಪ್ರಭುವಿನ ಎದುರು ಹುಲಿಯೂ ಇಲ್ಲ, ಬಂಡೆಯೂ ಇಲ್ಲ: ಕಟೀಲ್ ಹೇಳಿಕೆ
author img

By

Published : Nov 10, 2020, 3:43 PM IST

ಮಂಗಳೂರು : ಮತದಾರ ಪ್ರಭುವಿನ ಎದುರು ಹುಲಿಯೂ ಇಲ್ಲ, ಬಂಡೆಯೂ ಇಲ್ಲ. ಜನತಾ ಜನಾರ್ದನನ ಎದುರು ಅಹಂಕಾರ ನಡೆಯೋದಿಲ್ಲ. ಶಿರಾ ಹಾಗೂ ಆರ್​​ಆರ್‌ನಗರದ ಜನರು ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮತದಾರ ಪ್ರಭುವಿನ ಎದುರು ಹುಲಿಯೂ ಇಲ್ಲ, ಬಂಡೆಯೂ ಇಲ್ಲ : ಕಟೀಲ್ ಹೇಳಿಕೆ

ಉಪಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಹಿನ್ನೆಲೆ ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ನಡೆದ ವಿಜಯೋತ್ಸವದಲ್ಲಿ‌ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಉಪಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಅತೀ ಹೆಚ್ಚು ಬಹುಮತದಿಂದ ಬಿಜೆಪಿ ಗೆಲ್ಲುವ ಲಕ್ಷಣ ಗೋಚರಿಸುತ್ತಿದೆ. ಆರ್​​ಆರ್ ನಗರದಲ್ಲಿ ಅತೀ ಹೆಚ್ಚು ಅಂತರದಿಂದ ಗೆಲ್ಲಲಿದ್ದೇವೆ.

ಶಿರಾದಲ್ಲಿ‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸುತ್ತಿದೆ. ಈ ಮೂಲಕ ಕಾಂಗ್ರೆಸ್​​ನ ಭದ್ರ ಕೋಟೆಯನ್ನು ಒಡೆಯುವಂತಹ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ‌. ಎಲ್ಲರೂ ಒಟ್ಟಾಗಿ ಕೆಲಸ ಮಾಡಿರುವುದರಿಂದ ಈ ಗೆಲುವು ಸಾಧ್ಯವಾಯಿತು ಎಂದು ಹೇಳಿದರು.

ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯವನ್ನು ಜನ ಒಪ್ಪಿದ್ದಾರೆ. ನಮ್ಮ ಸರ್ಕಾರದ ಸಾಧನೆಗಳನ್ನು ಜನ ಒಪ್ಪಿದ್ದಾರೆ. ಈ ಮೂಲಕ ಕಾಂಗ್ರೆಸ್​​ ಅನ್ನು ಜನ ತಿರಸ್ಕರಿಸಿದ್ದಾರೆ. ಕಳೆದ ಚುನಾವಣೆ ಸಂದರ್ಭ ಕಾಂಗ್ರೆಸ್ ನಾಯಕರು ಹತ್ತಾರು ಟೀಕೆಗಳನ್ನು ಮಾಡಿದ್ದರು. ಸಿಎಂ ಬಗ್ಗೆ ಮಾಜಿ ಮುಖ್ಯಮಂತ್ರಿಯೋರ್ವರು ಅಗೌರವವಾಗಿ ಮಾತನಾಡಿದ್ದರು. ಕಾಂಗ್ರೆಸ್‌ನವರು ನಾನೇ ಬಂಡೆ, ಹುಲಿಯಾ ಎಂಬ ಶಬ್ದಗಳನ್ನು ಅವರೇ ನಾಮಕರಣ ಮಾಡಿದ್ದರು. ಈಗ ಬಂಡೆಯೂ ಇಲ್ಲ, ಹುಲಿಯೂ ಇಲ್ಲ ಎಂದು ನಳಿನ್ ಹೇಳಿದರು.

ನಾಲ್ಕು ವಿಧಾನ ಪರಿಷತ್ ಚುನಾವಣಾ ಮತ ಎಣಿಕೆ ನಡೆಯುತ್ತಿದೆ. ಅದರಲ್ಲಿಯೂ ಬಿಜೆಪಿ ಪಕ್ಷ ಗೆಲ್ಲುತ್ತದೆ. ಮುಂದಿನ‌ ಎರಡು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ನಡೆಯಲಿದ್ದು, ಅದರಲ್ಲೂ ಬಿಜೆಪಿ ಗೆಲುವು ಸಾಧಿಸುತ್ತದೆ. ಇಂದು ಮತ ಎಣಿಕೆ ನಡೆಯುತ್ತಿರುವ ಮಧ್ಯಪ್ರದೇಶ, ಬಿಹಾರ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಜನರಿಗೆ ನರೇಂದ್ರ ಮೋದಿ ಸರ್ಕಾರದ ಆಡಳಿತ ಬೇಕು. ದೇಶ ಉಳಿಯಬೇಕಾದರೆ ಬೆಜೆಪಿ ಬೇಕು. ಈ ದೇಶದ ಉಳಿವು, ರಕ್ಷೆ ನರೇಂದ್ರ ಮೋದಿಯವರಿಂದ ಸಾಧ್ಯ. ಹಾಗಾಗಿ, ಜನರು ಪ್ರೀತಿಗೆ ಗೌರವ ಕೊಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಾತಿ ಹಾಗೂ ಗೂಂಡಾಗಿರಿ ರಾಜಕಾರಣವನ್ನು ಮಾಡುತ್ತಿದೆ. ಯಾವಾಗಲೂ ಅವರು ಸೋಲುತ್ತೇವೆ ಎನ್ನುವಾಗ ಇಂತಹ ತಂತ್ರಗಾರಿಕೆ ಮಾಡುತ್ತಾರೆ. ಅಭಿವೃದ್ಧಿ ಮುಂದೆ ಯಾವ ಜಾತಿಯೂ ಇಲ್ಲ, ಗೂಂಡಾಗಿರಿಯೂ ನಡೆಯೋದಿಲ್ಲ. ಇನ್ನು‌ಮುಂದೆ ಇದನ್ನು ಸಹಿಸೋದಿಲ್ಲ ಎಂದು ಜನರು ಉತ್ತರ ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ತಾವೇ ದೊಡ್ಡ ಲೀಡರ್, ದೊಡ್ಡ ಬಂಡೆ, ಕಲ್ಲು, ಟ್ರಬಲ್‌ ಶೂಟರ್ ಎಂದು ಪ್ರಚಾರ ಗಿಟ್ಟಿಸುತ್ತಿದ್ದರು.

ಜನರ ಎದುರು ಯಾವ ಟ್ರಬಲ್ ಶೂಟರ್, ಯಾವ ಬಂಡೆಯೂ ಇಲ್ಲ. ನಾವು ಮಾಸ್ ಲೀಡರ್ ಬಂಡೆ, ಹುಲಿಯಾ, ಸಿಂಹ ಎಂದು ಹೇಳಿಕೊಂಡಿಲ್ಲ. ನಾವು ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಕೊಟ್ಟ‌ ಜವಾಬ್ದಾರಿಯಂತೆ ಮತಗಟ್ಟೆಯ ಕಾರ್ಯವನ್ನು ಮಾಡಿದ್ದೇವೆ. ಜೊತೆಗೆ ಮತದಾರರ ಒಲವನ್ನು ಪಡೆದಿದ್ದೇವೆ. ಇದರಿಂದ ಜಯ ಗಳಿಸಿದ್ದೇವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.